New Delhi: ಕಳೆದ ವಾರ ನಡೆದ ಜಿ20 (G20) ಶೃಂಗದಲ್ಲಿ ಭಾಗವಹಿಸಲು ಗುರುವಾರ ಆಗಮಿಸಿದ್ದ ಚೀನಾ ನಿಯೋಗ ದಿಲ್ಲಿಯ ತಾಜ್ ಪ್ಯಾಲೇಸ್ (India-China hotel standoff)
ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ವಿಷಯ ಬೆಳಕಿಗೆ ಬಂದಿದೆ. ಅನುಮಾನಾಸ್ಪದ ಉಪಕರಣಗಳನ್ನು ಇರಿಸಿದ್ದ ವಿಚಿತ್ರ ಆಕಾರದ ಬ್ಯಾಗ್‌ಗಳ ವಿಚಾರದಲ್ಲಿ ಗೊಂದಲ
ಉಂಟಾಗಿದ್ದು, 12 ಗಂಟೆಗಳಕಾಲ (India-China hotel standoff) ಹೈಡ್ರಾಮಾಕ್ಕೆ ಕಾರಣವಾಗಿದೆ.

ಜಿ20 ಶೃಂಗಕ್ಕಾಗಿ ದಿಲ್ಲಿಯ ತಾಜ್ ಪ್ಯಾಲೇಸ್ ಹೋಟೆಲ್‌ಗೆ ಆಗಮಿಸಿದ ಚೀನಿ ತಂಡದ ಎರಡು ಬ್ಯಾಗ್‌ಗಳ (Bag) ಅಸಹಜ ಆಕಾರ ಭದ್ರತಾ ಸಿಬ್ಬಂದಿಯ ಗಮನ ಸೆಳೆದಿದ್ದು, ಈ ಬ್ಯಾಗ್‌ಗಳು
ವಿಚಿತ್ರವಾಗಿ ಕಂಡುಬಂದ ಕಾರಣ ಭದ್ರತಾ ಸಿಬ್ಬಂದಿಯಲ್ಲಿ ಅನುಮಾನ ಶುರುವಾಗಿತ್ತು. ಆದರೆ ರಾಜತಾಂತ್ರಿಕ ಬ್ಯಾಗೇಜ್‌ಗಳಾಗಿರುವುದರಿಂದ ಅವುಗಳನ್ನು ಒಳಗೆ ಕೊಂಡೊಯ್ಯುವಂತೆ ಹೋಟೆಲ್
ಸಿಬ್ಬಂದಿಗೆ ಸೂಚಿಸಿದರೂ, ಅವುಗಳಲ್ಲಿ ಅನುಮಾನಾಸ್ಪದ ಸಾಧನಗಳು ಇವೆ ಎಂದು ಒಬ್ಬ ಸಿಬ್ಬಂದಿ ಹೇಳಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.
ಚೀಲದಲ್ಲಿರುವ ವಸ್ತುಗಳ ಕುರಿತು ಖಚಿತಪಡಿಸಿಕೊಳ್ಳಲು ಸ್ಕ್ಯಾನರ್ (Scanner) ಮೂಲಕ ಅದನ್ನು ಸಾಗಿಸಬೇಕು ಎಂದು ಹೋಟೆಲ್ ಅಧಿಕಾರಿಗಳು ಹೇಳಿದ್ದರು ಆದರೆ ಅದಕ್ಕೆ ಚೀನಾ ಅಧಿಕಾರಿಗಳು
ವಿರೋಧ ವ್ಯಕ್ತಪಡಿಸಿದ್ದು, ಚೀಲಗಳು ಹಾಗೂ ಅವುಗಳಲ್ಲಿನ ವಸ್ತುಗಳನ್ನು ಪರಿಶೀಲಿಸಲು ಒಪ್ಪಲಿಲ್ಲ. ಭದ್ರತಾ ತಂಡವೂ ಚೀನಾ ನಿಯೋಗದ ವಿರೋಧಕ್ಕೆ ಕಿವಿಗೊಡಲಿಲ್ಲ. ಇದರಿಂದ ಸ್ಥಳದಲ್ಲಿ ಗದ್ದಲದ
ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ರಾಜತಾಂತ್ರಿಕ ಶಿಷ್ಟಾಚಾರಗಳಿಗೆ ಅನುಗುಣವಾಗಿ ಸಮಾಲೋಚನೆ ಬಳಿಕ ಚೀಲಗಳನ್ನು ಕೊಠಡಿಗೆ ಸಾಗಿಸಲು ಅನುಮತಿ ನೀಡಲಾಯಿತು ಮತ್ತುಕೊಠಡಿ
ಹೊರಗಡೆಯು ಕೂಡ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಚೀನಾ ನಿಯೋಗವು ಪ್ರತ್ಯೇಕ ಹಾಗೂ ‘ಖಾಸಗಿ’ ಅಂತರ್ಜಾಲ ಸಂಪರ್ಕ ಬೇಕು ಎಂದು ಕೇಳಿದ್ದು, ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದರು, ಈ ವಿಚಾರ ಕೂಡ ಭದ್ರತಾ ಸಿಬ್ಬಂದಿಯಲ್ಲಿ ಅನುಮಾನ
ಹೆಚ್ಛಾಗುವವಂತೆ ಮಾಡಿತ್ತು ಕೊನೆಗೆ ಹೋಟೆಲ್‌ನಿಂದ ತಮ್ಮ ಸಾಧನಗಳನ್ನು ತೆರವುಗೊಳಿಸಿ ಚೀನಾ ರಾಯಭಾರ ಕಚೇರಿಗೆ ಕಳುಹಿಸಲು ಚೀನಿ ಅಧಿಕಾರಿಗಳು ಒಪ್ಪಿಕೊಂಡಿದ್ದರಿಂದ 12 ಗಂಟೆಗಳ ಬಳಿಕ
ಹೈಡ್ರಾಮಾ (Highdrama) ಅಂತ್ಯಗೊಂಡಿತು.

