New Delhi : ಸೋಮವಾರ, ಭಾರತ ಸರ್ಕಾರವು ಪ್ರತಿ ಕಿಲೋಗ್ರಾಂಗೆ 50 ರೂ.ಗಿಂತ ಕಡಿಮೆ ಬೆಲೆಯ ಸೇಬುಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧವನ್ನು ಜಾರಿಗೊಳಿಸಿತು. ದೇಶದಲ್ಲಿ ಈಗಾಗಲೇ ಇಂಧನದಿಂದ (India bans import of apples) ಹಿಡಿದು ಎಲ್ಲಾ ರೀತಿಯ ವಸ್ತುಗಳಿಗೆ, ದಿನಸಿ ಪದಾರ್ಥಗಳಿಗೆ ಕೂಡ ಬೆಲೆ ಏರಿಕೆಯಾಗಿದೆ. ಹಣ್ಣು ಹಂಪಲುಗಳು ಕೂಡ ಅಗ್ಗದಲ್ಲಿ ಸಿಗುತ್ತಿಲ್ಲ.
ಈಗ ಕೇಂದ್ರ ಸರ್ಕಾರವು (Central Govt) ಕಿಲೋಗ್ರಾಂಗೆ 50 ರೂ.ಗಿಂತ ಕಡಿಮೆ ಬೆಲೆಯ ಸೇಬುಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧವನ್ನು ಹೇರಿದೆ
ಇದರಿಂದ ದೇಶದಲ್ಲಿ ಸೇಬಿನ ಬೆಲೆ ಹೆಚ್ಚಾಗಬಹುದು ಅಷ್ಟೇ ಅಲ್ಲದೆ ಇದರ ಪರಿಣಾಮವಾಗಿ, ಭಾರತಕ್ಕೆ ಗಮನಾರ್ಹ ಪ್ರಮಾಣದ ಹಣ್ಣುಗಳನ್ನು ರಫ್ತು ಮಾಡುವ ಇರಾನ್,
ಅಫ್ಘಾನಿಸ್ತಾನ (Afghanistan) ಮತ್ತು ಯುಎಇ (UAE) ಯಂತಹ ದೇಶಗಳು ಈ ನಿರ್ಧಾರದಿಂದ ಹೊಡೆತ ಬೀಳಲಿದೆ..
ಸರ್ಕಾರಿ ಅಧಿಕಾರಿಗಳ ಪ್ರಕಾರ, ಸೇಬು ಆಮದು ಮೇಲಿನ ನಿಷೇಧವು ಚೀನಾವನ್ನು ಸಹ ಒಳಗೊಂಡಿರುತ್ತದೆ,
ಆದರೆ ಅಧಿಕೃತ ಅಂಕಿಅಂಶಗಳು ಚೀನಾದಿಂದ ಅಲ್ಪ ಪ್ರಮಾಣದ ಸೇಬುಗಳನ್ನು ಮಾತ್ರ ಆಮದು ಮಾಡಿಕೊಳ್ಳುತ್ತಿವೆ.
ವಿದೇಶಿ ವ್ಯಾಪಾರದ ಮಹಾನಿರ್ದೇಶಕರು ಇತ್ತೀಚೆಗೆ ಪ್ರತಿ ಕೆಜಿಗೆ 50 ರೂ.ವರೆಗಿನ ಸೇಬುಗಳನ್ನು (ವೆಚ್ಚ, ವಿಮೆ ಮತ್ತು ಸರಕು ಸೇರಿದಂತೆ) ನಿಷೇಧಿತ ವರ್ಗಕ್ಕೆ ಪರಿಗಣಿಸಲಾಗುತ್ತದೆ,
ಇದನ್ನೂ ಓದಿ : https://vijayatimes.com/restrictions-on-tourist-spots/
ಅವುಗಳನ್ನು ಮುಕ್ತ ವರ್ಗದಿಂದ ತೆಗೆದುಹಾಕಲಾಗುತ್ತದೆ ಎಂದು ಘೋಷಿಸಿದರು. ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಸೇಬುಗಳು (India bans import of apples) ಮಾತ್ರ ಇದಕ್ಕೆ ಹೊರತಾಗಿರುತ್ತವೆ ಎಂದು ಮಹಾನಿರ್ದೇಶಕರು ಸ್ಪಷ್ಟಪಡಿಸಿದರು.
ಸೇಬು ಹಣ್ಣಿನ ಸೀಸನ್ ಕ್ಷೀಣಿಸುತ್ತಿರುವ ಅವಧಿಯಲ್ಲಿ ಕೃಷಿ ಸಚಿವಾಲಯ (Ministry of Agriculture) ಶಿಫಾರಸು ಮಾಡಿದೆ.
ಕಳೆದ ಕೆಲವು ವರ್ಷಗಳಲ್ಲಿ, ವಾಷಿಂಗ್ಟನ್ (Washington) ಮತ್ತು ಟರ್ಕಿಶ್ (Turkish) ಸೇಬುಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಸೇಬು ಆಮದು ಸುಮಾರು $300 ಮಿಲಿಯನ್ ಆಗಿತ್ತು, ಈಗ ಹಿಂದಿನ ವರ್ಷಕ್ಕಿಂತ 24% ಕಡಿಮೆಯಾಗಿದೆ.
ಭಾರತ ದೇಶಕ್ಕೆ ಈಗಾಗಲೇ ಟರ್ಕಿ ದೇಶದಿಂದ ಗರಿಷ್ಠ ಅಂದರೆ ಸುಮಾರು 72 ದಶಲಕ್ಷ ಡಾಲರ್ ಮೌಲ್ಯದ ಸೇಬುಹಣ್ಣು ಆಮದು ಆಗುತ್ತಿದೆ ಜೊತೆಗೆ ಚಿಲಿ ದೇಶದಿಂದ (38.6 ದಶಲಕ್ಷ ಡಾಲರ್), ಇಟೆಲಿ ದೇಶದಿಂದ (34), ಇರಾನ್ (26) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕದಿಂದ ಆಮದಾಗುವ ಸೇಬಿನ ಪ್ರಮಾಣ ಬಹಳಷ್ಟು ಕಮ್ಮಿಯಾಗಿದೆ ಅಂದರೆ ಶೇಕಡ 76ರಷ್ಟು ಇಳಿದು 50 ಲಕ್ಷ ಡಾಲರ್‌ಗೆ ಕುಸಿದಿದೆ.
- ರಶ್ಮಿತಾ ಅನೀಶ್