New York : ಪಾಕಿಸ್ತಾನವು ತನ್ನದೇ ದೇಶದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಮರೆಮಾಚಿ, ಕಾಶ್ಮೀರದ(India replys to Pak PM) ಕುರಿತು ಮಾತನಾಡುತ್ತಿರುವುದು ವಿಷಾದನೀಯ.
ತಮ್ಮ ದೇಶದಲ್ಲಿನ ದುಷ್ಕೃತ್ಯಗಳನ್ನು ಮರೆಮಾಚಿ, ಭಾರತದ(India replys to Pak PM)ವಿರುದ್ಧದ ಕ್ರಮಗಳನ್ನು ಸಮರ್ಥಿಸುವುದು ಸೂಕ್ತ ಬೆಳವಣಿಗೆಯಲ್ಲ.
ರಾಜಕೀಯವು ಎಂದಿಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು(Terrorism) ಪ್ರಾಯೋಜಿಸುವುದಿಲ್ಲ ಅಥವಾ ಭಯಾನಕ ಮುಂಬೈ(Mumbai) ಭಯೋತ್ಪಾದಕ ದಾಳಿಯ ಆಯೋಜಕರಿಗೆ ಆಶ್ರಯ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಗೆ ಭಾರತ ತಕ್ಕ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಕಾಶ್ಮೀರ ಸಮಸ್ಯೆ ಕುರಿತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್(Shebaz Shareef) ಭಾರತವನ್ನು ಟೀಕಿಸಿದ್ದರು,.
ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಮಿಜಿತೊ ವಿನಿಟೊ ಅವರು, ಪಾಕಿಸ್ತಾನದ ಪ್ರಧಾನಿಯ ಹೇಳಿಕೆಗಳು ತಮ್ಮ ದೇಶದಲ್ಲಿನ ದುಷ್ಕೃತ್ಯಗಳನ್ನು ಮರೆಮಾಚುವುದು ಮತ್ತು ಭಾರತದ ವಿರುದ್ಧದ ಕ್ರಮಗಳನ್ನು ಸಮರ್ಥಿಸುವುದಾಗಿದೆ.
ಭಾರತದ ವಿರುದ್ಧ ಸುಳ್ಳು ಆರೋಪ ಮಾಡಲು ಪಾಕ್ ಪ್ರಧಾನಿ ಈ ಸಭೆಯ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಷಾದನೀಯ. ಅವರು ತಮ್ಮ ದೇಶದಲ್ಲಿನ ದುಷ್ಕೃತ್ಯಗಳನ್ನು ಮರೆಮಾಚಿ ಮತ್ತು ಭಾರತದ ವಿರುದ್ಧದ ಕ್ರಮಗಳನ್ನು ಸಮರ್ಥಿಸಲು ಹೀಗೆ ಮಾಡಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಉನ್ನತ ಮಟ್ಟದ ಯುಎನ್ ಜನರಲ್ ಅಸೆಂಬ್ಲಿ (ಯುಎನ್ಜಿಎ) ಅಧಿವೇಶನದ ತಮ್ಮ ಭಾಷಣದಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿ, ಆಗಸ್ಟ್ 5, 2019 ರಂದು ಜಮ್ಮುವಿನ ವಿಶೇಷ ಸ್ಥಾನಮಾನವನ್ನು ಬದಲಾಯಿಸಲು ಭಾರತ “ಅಕ್ರಮ ಮತ್ತು ಏಕಪಕ್ಷೀಯ” ಕ್ರಮಗಳನ್ನು ತೆಗೆದುಕೊಂಡಿದೆ.
ಇದನ್ನೂ ಓದಿ https://vijayatimes.com/we-need-rahul-gandhi/
ಭಾರತದ ಈ ಕ್ರಮಗಳು ಕಾಶ್ಮೀರದ ಭವಿಷ್ಯವನ್ನು ಮತ್ತಷ್ಟು ದುರ್ಬಲಗೊಳಿಸಿತು ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಸೃಷ್ಟಿಸಿತು ಎಂದು ಆರೋಪಿಸಿದ್ದರು.
- ಮಹೇಶ್.ಪಿ.ಎಚ್