- ಮೂತ್ರಪಿಂಡದ ಕೊರತೆ: ಕರ್ನಾಟಕದ (Increased demand for kidneys) ಆರೋಗ್ಯ ವ್ಯವಸ್ಥೆಗೆ ಸವಾಲು
- ಕಿಡ್ನಿ ಕಸಿಗಾಗಿ ಕಾಯುತ್ತಿರುವ 4,000ಕ್ಕೂ ಹೆಚ್ಚು ರೋಗಿಗಳು
- ಕುಟುಂಬಸ್ಥರಲ್ಲದ ದಾನಿಗಳ HLA ಹೊಂದಾಣಿಕೆ ಸಂಪೂರ್ಣವಾಗಿ ಸಾಧ್ಯವಿಲ್ಲ, ಇದರಿಂದ ಕಸಿಗೆ ಲಭ್ಯತೆ ಮತ್ತಷ್ಟು ಕಡಿಮೆ
Bengaluru: ಕರ್ನಾಟಕದಲ್ಲಿ ಮೂತ್ರಪಿಂಡದ ಬೇಡಿಕೆ ಭಾರಿ ಪ್ರಮಾಣದಲ್ಲಿ (Increased demand for kidneys) ಹೆಚ್ಚಾಗಿ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳಿಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡಿದೆ.
ಹೊಸ ವರದಿಗಳ ಪ್ರಕಾರ, ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಜನರು ಮೂತ್ರಪಿಂಡದ ಕಸಿಗಾಗಿ ಕಾಯುತ್ತಿದ್ದಾರೆ.
ತಜ್ಞ ವೈದ್ಯರು ಸಾಂಕ್ರಾಮಿಕವಲ್ಲದ ಕಾಯಿಲೆಗಳ (NCDs) ಹೆಚ್ಚಳವನ್ನು ದೀರ್ಘಕಾಲದ ಮೂತ್ರಪಿಂಡ ಸಮಸ್ಯೆಗಳ ಪ್ರಮುಖ ಕಾರಣವೆಂದು ಹೇಳಿದ್ದಾರೆ.

ಮೂತ್ರಪಿಂಡದ ಲಭ್ಯತೆ ಕಡಿಮೆಯಾಗಿರುವುದು ಮತ್ತು ದಾನಿಗಳ ಹೊಂದಾಣಿಕೆ ಸಮಸ್ಯೆಗಳು (Increased demand for kidneys) ಈ ಸಂದರ್ಭದಲ್ಲಿ ಪ್ರಮುಖ ಅಡೆತಡೆಗಳಾಗಿ ಪರಿಣಮಿಸುತ್ತಿವೆ. ಅನೇಕ ರೋಗಿಗಳು ಕಸಿಗಾಗಿ ಎರಡರಿಂದ ಮೂರು ವರ್ಷಗಳಷ್ಟು ಕಾಯಬೇಕಾಗುತ್ತಿದೆ.
ಇನ್ನು 2025ರಲ್ಲಿ ಮಾತ್ರ, ಸುಮಾರು 300 ಮೂತ್ರಪಿಂಡ ಕಸಿಗಳು ಯಶಸ್ವಿಯಾಗಿ ನೆರವೇರಿಸಿವೆ. ಆದರೂ, ಬೇಡಿಕೆ ಅತ್ಯಂತ ಹೆಚ್ಚು ಇರುವುದರಿಂದ ಇನ್ನೂ ಅನೇಕ ಜನರಿಗೆ ಕಿಡ್ನಿ ಲಭ್ಯವಾಗಿಲ್ಲ.
ಇತರ ಅಂಗಗಳಿಗಾಗಿ ಕಾಯುತ್ತಿರುವ ನೋಂದಾಯಿತ ರೋಗಿಗಳ ಸಂಖ್ಯೆ ಕಡಿಮೆ ಇದೆ. ಉದಾಹರಣೆಗೆ, ಯಕೃತ್ತುಗಾಗಿ 698, ಹೃದಯಕ್ಕಾಗಿ 118 ಮತ್ತು ಶ್ವಾಸಕೋಶಕ್ಕಾಗಿ 44 ಮಂದಿ ಕಾಯುತ್ತಿದ್ದಾರೆ.
