ವಾಷಿಂಗ್ಟನ್ ಸೆ 25 : ಭಾರತ ಮತ್ತು ಅಮೆರಿಕ ತಾಲಿಬಾನ್ಗಳಿಗೆ ಕಟು ಎಚ್ಚರಿಕೆಯನ್ನು ರವಾನಿಸಿದ್ದು, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತ ಗುಂಪುಗಳು ಸೇರಿದಂತೆ ಅಫ್ಘಾನಿಸ್ತಾನದ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ತನ್ನ ಆಡಳಿತವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ತಾಕೀತು ಮಾಡಿವೆ.
ಯಾವುದೇ ದೇಶವನ್ನು ಬೆದರಿಸಲು ಅಥವಾ ಆಕ್ರಮಣ ಮಾಡಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ತರಬೇತಿ ನೀಡಲು ಎಂದಿಗೂ ಅಫ್ಘಾನ್ ನೆಲವನ್ನು ತಾಲಿಬಾನ್ ಬಳಸಬಾರದು ಎಂದು ಭಾರತ ಮತ್ತು ಅಮೆರಿಕ ಹೇಳಿದೆ.
ಶುಕ್ರವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಮೊದಲ ವೈಯಕ್ತಿಕ ದ್ವಿಪಕ್ಷೀಯ ಸಭೆಯ ನಂತರ ಹೊರಡಿಸಿದ ಯುಎಸ್-ಇಂಡಿಯಾ ಜಂಟಿ ನಾಯಕರ ಹೇಳಿಕೆಯಲ್ಲಿ ಇದನ್ನು ತಿಳಿಸಲಾಗಿದೆ.
ಉಭಯ ನಾಯಕರು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯನ್ನು ಎದುರಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ತಾಲಿಬಾನ್ ಯುಎನ್ಎಸ್ಸಿ ರೆಸಲ್ಯೂಶನ್ 2593 (2021) ಗೆ ಬದ್ಧವಾಗಿರಬೇಕು ಎಂದಿವೆ, ಅಫ್ಘಾನ್ ಪ್ರದೇಶವನ್ನು ಮತ್ತೆ ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ದಾಳಿ ಮಾಡಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ತರಬೇತಿ ನೀಡಲು ಅಥವಾ ಭಯೋತ್ಪಾದಕ ದಾಳಿಗೆ ಯೋಜನೆ ಅಥವಾ ಹಣಕಾಸು ನೀಡಲು ಬಳಸಬಾರದ ಎಂದಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2593 ಆಗಸ್ಟ್ನಲ್ಲಿ 15 ರಾಷ್ಟ್ರಗಳ ಕೌನ್ಸಿಲ್ನ ಭಾರತದ ಅಧ್ಯಕ್ಷತೆಯಲ್ಲಿ ಅಂಗೀಕರಿಸಲ್ಪಟ್ಟಿತು, ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ದಾಳಿ ಮಾಡಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ತರಬೇತಿ ನೀಡಲು ಅಥವಾ ಭಯೋತ್ಪಾದಕರಿಗೆ ಯೋಜನೆ ಅಥವಾ ಹಣಕಾಸು ನೀಡಲು ಬಳಸಬಾರದು ಎಂಬುದನ್ನು ಇದು ಹೇಳುತ್ತದೆ.