- ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ: ತಂತ್ರಜ್ಞಾನ (India joins US PAX Silica) ಕ್ಷೇತ್ರದಲ್ಲಿ ಹೊಸ ಅಧ್ಯಾಯ
- ಚೀನಾ ಪ್ರಾಬಲ್ಯಕ್ಕೆ ಪರ್ಯಾಯವಾಗಿ ಕ್ರಿಟಿಕಲ್ ಮಿನರಲ್ ಜಾಲ ಬಲಪಡಿಸುವ ಯೋಜನೆ
- ಸೆಮಿಕಂಡಕ್ಟರ್ ಅಭಿವೃದ್ಧಿ ಮತ್ತು ತಂತ್ರಜ್ಞಾನ ಸಹಕಾರಕ್ಕೆ ವೇಗ ನೀಡುವ ಒಪ್ಪಂದ
New delhi: ಭಾರತವು ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ (Pax Silica) ಅಂತಾರಾಷ್ಟ್ರೀಯ ಮೈತ್ರಿಕೂಟಕ್ಕೆ (India joins US PAX Silica) ಸೇರ್ಪಡೆಯಾಗಲು ಘೋಷಣಾ ಪತ್ರಕ್ಕೆ ಸಹಿ ಹಾಕಿದೆ.
ದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ India AI Impact Summit ಕಾರ್ಯಕ್ರಮದ ವೇಳೆ ಈ ಮಹತ್ವದ ಬೆಳವಣಿಗೆ ನಡೆದಿದೆ.
ಇತ್ತೀಚೆಗೆ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಹಾಗೂ ತಂತ್ರಜ್ಞಾನ ಸಹಕಾರ ಮತ್ತಷ್ಟು ಗಾಢವಾಗುತ್ತಿರುವ ಸಂದರ್ಭದಲ್ಲೇ ಈ ಒಪ್ಪಂದವೂ ಜಾರಿಗೆ ಬಂದಿದೆ.

ಈ ಹೆಜ್ಜೆಯನ್ನು ಅಮೆರಿಕ ಸ್ವಾಗತಿಸಿದ್ದು, ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಸೆಮಿಕಂಡಕ್ಟರ್ (Semiconductor) ಕ್ಷೇತ್ರದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಅಷ್ಟಕ್ಕೂ ಪ್ಯಾಕ್ಸ್ ಸಿಲಿಕಾ ಎಂದರೆ ಏನು? “ಪ್ಯಾಕ್ಸ್” ಎಂಬುದು ಲ್ಯಾಟಿನ್ (India joins US PAX Silica) ಭಾಷೆಯಲ್ಲಿ “ಶಾಂತಿ” ಎಂಬ ಅರ್ಥ ನೀಡುತ್ತದೆ. “ಸಿಲಿಕಾ” ಎಂದರೆ ಸಿಲಿಕಾನ್ ಚಿಪ್‌ಗಳಿಗೆ ಸಂಬಂಧಿಸಿದ ಪದ.
ಹೀಗಾಗಿ, ಪ್ಯಾಕ್ಸ್ ಸಿಲಿಕಾ ಎಂಬುದು ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಭದ್ರತೆ ಮೂಲಕ ಜಾಗತಿಕ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಒಕ್ಕೂಟವಾಗಿದೆ.
ಇದು ಅಮೆರಿಕದ ಮುಂದಾಳತ್ವದಲ್ಲಿ ಸ್ಥಾಪನೆಯಾಗಿದ್ದು, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ತಂತ್ರಜ್ಞಾನ ಮತ್ತು ಪ್ರಮುಖ ಖನಿಜ ಸಂಪನ್ಮೂಲಗಳ ಲಭ್ಯತೆ ಖಚಿತಪಡಿಸುವತ್ತ
ಗಮನ ಹರಿಸಿದೆ. ಭವಿಷ್ಯದ ತಲೆಮಾರಿನ ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸುವುದು ಇದರ ಪ್ರಮುಖ ಗುರಿಯಾಗಿದೆ.
