ನವದೆಹಲಿ : ಭಾರತವು ತನ್ನ ದೈನಂದಿನ ಕೋವಿಡ್ -19(Covid 19) ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ ಮತ್ತು ಕಳೆದ 24 ಗಂಟೆಗಳಲ್ಲಿ 12,213 ಹೊಸ ಸೋಂಕುಗಳು ಮತ್ತು 11 ಸಾವುಗಳನ್ನು ವರದಿ ಮಾಡಿದೆ.
ಇಂದಿನ ವರದಿಯನ್ನು ಪರಿಗಣಿಸಿ ಒಟ್ಟು ಸಾವಿನ ಸಂಖ್ಯೆಯನ್ನು 5,24,803ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ(Health Department) ಗುರುವಾರ ನವೀಕರಿಸಿದ ಪ್ರಕಟಣೆಯನ್ನು ಹೊರಡಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 58,215 ಆಗಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಕೇಸ್ಲೋಡ್ನಲ್ಲಿ(Caseload) 4,578 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ದೇಶವು ಇಂದು 7,624 ಚೇತರಿಕೆ ದಾಖಲಿಸಿದ್ದು, ಒಟ್ಟು ಚೇತರಿಕೆಯ ಸಂಖ್ಯೆಯನ್ನು 4,26,74,712 ಕ್ಕೆ ತೆಗೆದುಕೊಂಡಿದೆ.
ಫೆಬ್ರವರಿ 26 ರಿಂದ 109 ದಿನಗಳಲ್ಲಿ ಮೊದಲ ಬಾರಿಗೆ, ಭಾರತವು ಬುಧವಾರದಂದು 12,000 ದೈನಂದಿನ ಕೋವಿಡ್ -19 ದಾಖಲು ಮಾಡಿರುವುದು ಅಚ್ಚರಿ ಮೂಡಿಸಿದೆ. 100 ದಿನಗಳ ಅವಧಿಯೊಳಗೆ ಇಂದಿನ ಸೊಂಕಿತರ ಸಂಖ್ಯೆ ಭಾರಿ ಪ್ರಮಾಣವನ್ನು ಸೂಚಿಸಿದೆ. ಪ್ರಕರಣಗಳ ಬೃಹತ್ ಜಿಗಿತ ಈಗ ದೇಶಾದ್ಯಂತ ಮತ್ತೆ ಕರೋನವೈರಸ್(CoronaVirus) ಸೋಂಕುಗಳು ಹೆಚ್ಚಾಗುವ ಮುನ್ಸೂಚನೆಯನ್ನು ನೀಡಿದೆ. ಇದು ಕೋವಿಡ್ ನಾಲ್ಕನೇ ಅಲೆಯ ಮುನ್ನೆಚ್ಚೆರಿಕೆಯಾ? ಎಂಬ ಪ್ರಶ್ನೆಗಳು ಉದ್ಭವಗೊಂಡಿದೆ.