- ಎಲೆಕ್ಟ್ರಿಕ್ ಬಸ್ಸುಗಳು ಕಾಗದದಲ್ಲಿ ಹಸಿರು, ರಸ್ತೆಯಲ್ಲಿ ಕೆಂಪು
- ಎಲೆಕ್ಟ್ರಿಕ್ ಬಸ್‌ಗಳಲ್ಲಿ ಹೆಚ್ಚುತ್ತಿರುವ ಬ್ರೇಕ್‌ಡೌನ್: ಪ್ರಯಾಣಿಕರ ವಿಶ್ವಾಸ ಕುಸಿತ
- ಬೆಂಗಳೂರಿಗರಲ್ಲಿ ನಿರಾಶೆ ಹೆಚ್ಚಿಸುತ್ತಿರುವ ಹಸಿರು ಬಸ್ ಗಳ ವೈಫಲ್ಯಗಳು
Bengaluru: ಬೆಂಗಳೂರು ನಗರವು ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆಯಿಂದ ಉಸಿರುಗಟ್ಟುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತರಲು BMTC ಎಲೆಕ್ಟ್ರಿಕ್ ಬಸ್‌ಗಳನ್ನು(Electric bus) ರಸ್ತೆಗೆ ಇಳಿಸಿದೆ.
ಈ ಬಸ್‌ಗಳು ಮಾಲಿನ್ಯ ಕಡಿಮೆ ಮಾಡುವ ಭರವಸೆ ನೀಡಿದರೂ, ನೆಲಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಪ್ರಯಾಣಿಕರನ್ನು ನಿರಾಶೆಗೊಳಿಸುತ್ತಿವೆ.
2024–25ರಲ್ಲಿ BMTC ಒಟ್ಟು 645 ಬ್ರೇಕ್‌ಡೌನ್‌ಗಳನ್ನು ದಾಖಲಿಸಿದ್ದು, ಅದರಲ್ಲಿ 577 ಎಲೆಕ್ಟ್ರಿಕ್ ಬಸ್‌ಗಳೇ ಸೇರಿವೆ.
ಅಂದರೆ ಡೀಸೆಲ್ ಬಸ್‌ಗಳಿಗೆ(Diesel bus) ಹೋಲಿಸಿದರೆ ಎಲೆಕ್ಟ್ರಿಕ್ ಬಸ್‌ಗಳಲ್ಲಿ 36 ಪಟ್ಟು ಹೆಚ್ಚು ವೈಫಲ್ಯಗಳು ಕೂಡ ಹೆಚ್ಚು. ಒಟ್ಟಾರೆ ಬ್ರೇಕ್‌ಡೌನ್‌ಗಳ 90% ಪಾಲು ಎಲೆಕ್ಟ್ರಿಕ್ ಬಸ್‌ಗಳದ್ದು ಎಂಬುದು ಗಮನಾರ್ಹ.

ಇನ್ನು ಪ್ರಯಾಣಿಕರ ದೃಷ್ಟಿಯಿಂದ ಇದು ದೊಡ್ಡ ಸಮಸ್ಯೆ. ಬಸ್ ಮಧ್ಯ ರಸ್ತೆಯಲ್ಲಿ ನಿಂತುಹೋಗಿದರೆ ಟ್ರಾಫಿಕ್ ಜಾಮ್(Traffic jam), ಸಮಯ ವ್ಯರ್ಥ ಹಾಗೂ ಪ್ರಯಾಣಿಕರ ವಿಶ್ವಾಸದಲ್ಲಿ ಕುಸಿತ ಕಂಡಿದೆ.
ವೈಫಲ್ಯದ ಪ್ರಮುಖ ಕಾರಣಗಳು
BMTC ಅಧಿಕಾರಿಗಳ ಪ್ರಕಾರ:
- ಮಳೆಯ ಸಮಯದಲ್ಲಿ ಬ್ಯಾಟರಿ(Battery) ಹಾಗೂ ಎಲೆಕ್ಟ್ರಿಕಲ್ ದೋಷಗಳು(Electrical faults)
- ಹೊಂಡಗಳು ತುಂಬಿರುವ ರಸ್ತೆ ಪರಿಸ್ಥಿತಿ
- ಕಾಂಟ್ರಾಕ್ಟ್ ಆಧಾರಿತ ಮೆಂಟೆನನ್ಸ್ ಹಾಗಾಗಿ BMTCಗೆ ನೇರ ನಿಯಂತ್ರಣ ಇಲ್ಲ
- ಮೂಲ ಸ್ಪೇರ್ ಪಾರ್ಟ್ಸ್ ಕೊರತೆ, ಕಳಪೆ ಪಾರ್ಟ್ಸ್ ಬಳಕೆ
- ಚಾಲಕರಿಗೆ ತೊಂದರೆ ಉಂಟುಮಾಡುವ ಫಾಲ್ಟಿ ಸಸ್ಪೆನ್ಶನ್
ಇವುಗಳ ಪರಿಣಾಮವಾಗಿ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಒಂದು ಸವಾಲಾಗಿ ಪರಿಣಮಿಸಿದೆ. ಇನ್ನು ಈ ಆರ್ಥಿಕ ವರ್ಷದಲ್ಲಿ ಈಗಾಗಲೇ 18 ಅಪಘಾತಗಳು, ಅದರಲ್ಲಿ 6 ಸಾ*ಗಳು ವರದಿಯಾಗಿವೆ.
