- ಕರ್ನಾಟಕದಲ್ಲಿ ಲಾರಿ (Lorry in Karnataka) ಮುಷ್ಕರ ಶುರು; ಲಾರಿ, ಟ್ರಕ್ (Lorry, truck) ಸಂಚಾರ ಸ್ಥಗಿತ
- ಮಧ್ಯರಾತ್ರಿಯಿಂದಲೇ (Midnight itself) ಅನಿರ್ದಿಷ್ಟಾವಧಿ (Indefinite lorry strike) ಮುಷ್ಕರ ಶುರು
- ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ
Bengaluru: ಡೀಸೆಲ್ ದರ ಇಳಿಕೆ (Diesel price reduction) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಲಾರಿ (State lorry) ಮಾಲೀಕರು ಸೋಮವಾರ ಏಪ್ರಿಲ್ 14ರ ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಅಗತ್ಯ ವಸ್ತುಗಳ (Necessary) ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ರಾಜ್ಯ ಲಾರಿ (Karnataka State Lorry) ಮಾಲೀಕರು ಮತ್ತು ಏಜೆಂಟ್ಗಳ ಸಂಘ (FKSLOA) ತಿಳಿಸಿದೆ.
ಡೀಸೆಲ್ ಬೆಲೆ (Diesel price) ಏರಿಕೆಯನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ಇತರ ನಾಲ್ಕು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮತ್ತು ಭಾರತದಾದ್ಯಂತ (Karnataka and across India) 60 ಕ್ಕೂ ಹೆಚ್ಚು ಇತರ ಸಾರಿಗೆ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ಸಂಘ ತಿಳಿಸಿದೆ.

ಡೀಸೆಲ್ ಬೆಲೆಗಳನ್ನು (Diesel prices) ಹಿಂತೆಗೆದುಕೊಳ್ಳದಿದ್ದರೆ ಟ್ರಕ್ ನಿರ್ವಾಹಕರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ನಾವು ಒಂದು ವಾರಕ್ಕೂ ಹೆಚ್ಚು ಹಿಂದೆಯೇ ಸರ್ಕಾರಕ್ಕೆ (Government) ತಿಳಿಸಿದ್ದೆವು. ಆದರೆ, ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಗಪ್ಪ (President GR Shanmugappa) ಅವರು ಹೇಳಿದ್ದಾರೆ.
ಏಳು ತಿಂಗಳ ಅವಧಿಯಲ್ಲಿ ಎರಡು ಬಾರಿ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಟ್ರಕ್ ನಿರ್ವಾಹಕರ (K Administrator) ಮೇಲೆ ಹೊರೆಯನ್ನು ಹೇರಿದೆ. ರಾಜ್ಯ ಸರ್ಕಾರ ಸಾರಿಗೆ (State Govt Transport) ವಲಯವನ್ನು ನಿರ್ಲಕ್ಷಿಸುತ್ತಿದೆ ಎಂದು ಸಂಘದ ಸದಸ್ಯರು (Members of the association) ಹೇಳಿದ್ದಾರೆ.
ಡೀಸೆಲ್ ದರ ಕಡಿಮೆ ಮಾಡಬೇಕು, ಟೋಲ್ ದರ (Toll rate) ರದ್ದುಗೊಳಿಸಬೇಕು, ಆರ್ಟಿಓ ಗಡಿ ಚೆಕ್ ಪೋಸ್ಟ್ ರದ್ದುಗೊಳಿಸಬೇಕು, ಎಫ್ ಸಿ ಶುಲ್ಕವನ್ನ (FC fee) ಕಡಿಮೆ ಮಾಡಬೇಕು ಎಂದು ವಿವಿಧ ಬೇಡಿಕೆಗಳ ಮುಂದಿಟ್ಟು ಲಾರಿ ಮಾಲೀಕರ ಚಾಲಕರ ಮುಷ್ಕರ ನಡೆಯುತ್ತಿದ್ದು, ನಗರದ ಬನ್ನಿಮಂಟಪದ ಗೂಡ್ಸ್ ಶೆಡ್ (Goods Shed) ಬಳಿ ಲಾರಿಗಳು ರಸ್ತೆಗಿಳಿಯದೆ ಹಾಗೆಯೇ ನಿಂತಿವೆ.
ಇದನ್ನು ಓದಿ : http://ಬಂಗಾಳದಲ್ಲಿ ವಕ್ಫ್ ಕಾನೂನಿನ ವಿರುದ್ಧ ಮತ್ತೆ ಹಿಂಸಾಚಾರ: ಪೊಲೀಸರ ಮೇಲೆ ಕಲ್ಲು ತೂರಾಟ ,ವಾಹನಗಳಿಗೆ ಬೆಂಕಿ
ಗೂಡ್ಸ್ ರೈಲಿನಲ್ಲಿ ಬಂದಿರುವ ರೈತರ ರಸಗೊಬ್ಬರವನ್ನ ಅನ್ ಲೋಡ್ ಮಾಡದೆ ಹಾಗೆಯೇ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರದ ಭಾಗಿಯಾಗಿದ್ದು, ಬೇಡಿಕೆ ಈಡೇರುವವರೆಗೂ ಸೇವೆ ಆರಂಭಿಸಲ್ಲ ಎಂದು ಮೈಸೂರು ಲಾರಿ (Mysore Lorry) ಮಾಲೀಕರ ಮತ್ತು ಚಾಲಕರ ಒಕ್ಕೂಟ ಪಟ್ಟು ಹಿಡಿದಿದೆ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ (Indefinite strike) ಮುಂದುವರೆಯಲಿದೆ ಎಂದು (Indefinite lorry strike) ತಿಳಿಸಿದ್ದಾರೆ.