Independence Day 2024: Celebration of 78th Independence Day at home.
New Delhi: ಭಾರತ ತನ್ನ 78 ನೇ ಸ್ವಾತಂತ್ರ್ಯ ದಿನವನ್ನು ಈ ದಿನ ಆಚರಿಸುತ್ತಿದೆ. ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಆಗಸ್ಟ್ (August) 15, 1947ರಂದು ದೇಶಕ್ಕೆ ಸ್ವಾತಂತ್ರ್ಯ (Independence Day 2024) ದೊರೆತಿದೆ. ಇದು ಒಂದೆರಡು ವರ್ಷ ನಡೆದ ಹೋರಾಟವಲ್ಲ. ಸಹಸ್ರಾರು ಹೋರಾಟಗಾರರು ತಮ್ಮ ನೆತ್ತರ ಹೊಳೆಯನ್ನು ಹರಿಸಿ ಬ್ರಿಟೀಷ್ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿದ ದಿನ. ಈ ದಿನವು ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಗೆ ಅಂತ್ಯ ಹಾಡಿ, ಭಾರತ ಸಾರ್ವಭೌಮ ರಾಷ್ಟ್ರವಾಗಿ ಜನನ ಪಡೆಯಿತು.

1857ರಿಂದ ಅಧಿಕೃತ ಆರಂಭವಾಗಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು 90 ವರ್ಷಗಳ ನಿರಂತರ ಹೋರಾಟದ ಫಲವೇ 1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಆ ಮೂಲಕ 200 ವರ್ಷಗಳ ಬ್ರಿಟಿಷರ ಆಡಳಿತ ಅಂತ್ಯವಾಗಿ ಭಾರತೀಯರು ಸ್ವಾತಂತ್ರ್ಯ ಪಡೆಯುವಂತಾಯಿತು.
ಸ್ವಾತಂತ್ರ್ಯಕ್ಕಾಗಿ 1857 ರಿಂದ 1947 ರವರೆಗೂ ನಿರಂತರ ಹೋರಾಟ ಮಾಡಲಾಗಿದೆ. ಬ್ರಿಟಿಷ್ (British) ಆಡಳಿತದ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಅವಿರತ ಸಾಧನೆಯನ್ನು ನಾವಿಂದು ಸ್ಮರಿಸುತ್ತೇವೆ. ಭಗತ್ ಸಿಂಗ್, ಮಹಾತ್ಮ ಗಾಂಧಿ (Mahatma Gandhi), ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್,

ಸಾವರ್ಕರ್ , ಚಂದ್ರ ಶೇಖರ್ ಅಜಾದ್ ಮತ್ತು ಇತರೆ ಅನೇಕರ ನೇತೃತ್ವದಲ್ಲಿ ನಡೆದ ಹೋರಾಟಗಳು ಅಹಿಂಸಾತ್ಮಕ ಮತ್ತು ಕ್ರಾಂತಿಕಾರಿಯಾಗಿದ್ದವು. 1947ರ ಆಗಸ್ಟ್ 15ರಂದು, ಜವಾಹರಲಾಲ್ ನೆಹರೂ ಮೊದಲ ಪ್ರಧಾನಿಯಾಗುವುದರೊಂದಿಗೆ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಗಳಿಸಿತು.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಿಷಯವು ‘ವಿಕ್ಷಿತ್ ಭಾರತ,’ ಅಥವಾ ‘ಅಭಿವೃದ್ಧಿ ಹೊಂದಿದ ಭಾರತ’ ಆಗಿದೆ. ಇದು ಸ್ವಾತಂತ್ರ್ಯದ ಶತಮಾನೋತ್ಸವದ 2047 ರ ವೇಳೆಗೆ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸುವ ಭಾರತ ಸರ್ಕಾರದ ದೃಷ್ಟಿಕೋನ ಹೊಂದಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವಾಗ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಪ್ರತಿಯೊಬ್ಬ ನಾಗರಿಕನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಇದು ಸಾರುತ್ತದೆ.
Independence Day 2024 Theme Viral News
New Delhi: India is celebrating its 78th Independence Day today. There was a house of celebration in the country. The country got independence on August 15, 1947 (Independence Day 2024). This is not a struggle that has lasted for a couple of years. The day when thousands of fighters shed their tears and freed the country from British slavery. This day marked the end of British colonial rule and the birth of India as a sovereign nation.
India got independence from the British on August 15, 1947 as a result of 90 years of continuous struggle for independence which officially started from 1857. By that, the 200 years of British rule ended and Indians got freedom.
From 1857 to 1947 there was a continuous struggle for independence. We commemorate the continuous achievement of the freedom fighters who fought against the British rule. Bhagat Singh, Mahatma Gandhi, Jawaharlal Nehru, Subhash Chandra Bose,
The struggles led by Savarkar, Chandra Shekhar Azad and many others were non-violent and revolutionary. On August 15, 1947, India finally gained independence with Jawaharlal Nehru becoming the first Prime Minister.
The theme of this year's Independence Day is 'Vikshit Bharat,' or 'Developed India'. It is the vision of the Government of India to transform the nation into a developed country by 2047, the centenary of independence. It highlights the importance of enhancing the potential of every citizen to contribute to the nation's progress while celebrating India's rich cultural diversity.