ಕರ್ನಾಟಕದಲ್ಲಿ ಹೆಚ್ಚಿದ (Increased heat in Karnataka) ಬಿಸಿಲಿನ ದಾಹ: ಜನಜೀವನ ಅಸ್ತವ್ಯಸ್ತ
40 ಡಿಗ್ರಿ ದಾಟಿದ ತಾಪಮಾನ, ನೀರಿನ ಅಭಾವದಿಂದ ಪ್ರಾಣಿ-ಪಕ್ಷಿಗಳಿಗೂ ತೀವ್ರ ತೊಂದರೆ
ಕೃಷಿ, ಮೀನುಗಾರಿಕೆ, ಕುಕ್ಕುಟೋದ್ಯಮ ಎಲ್ಲವೂ ಸಂಕಷ್ಟದಲ್ಲಿ
Bengaluru: ಕರ್ನಾಟಕ ರಾಜ್ಯದಲ್ಲಿ ದಿನೇದಿನೇ ಉಷ್ಣತೆಯ (Increased heat in Karnataka) ತೀವ್ರತೆ ಹೆಚ್ಚುತ್ತಿದ್ದು, ಬಿಸಿಲಿನ ಕಾಟ ಜನಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ.
ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ (Degrees Celsius) ಮೀರಿದ್ದು, ಜನರು ದಿನನಿತ್ಯದ ಚಟುವಟಿಕೆಗಳನ್ನು ನಡೆಸುವುದೇ ಕಷ್ಟವಾಗುತ್ತಿದೆ.
ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳು ಹಾಗೂ ಜಲಚರಗಳು ಕೂಡ ಈ ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿವೆ. ಕುಡಿಯುವ ನೀರಿನ ಕೊರತೆ ಅನೇಕ ಪ್ರದೇಶಗಳಲ್ಲಿ ತೀವ್ರವಾಗಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹಣ್ಣು ರಸ, ಎಳನೀರು ಹಾಗೂ ನೆರಳಿನ ಆಶ್ರಯವೇ ಜನರಿಗೆ ತಾತ್ಕಾಲಿಕ ರಕ್ಷೆಯಾಗಿದ್ದು, ಮುಂದಿನ ದಿನಗಳಲ್ಲಿ (Increased heat in Karnataka) ಮಳೆಯಿಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ವ್ಯಕ್ತವಾಗುತ್ತಿದೆ.
ರಾಜ್ಯದ ಪ್ರಮುಖ ಮೊಟ್ಟೆ ಮತ್ತು ಕೋಳಿ ಉತ್ಪಾದನಾ ಕೇಂದ್ರಗಳಲ್ಲಿ ಒಂದಾದ ಕೊಪ್ಪಳ ಜಿಲ್ಲೆಯಲ್ಲಿ ಕುಕ್ಕುಟೋದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ.
ಹೆಚ್ಚುತ್ತಿರುವ ತಾಪಮಾನವನ್ನು ತಾಳಲಾರದೆ ಹಲವಾರು ಕೋಳಿಗಳು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಫಾರ್ಮ್ ಮಾಲೀಕರು ಕೋಳಿಗಳನ್ನು ರಕ್ಷಿಸಲು
ಸ್ಪ್ರಿಂಕ್ಲರ್ (Sprinkler) ಮತ್ತು ಫಾಗರ್‌ಗಳನ್ನು (Foger) ಅಳವಡಿಸಿ ತಂಪು ವಾತಾವರಣ ನಿರ್ಮಿಸಲು ಯತ್ನಿಸುತ್ತಿದ್ದಾರೆ. ಆದರೂ ಬಿಸಿಲಿನ ತೀವ್ರತೆಗೆ ಈ ಕ್ರಮಗಳು ಸಾಕಾಗುತ್ತಿಲ್ಲ.
ಇದರಿಂದ ಉತ್ಪಾದನೆ ಕುಸಿತಗೊಂಡಿದ್ದು, ರೈತರು ಹಾಗೂ ಉದ್ಯಮಿಗಳಿಗೆ ಭಾರೀ ನಷ್ಟ ಉಂಟಾಗಿದೆ. ಮುಂದುವರಿದರೆ ಈ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಲ್ಲಿ ಜಲಮೂಲಗಳ ಕೊರತೆ ಮತ್ತು ನೀರಿನ ಗುಣಮಟ್ಟ ಕುಸಿತದಿಂದ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವ
ದುಸ್ಥಿತಿ ಕಂಡುಬರುತ್ತಿದೆ. ನೀರಿನ ಮಟ್ಟ ಕುಸಿತಗೊಂಡಿರುವುದರಿಂದ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಮೀನುಗಳು ಬದುಕಲು ಸಾಧ್ಯವಾಗುತ್ತಿಲ್ಲ.
ಕೆರೆಯಾದ್ಯಂತ ಸತ್ತು ತೇಲುತ್ತಿರುವ ಮೀನುಗಳ ದೃಶ್ಯಗಳು ಮನಕಲಕುವಂತಿದ್ದು, ಮೀನುಗಾರರು ಆರ್ಥಿಕವಾಗಿ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ.
ಈ ಪರಿಸ್ಥಿತಿ ಮುಂದುವರಿದರೆ ಮೀನುಗಾರಿಕೆ ಕ್ಷೇತ್ರಕ್ಕೂ ದೊಡ್ಡ ನಷ್ಟ ಸಂಭವಿಸುವ ಸಾಧ್ಯತೆ ಇದೆ.
ಬಳ್ಳಾರಿ ಜಿಲ್ಲೆಯಲ್ಲಿಯೂ ಬಿಸಿಲಿನ ತೀವ್ರತೆ ಹೆಚ್ಚಿದ್ದು, ವಾಹನ ಸವಾರರ ಅನುಕೂಲಕ್ಕಾಗಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ (Traffic Signal) ಹಸಿರು ಮ್ಯಾಟ್‌ಗಳನ್ನು ಅಳವಡಿಸಲಾಗಿದೆ.
ಆದರೆ ಕಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಅಗತ್ಯ ನೆರಳು ಅಥವಾ ಸೌಲಭ್ಯ ಒದಗಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮತ್ತೊಂದೆಡೆ, ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಆಸ್ಪತ್ರೆಯಲ್ಲಿಯೂ
ನೀರಿನ ಅಭಾವ ಕಾಣಿಸಿಕೊಂಡಿದ್ದು, ರೋಗಿಗಳು ಹಾಗೂ ಅವರ ಕುಟುಂಬಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಗಳು ಸರ್ಕಾರದ ತುರ್ತು ಗಮನಕ್ಕೆ ಬರಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ತೀವ್ರ ಬಿಸಿಲಿನ ಪರಿಸ್ಥಿತಿಯಲ್ಲಿ ಆರೋಗ್ಯ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಮಧ್ಯಾಹ್ನ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗದಂತೆ ಸಲಹೆ ನೀಡಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದು, ಹಗುರವಾದ ಆಹಾರ ತೆಗೆದುಕೊಳ್ಳುವುದು ಮತ್ತು ನೆರಳಿನಲ್ಲೇ ಹೆಚ್ಚು ಕಾಲ ಕಳೆದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಎಂದು ತಿಳಿಸಿದ್ದಾರೆ. ಸರ್ಕಾರವೂ ತಕ್ಷಣ ಕ್ರಮ ಕೈಗೊಂಡು ನೀರಿನ ಸರಬರಾಜು, ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ.
ಮಳೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮಗಳು ಅತೀ ಅವಶ್ಯಕವಾಗಿದೆ.
ಇದನ್ನು ಓದಿ : https://vijayatimes.com/israel-attacks-lebanon-2/