ಈ ಮೈತ್ರಿಕೂಟದಲ್ಲಿ ಅಮೆರಿಕದ ಜೊತೆಗೆ ಆಸ್ಟ್ರೇಲಿಯಾ (Australia) , ಗ್ರೀಸ್, ಇಸ್ರೇಲ್, ಜಪಾನ್, ಕತಾರ್, ದಕ್ಷಿಣ ಕೊರಿಯಾ, ಸಿಂಗಾಪುರ್, ಯುಎಇ ಮತ್ತು ಬ್ರಿಟನ್ (ಯುಕೆ)
ದೇಶಗಳು ಭಾಗಿಯಾಗಿವೆ. ಇದೀಗ ಭಾರತವೂ ಈ ಗುಂಪಿನಲ್ಲಿ ಸೇರ್ಪಡೆಯಾಗುತ್ತಿರುವುದರಿಂದ, ಜಾಗತಿಕ ತಂತ್ರಜ್ಞಾನ ಸಹಕಾರದಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲವಾಗಲಿದೆ.
ವಿಶೇಷವಾಗಿ ಚೀನಾ ಪ್ರಾಬಲ್ಯ ಹೊಂದಿರುವ ಕ್ರಿಟಿಕಲ್ ಮಿನರಲ್ (Critical Mineral) ಪೂರೈಕೆ ಸರಪಳಿಗೆ ಪರ್ಯಾಯ ವ್ಯವಸ್ಥೆ ರೂಪಿಸುವಲ್ಲಿ ಈ ಒಕ್ಕೂಟ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.
ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರರಾಗಿ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವ ವೇದಿಕೆಯಾಗಲಿದೆ.
ಪ್ಯಾಕ್ಸ್ ಸಿಲಿಕಾದಿಂದ ಭಾರತಕ್ಕೆ ಬಹುಮುಖ ಪ್ರಯೋಜನಗಳಿವೆ. ಎಐ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಈಗಾಗಲೇ ವೇಗವಾಗಿ ಮುನ್ನಡೆಯುತ್ತಿದೆ.
ದೇಶದಲ್ಲಿ 10ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಘಟಕಗಳು ಸ್ಥಾಪನೆಯ ಹಂತದಲ್ಲಿದ್ದು, ಮೊದಲ ಘಟಕದಲ್ಲಿ ಶೀಘ್ರದಲ್ಲೇ ವಾಣಿಜ್ಯ ಉತ್ಪಾದನೆ ಆರಂಭವಾಗಲಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಘಟಕಗಳು ಚಿಪ್‌ಗಳನ್ನು ತಯಾರಿಸಲಿವೆ.
ವಿಶೇಷವಾಗಿ 2-ನ್ಯಾನೋಮೀಟರ್ (2-Nanometer) ಮಟ್ಟದ ಸಂಕೀರ್ಣ ಚಿಪ್‌ಗಳ ವಿನ್ಯಾಸ ಭಾರತದಲ್ಲಿ ನಡೆಯುತ್ತಿರುವುದು ಗಮನಾರ್ಹ.
ಈ ಹಿನ್ನೆಲೆ ಪ್ಯಾಕ್ಸ್ ಸಿಲಿಕಾ ಸದಸ್ಯತ್ವದಿಂದ ಕಚ್ಚಾ ವಸ್ತು, ತಂತ್ರಜ್ಞಾನ ವಿನಿಮಯ ಮತ್ತು ಪೂರೈಕೆ ಸರಪಳಿ ಬಲಪಡಿಸುವಲ್ಲಿ ಸಹಕಾರ ಸಿಗಲಿದೆ.
ಒಟ್ಟಾರೆ, ಪ್ಯಾಕ್ಸ್ ಸಿಲಿಕಾಗೆ ಭಾರತದ ಸೇರ್ಪಡೆ ಕೇವಲ ಒಪ್ಪಂದವಲ್ಲ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ವೇದಿಕೆಯಲ್ಲಿ ಮುನ್ನಡೆಯುವ ದೃಢ ಹೆಜ್ಜೆಯಾಗಿದೆ.
ಎಐ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲು ಹಾಗೂ ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಲು ಇದು
ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಮೈತ್ರಿಕೂಟದ ಮೂಲಕ ಹೊಸ ಹೂಡಿಕೆ, ಉದ್ಯೋಗಾವಕಾಶಗಳು ಮತ್ತು ತಂತ್ರಜ್ಞಾನ ವಿನಿಮಯ ಹೆಚ್ಚುವ ಸಾಧ್ಯತೆ ಇದೆ.
ಭಾರತ ಜಾಗತಿಕ ತಂತ್ರಜ್ಞಾನ ಕೇಂದ್ರವಾಗುವ ದಿಕ್ಕಿನಲ್ಲಿ ಈ ಬೆಳವಣಿಗೆ ಮಹತ್ವದ ಮೈಲಿಗಲ್ಲಾಗಲಿದೆ.
ಇದನ್ನು ಓದಿ : https://vijayatimes.com/trump-warning-to-iran/