ಶಿಷ್ಟಾಚಾರಕ್ಕೆ ಆದ್ಯತೆ ನೀಡಿದರೂ, ಭದ್ರತೆಯಲ್ಲಿ ರಾಜಿ ಇಲ್ಲ
ಮುಂದಿನ ಜಿ20 ಅಧ್ಯಕ್ಷತೆ ವಹಿಸಿರುವ ಬ್ರೆಜಿಲ್ ಅಧ್ಯಕ್ಷರೂ ಇದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಬ್ಯಾಗ್‌ನಲ್ಲಿದ್ದ ಸಾಧನವನ್ನು ಪರಿಶೀಲಿಸುವುದಕ್ಕೆ ಚೀನಾ ಭದ್ರತಾ ಸಿಬ್ಬಂದಿ ಪ್ರತಿರೋಧ ವ್ಯಕ್ತಪಡಿಸಿದರು
ಆದರೆ ಭಾರತದ ಭದ್ರತಾ ತಂಡ ಯಾವ ಮುಲಾಜೂ ನೋಡಲಿಲ್ಲ ಎಂಬುದನ್ನು ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿನ ಭದ್ರತಾ ಮೂಲಗಳು ದೃಢಪಡಿಸಿವೆ.
“ಚೀನಾ ಭದ್ರತಾ ತಂಡವು, ಉಪಕರಣವನ್ನು ರಾಯಭಾರ ಕಚೇರಿಗೆ ಕಳುಹಿಸುವುದಾಗಿ ಹೇಳುವವರೆಗೂ ಕೊಠಡಿಯ ಹೊರಗೆ ಸುಮಾರು 12 ಗಂಟೆಗಳ ಕಾಲ ಭಾರತದ ಮೂವರು ಭದ್ರತಾ
ಸಿಬ್ಬಂದಿ ಕಾವಲು ಕಾದಿದ್ದರು ” ಎಂದು ಮೂಲಗಳು ತಿಳಿಸಿವೆ
ಚೀನಾ ಅಧಿಕಾರಿಗಳು ತಂದಿದ್ದ ಉಪಕರಣಗಳು ನಿಗಾವಣೆಯ ಸಾಧನಗಳು ಇರಬಹುದು ಎನ್ನುವುದು ಖಚಿತವಾಗಿಲ್ಲ. ಅವುಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಅವಕಾಶ ಸಿಗದ ಕಾರಣ.
ಅಂತಹ ಉಪಕರಣಗಳನ್ನು ಸಾಮಾನ್ಯವಾಗಿ ಪ್ರತಿಬಂಧಕ ಹಾಗೂ ಸುರಕ್ಷಿತ ಸಂವಹನ ಚಾನೆಲ್‌ಗಳಿಗೆ ಬಳಸಲಾಗುತ್ತದೆ. ಆದರೆ ಚೀನಾ ನಿಯೋಗದ ಸೂಟ್‌ಕೇಸ್‌ಗಳಲ್ಲಿದ್ದ ವಸ್ತುಗಳು ಇನ್ನು
ನಿಗೂಢವಾಗಿಯೇ ಉಳಿದಿವೆ.
ಇದನ್ನು ಓದಿ: ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !
- ಮೇಘಾ ಮನೋಹರ್ ಕಂಪು