ಈ ವರ್ಷ ಸುಮಾರು 150 ಮೂತ್ರಪಿಂಡಗಳು ದಾನಗೊಂಡಿದ್ದು, ಸುಮಾರು 300 ಜನರಿಗೆ ಉಪಯೋಗವಾಗಿದ್ದು, ಬೇಡಿಕೆ-ಪೂರೈಕೆ ಅಂತರ ಬಹಳವೇ ಹೆಚ್ಚಾಗಿದೆ. ಇನ್ನು ಕೆಲ ವರದಿ ಪ್ರಕಾರ, ಕಿಡ್ನಿ (Kidney) ಕಸಿಗಾಗಿ ಕಾಯುವ ಸಮಯ ಈಗ ಎರಡು ರಿಂದ ಮೂರು ವರ್ಷಗಳಾಗಿದೆ.
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳವು ಕಿಡ್ನಿ ಸ್ವೀಕರಿಸುವ ರೋಗಿಗಳು ಮತ್ತು ದಾನಿಗಳ ಮೇಲೆ ಪರಿಣಾಮ ಬೀರಿದೆ.
ಕರ್ನಾಟಕ ಅಂಗಾಂಗ ಅಂಗಾಂಶ ಮತ್ತು ಕಸಿಕರಣ ಸಂಸ್ಥೆಯ ಯೋಜನಾ ಅಧಿಕಾರಿ ಡಾ. ಡಿ.ಪಿ. ಅರುಣ್ ಕುಮಾರ್ (Dr.D.P.Arun Kumar) ತಿಳಿಸಿದ್ದಾರೆ, ನಿಯಂತ್ರಣದಲ್ಲಿಲ್ಲದ ಮಧುಮೇಹ ಅಥವಾ ರಕ್ತದೊತ್ತಡ ಇರುವವರು ಅಥವಾ ತಮ್ಮ ಮೂತ್ರಪಿಂಡದಲ್ಲಿ ಸಮಸ್ಯೆ ಇರುವವರು ದಾನಿಯಾಗಿ ಪರಿಗಣಿಸಲ್ಪಡುವುದಿಲ್ಲ.
ಇದು ಲಭ್ಯ ದಾನಿಗಳ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡುತ್ತಿದೆ. ಏಕೆಂದರೆ ವಿಶೇಷವಾಗಿ ದಾನಿ ಕುಟುಂಬಸ್ಥನಲ್ಲದಿದ್ದರೆ ಹೆಚ್ಚುವರಿ ಜಟಿಲತೆ HLA (ಹ್ಯೂಮನ್ ಲ್ಯುಕೋಸೈಟ್ ಆ್ಯಂಟಿಜೆನ್) ಮತ್ತು ರಕ್ತ ಗುಂಪು ಹೊಂದಾಣಿಕೆಯನ್ನು ಖಚಿತಪಡಿಸುವ ಅಗತ್ಯವಿರುತ್ತದೆ.
ರಾಜ್ಯದ ಆರೋಗ್ಯ ಇಲಾಖೆಯು ಕಿಡ್ನಿ ಹಂಚಿಕೆಗೆ ಆದ್ಯತಾ ವ್ಯವಸ್ಥೆಯನ್ನು ಸ್ಥಾಪಿಸಿದೆ. ರೋಗಿಗಳ ಸ್ಥಿತಿಯ ತೀವ್ರತೆಯ ಆಧಾರದ ಮೇಲೆ ಕಿಡ್ನಿ ನೀಡಲಾಗುತ್ತದೆ.
ಗಂಭೀರ ಸ್ಥಿತಿಯ ರೋಗಿಗಳು ಮತ್ತು ದೀರ್ಘಕಾಲದ ಕಾಯಿಲೆ ಹೊಂದಿರುವವರು ಮೊದಲ ಆದ್ಯತೆಯನ್ನು ಪಡೆಯುತ್ತಾರೆ.
ಡಯಾಲಿಸಿಸ್ ಮೂಲಕ ರೋಗಿಗಳನ್ನು ತಾತ್ಕಾಲಿಕವಾಗಿ ಉಳಿಸಬಹುದು, ಆದ್ದರಿಂದ ಕಸಿಯನ್ನು ಹಂಚಿಕೆಗೆ ಹಿರಿತನ ಕ್ರಮ ಪಾಲಿಸಲಾಗುತ್ತದೆ.
ಆದರೂ, ನಿತ್ಯ ಹೆಚ್ಚುತ್ತಿರುವ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಪರಿಣಾಮದಿಂದ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಾಗಿದೆ.
ಇದನ್ನು ಓದಿ : https://vijayatimes.com/us-airstrike-on-isis-terrorist-bases/