ಜುಲೈ ತಿಂಗಳಲ್ಲೇ ಮೂರು ಸಾವಿನ ಪ್ರಕರಣಗಳು ನಡೆದವು. ಹೆಚ್ಚಿನ ಚಾಲಕರು ಸರಕು ವಾಹನಗಳಿಂದ ಬಂದವರಾಗಿದ್ದು, ಅವರಿಗೆ BMTC ಬಸ್ ಚಾಲನೆಗೆ ತಕ್ಕಷ್ಟು ತರಬೇತಿ(Training) ನೀಡಲಾಗಿಲ್ಲ.
ವೇತನ ವ್ಯತ್ಯಾಸದಿಂದ ಚಾಲಕರ ಅಸಮಾಧಾನ, ವೇಗವಾಗಿ ವಾಹನ ಹಾಯಿಸುವ ಅಭ್ಯಾಸ, ತರಬೇತಿ ಕೊರತೆ—ಇವೆಲ್ಲವು ಅಪಘಾತಗಳಿಗೆ ಮೂಲ ಕಾರಣವಾಗಿವೆ.
BMTC ಈಗ ನಿವೃತ್ತ ಚಾಲಕರ ಮೂಲಕ ಹೊಸ ಚಾಲಕರಿಗೆ ತರಬೇತಿ ನೀಡಲು ಆರಂಭಿಸಿದರೂ, ವ್ಯವಸ್ಥಾತ್ಮಕ ಬದಲಾವಣೆ ಅಗತ್ಯ.
ಕಳೆದಬಾರಿ KR ಸರ್ಕಲ್‌ನಲ್ಲಿ ಮಳೆಯ ದಿನ ಬಸ್ ಬ್ರೇಕ್‌ಫೇಲ್(Bus brake failure) ಆದ ಘಟನೆ ಒಂದು ಎಚ್ಚರಿಕೆ ಗಂಟೆ.
ದೊಡ್ಡ ಅಪಘಾತ ತಪ್ಪಿದರೂ, ಆ ಬಸ್ ತೆರವುಗೊಳಿಸಲು ಸಾಕಷ್ಟು ಸಮಯ ಹಿಡಿದಿತ್ತು. ಇದೇ ರೀತಿಯ ಸಮಸ್ಯೆಗಳು ಹೆಚ್ಚು ಜಲಾವೃತ ಪ್ರದೇಶಗಳಲ್ಲಿ ಕಾಣಿಸುತ್ತಿವೆ.
ಮಳೆಗಾಲದ ಮುಂಚಿತ ಫಿಟ್ನೆಸ್ ತಪಾಸಣೆ ಸಮರ್ಪಕವಾಗಿ ನಡೆಯದಿರುವುದು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.
ಪರಿಹಾರ ಮಾರ್ಗಗಳು
- ಮೆಂಟೆನನ್ಸ್ ನಿಯಂತ್ರಣವನ್ನು BMTC ನೇರವಾಗಿ ಕೈಗೆತ್ತಿಕೊಳ್ಳಬೇಕು
- ಫ್ಲಡ್-ಪ್ರೋನ್ ಮಾರ್ಗಗಳಲ್ಲಿ ರಸ್ತೆ ಮೂಲಸೌಕರ್ಯ ಸುಧಾರಣೆ
- ಚಾಲಕರಿಗೆ ಸಮರ್ಪಕ ತರಬೇತಿ ಮತ್ತು ನ್ಯಾಯಸಮ್ಮತ ವೇತನ
- ಮೂಲ ಸ್ಪೇರ್ ಪಾರ್ಟ್ಸ್ ಬಳಕೆ, ಕಳಪೆ ಪಾರ್ಟ್ಸ್ ನಿಷೇಧ
- ತುರ್ತು ಪರಿಸ್ಥಿತಿಗೆ ಮೊಬೈಲ್ ರಿಪೇರ್ ವ್ಯಾನ್ಗಳು ಹೆಚ್ಚಿಸುವುದು
ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರು ನಗರಕ್ಕೆ ಪರಿಸರ ಸ್ನೇಹಿ ಎಂದೆನಿಸಿಕೊಂಡರು ಕೂಡ ಇಂದಿನ ಪರಿಸ್ಥಿತಿಯಲ್ಲಿ ಬಸ್‌ಗಳು ಹೆಚ್ಚು ರಸ್ತೆಯ ಬದಿಯಲ್ಲಿ ನಿಂತಿರುವುದೇ ಜನರಿಗೆ ಕಣ್ಣಿಗೆ ಬೀಳುತ್ತಿದೆ.
ಇದನ್ನು ಓದಿ : ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಇಂಡಿಯಾ ಒಕ್ಕೂಟದ ಪ್ರತಿಭಟನೆ; ರಾಹುಲ್ ಗಾಂಧಿ ಸೇರಿ ಹಲವರು ವಶಕ್ಕೆ
ಹೀಗಾಗಿ “ಹಸಿರು ಕನಸು” ನಿಜವಾಗಲು BMTC ತುರ್ತು ಮಟ್ಟದಲ್ಲಿ ನಿರ್ವಹಣಾ ಸುಧಾರಣೆ, ತರಬೇತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ. ಹಾಗಾದಲ್ಲಿ ಮಾತ್ರ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಸುಗಳು ಜನರ ಮನಗೆಲ್ಲಲು ಸಾಧ್ಯವಿದೆ.