ವಿಶ್ವದಲ್ಲಿ ಹಾವಿನ(Snake) ಕಡಿತದಿಂದ ಅತಿಹೆಚ್ಚು ಜನ ಬಲಿಯಾಗುವ ದೇಶಗಳಲ್ಲಿ ಭಾರತ(India) ಕೂಡ ಒಂದು. ಭಾರತದಲ್ಲಿ ಹಾವಿನ ಕಡಿತದಿಂದ ಸಾವನ್ನಪ್ಪುವವರಲ್ಲಿ ಹೆಚ್ಚಿನ ಜನ ಗ್ರಾಮೀಣ ಪ್ರದೇಶದ(Village Areas) ಕೃಷಿ ವಲಯದ ಬಡ ಜನರೇ ಆಗಿರುತ್ತಾರೆ.

ನಮ್ಮ ದೇಶದಲ್ಲಿ ಹಾವುಕಡಿತದಿಂದ ಮೃತಪಡುವವರಲ್ಲಿ 90% ಗೂ ಅಧಿಕ ಜನರು, ನಮ್ಮಲ್ಲಿನ ಕೇವಲ 4 ಜಾತಿಯ ಹಾವುಗಳಿಂದ ಮಾತ್ರ ಸಾವನ್ನಪ್ಪುತ್ತಾರೆ. ಹೀಗಾಗಿ ಆ ನಾಲ್ಕು ವಿಷಕಾರಿ ಹಾವುಗಳನ್ನು ಭಾರತದ ದೊಡ್ಡ ವಿಷಕಾರಿ ಹಾವುಗಳು (Big four venomous Snake of India) ಎಂದು ವಿಭಾಗಿಸಲಾಗಿದೆ. ಅವು ಯಾವುವೆಂದರೆ:-
1. ನಾಗರಹಾವು (Spectical Cobra)
2. ಕೊಳಕು ಮಂಡಲ(Russell Viper)
3. ಕಟ್ಟುಹಾವು(Krait)
4. ಉರಿ ಮಂಡಲ(Saw Scaled Viper)

ಈ ಹಾವುಗಳು ಗ್ರಾಮೀಣ/ನಗರ ಪ್ರದೇಶದ ಜನವಸತಿ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ ಹಾಗೂ ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ. ಆದ ಕಾರಣ ನಾವು ಈ ನಾಲ್ಕು ಹಾವುಗಳ ಚಲನ ವಲನ, ಆಹಾರ ಪದ್ದತಿ ಇತ್ಯಾದಿ ವಿಷಯಗಳ ಬಗ್ಗೆ, ಮತ್ತೆ ಅವುಗಳ ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿತರೆ ಹಾವುಗಳ ಕಡಿತದಿಂದ ಸುಲಭವಾಗಿ ಪಾರಾಗಬಹುದು.

ಈ ಹಿನ್ನಲೆಯಲ್ಲಿ ದೇಶದ ಪ್ರಮುಖ ಉರಗ ಅಧ್ಯಯನ ಕೇಂದ್ರಗಳಲ್ಲಿ ಒಂದಾದ ಚೆನೈನ ಕ್ರೊಕಡೈಲ್ ಪಾರ್ಕ್ ನ ಪರಿಣಿತ ಹಾವುಗಳ ತಜ್ಞರು ನಿರ್ಮಿಸಿರುವ ಹಾವುಗಳ ಕಡಿತ ಬಗೆಗಿನ ಜಾಗೃತಿಯ ಸಾಕ್ಷ್ಯಚಿತ್ರದ ಕನ್ನಡ ಅವತರಣಿಕೆ ತುಂಬಾ ಉಪಯುಕ್ತವಾಗಿದೆ. ಪ್ರತಿಯೊಬ್ಬರು ಒಮ್ಮೆ ಈ ಕೆಳಗಿನ ಯೂಟ್ಯೂಬ್ ಲಿಂಕ್ ನಲ್ಲಿನ ವಿಡಿಯೋ ನೋಡಿ.
- ಮಾಹಿತಿ ಕೃಪೆ : ಪರಿಸರ ಪರಿವಾರ