ದುಬೈ ಅ 26 : ಭಾರತ ತಂಡ ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ದ 10 ವಿಕೆಟ್ಗಳಿಂದ ಹೀನಾಯವಾಗಿ ಸೋಲನುಭವಿಸಿದೆ. ಈ ಸೋಲಿಗೆ ಸಾಕಷ್ಟು ಮಂದಿ ಹಲವಾರು ರೀತಿಯಲ್ಲಿ ಟೀಕೆಗಳನ್ನು ಮಾಡಿದ್ದು, ಮುಂದಿನ ಪಂದ್ಯಕ್ಕಾದರೂ ಭಾರತ ತಂಡ ಪಾಕ್ ವಿರುದ್ದ ಮಾಡಿದ್ದ ತಪ್ಪನ್ನು ಸರಿಪಡಿಸಕೊಳ್ಳಬೇಕೆಂಬುದು ನೆಟ್ಟಿಗರ ಆಶಯವಾಗಿದೆ.
ಟೀ ಇಂಡಿಯಾ ಪಾಕ್ ವಿರುದ್ದದ ಸೋಲಿಗೆ 5 ಪ್ರಮುಖ ಕಾರಣಗಳಲು
- ಅನ್ ಫಿಟ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಅವಕಾಶ ನೀಡಿದ್ದು
ಹಾರ್ದಿಕ್ ಪಾಂಡ್ಯ ಮೇಲೆ ಟೀಮ್ ಮ್ಯಾನೇಜ್ ಮೆಂಟ್ಗೆ ಯಾಕೆ ಅಷ್ಟೊಂದು ಒಲವು ಅಂತ ಗೊತ್ತಿಲ್ಲ. ಪಾಂಡ್ಯ ಬೌಲಿಂಗ್ ಮಾಡೋದಿಲ್ಲ. ಅವರು ಅನ್ಫಿಟ್ ಅಂತ ಗೊತ್ತಿದ್ರೂ, ಮ್ಯಾನೇಜ್ಮೆಂಟ್ ಇವರನ್ನ ಆಯ್ಕೆ ಮಾಡ್ತು. ಜೊತೆಗೆ ಬ್ಯಾಟಿಂಗ್ನಲ್ಲಿ ಫಾರ್ಮ್ನಲ್ಲಿ ಇಲ್ಲದೆ ಪಾಂಡ್ಯಗೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಿದ್ದು.
- ಫಾರ್ಮ್ ನಲ್ಲಿದ್ದ ಇಶಾನ್ ಕಿಶನ್ರನ್ನ ಕೈಬಿಟ್ಟಿದ್ದು
ಪಾಕ್ ವಿರುದ್ಧ ಇಶಾನ್ ಕಿಶನ್ಗೆ ಸ್ಥಾನ ಸಿಗುತ್ತದೆಂಬ ವಿಶ್ವಾಸ ಸಾಕಷ್ಟು ಜನರಲ್ಲಿತ್ತು. ಕಿಶನ್ರ ಭರ್ಜರಿ ಫಾರ್ಮ್, ಕಳೆದ 3 ಟಿ ಟ್ವೆಂಟಿ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಕಿಶನ್ ಬದಲಿಗೆ ಸೂರ್ಯಕುಮಾರ್ಗೆ ಸ್ಥಾನ ನೀಡಿದ್ದು.
- ಎಡಗೈ ವೇಗಿಗಳ ವಿರುದ್ಧ ತಯಾರಿ ನಡೆಸಿಕೊಂಡಿಲ್ಲದಿದ್ದು.
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ ಮೂವರು ಪಾಕ್ ಎಡಗೈ ವೇಗಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದ್ರು, ಎಡಗೈವೇಗಿಗಳ ವಿರುದ್ಧ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು, ವೀಕ್ ಅಂತ ಗೊತ್ತಿದ್ರೂ ಕಠಿಣ ಅಭ್ಯಾಸ ನಡೆಸದೇ ಇರುವುದು ಕೂಡ ಸೋಲಿಗೆ ಕಾರಣ
- ಫಾರ್ಮ್ ಕಳೆದುಕೊಂಡಿದ್ದ ಭುವಿಗೆ ಅವಕಾಶ ನೀಡಿದ್ದು
ಭುವನೇಶ್ವರ್ ಕುಮಾರ್ ಶ್ರೇಷ್ಟ ಬೌಲರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕ್ರಿಕೆಟ್ ಕರಿಯರ್ ಆರಂಭದಲ್ಲಿ ಭುವಿ, ಅತ್ಯದ್ಭುತ ಪ್ರದರ್ಶನ ನೀಡ್ತಿದ್ರು. ಆದ್ರೀಗ ಅನ್ಫಿಟ್, ಔಟ್ ಆಫ್ ಫಾರ್ಮ್, ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುವ ಭುವಿ ಬದಲಿಗೆ ಮತ್ತೋರ್ವ ವೇಗಿಗೆ ಅವಕಾಶ ಕೊಡಬಹುದಿತ್ತು.
- ಆರ್.ಆಶ್ವಿನ್ಗೆ ಅವಕಾಶ ನೀಡದಿರುವುದು
ಆಫ್ ಸ್ಪಿನ್ನರ್ ಆರ್.ಅಶ್ವಿನ್ ಟೀಮ್ ಇಂಡಿಯಾ 15 ಸದಸ್ಯರ ತಂಡದಲ್ಲೇನೋ ಸ್ಥಾನ ಪಡೆದಿದ್ದಾರೆ. ಆದ್ರೆ ವರ್ಲ್ಡ್ ಟೆಸ್ಟ್ ಸ್ಪಿನ್ನರ್ ಅಶ್ವಿನ್ರನ್ನ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡದಿರುವುದು ಕೂಡ ಸೋಲಿಗೆ ಕಾರಣವಾಗಿದೆ.