New Delhi: ದೇಶದ ಹೆಸರನ್ನು ‘ಇಂಡಿಯಾ’ (India to Bharat) ಬದಲಿಗೆ ‘ಭಾರತ್’ ಎಂದು ಕರೆಯಬೇಕು ಎನ್ನುವುದಾಗಿ ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಸಲಹೆ ನೀಡಿರುವ
ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದ್ದು, ‘ಭಾರತ್’ (BHARAT) ಆಗಿ ಇಂಡಿಯಾ ಹೆಸರು ಬದಲಾಗುತ್ತಾ ಅನ್ನುವ ಚರ್ಚೆಗಳು ಎಲ್ಲೆಡೆ ಕೇಳಿ ಬರುತ್ತಿದೆ. ಅಲ್ಲದೆ ಇವರ
ಸಲಹೆಗೆ ಕೇಂದ್ರ ಸರ್ಕಾರ ಶರಣು ಅನ್ನುತ್ತಿದೀಯಾ ಎಂಬ ಹಲವಾರು ಪ್ರಶ್ನೆಗಳು ಮೂಡುತ್ತಿದ್ದು, ಕೇಂದ್ರ ಸರಕಾರದ ಈ ಚಿಂತನೆಗೆ ಪ್ರತಿ ಪಕ್ಷಗಳು ಆಕ್ರೋಶ ವ್ಯಕ್ತ ಪಡಿಸುತ್ತಿವೆ.

ಆತುರಾತುರವಾಗಿ ಭಾರತ್ ಹೆಸರಿಗೆ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಇಂಡಿಯಾ ಭಾರತ್ ಆಗುತ್ತಿರುವ ಕಥೆಯ ವರದಿ ಏನು ಎಂಬುವುದು ತಿಳಿಯದಂತಾಗಿದೆ. ಇದು ಇಂಡಿಯಾ ಗುಲಾಮಗಿರಿಯ
ಮನಸ್ಥಿತಿಯ ಸಂಕೇತವೋ ಅಥವಾ ದೇಶದ ಹೆಸರನ್ನು 2025ರ ಹೊತ್ತಿಗೆ ಬದಲಾವಣೆ ಮಾಡುವ (India to Bharat) ಉದ್ದೇಶವೋ ಎಂಬ ಕುತೂಹಲ ಮೂಡಿಸಿದೆ.
ಇನ್ನು ರಾಜಧಾನಿ ದೆಹಲಿಯಲ್ಲಿ (Delhi) ಸೆ. 8 ರಿಂದ ನಡೆಯಲಿರುವ ಜಿ20 (G20) ಶೃಂಗಸಭೆಯ ಆಹ್ವಾನ ಪತ್ರಿಕೆಗಳಿಗೆ ಕುರಿತಾದ ಅನುಮಾನಗಳಿಗೆ ಇದು ಎಡೆಮಾಡಿಕೊಡುತ್ತಿದ್ದು, ಜಿ20
ಶೃಂಗಸಭೆಗೆ ಬರುತ್ತಿರುವ ಪ್ರತಿನಿಧಿಗಳಿಗೆ ರಾಷ್ಟ್ರಪತಿ ಭವನವು ಸೆ. 9ರಂದು ಆಯೋಜಿಸಿರುವ ಔತಣ ಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ಮುರ್ಮು ಅವರ ಹುದ್ದೆಯನ್ನು ‘ಪ್ರೆಸಿಡೆಂಟ್
ಆಫ್ ಭಾರತ್’ (President Of Bharat) ಎಂದು ಉಲ್ಲೇಖ ಮಾಡಿದೆ. ಆದರೆ ಇಲ್ಲಿಯವರೆಗೂ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಎಂದೇ ಕರೆಯಲಾಗುತ್ತಿತ್ತು.
ಇದರ ವಿರುದ್ಧವಾಗಿ ಆಕ್ರೋಶಗೊಂಡಿರುವ ಕಾಂಗ್ರೆಸ್ (Congress) ಸರ್ಕಾರವು ಒಕ್ಕೂಟ ರಾಜ್ಯಗಳ ವ್ಯವಸ್ಥೆಯು ಅಪಾಯದಲ್ಲಿದೆ ಎಂದು ತಿಳಿಸಿದ್ದು,
‘ಇಂಡಿಯಾ’ ಯಾಕೆ ಬೇಡ ಮತ್ತು ‘ಭಾರತ್’ ಯಾಕೆ ಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಇಂಡಿಯಾ ಎಂಬ ಹೆಸರು ಗುಲಾಮಗಿರಿ ಮನಸ್ಥಿತಿಯ ಸಂಕೇತವಾಗಿದ್ದು, ಹಾಗಾಗಿ ದೇಶದ
ಮೂಲ ಹೆಸರನ್ನ ಅಧಿಕೃತ ಬಳಕೆಗೆ ತರಬೇಕು ಎಂಬ ಅಭಿಪ್ರಾಯಗಳ ನಡುವೆಯು ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ್’ ಎಂದು ಮರು ನಾಮಕರಣ ಮಾಡುವ ನಿರ್ಣಯವನ್ನು ಸಂಸತ್‌ನ
ವಿಶೇಷ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತು ಎಲ್ಲಾ ಕಡೆಯಲ್ಲೂ ಈ ವಿಚಾರವು ಬಹಳ ಸದ್ದು ಮಾಡುತ್ತಿದೆ.

ಆರ್. ಎಸ್.ಎಸ್ (RSS) ಸಲಹೆಗಳಿಗೆ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ವಿರೋಧಪಕ್ಷಗಳು ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, RSS ಸಂಘಟನೆಗಾಲ ತಾಳಕ್ಕೆ
ತಕ್ಕಂತೆ ಕೇಂದ್ರ ಸರ್ಕಾರದ ಬಿಜೆಪಿಯು (BJP) ಕುಣಿಯುತ್ತಿದೆ. ಅಲ್ಲದೆ ಪ್ರತಿ ಪಕ್ಷಗಳ ಮೈತ್ರಿಕೂಟದ ಹೆಸರು ಕೂಡ ಇಂಡಿಯಾ ಆಗಿರುವುದೇ ಇವರ ಅವಸರದ ನಿರ್ಧಾರಕ್ಕೆ ಕಾರಣವಾಗಿದೆ
ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಖಂಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರಿಂದ (J.P Nadda) ಗ್ರೀನ್ ಸಿಗ್ನಲ್ ದೊರಕಿದ್ದು, ‘ಭಾರತ್’ ಪದ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗೂ ದೇಶದ ಗೌರವ ಮತ್ತು ಹೆಮ್ಮೆಗೆ
ಸಂಬಂಧಿಸಿದ ಪ್ರತಿ ವಿಷಯದಲ್ಲಿಯೂ ಕಾಂಗ್ರೆಸ್ ತಗಾದೆ ತೆಗೆಯುವುದು ಯಾಕೆ ಎಂದು ಪ್ರಶ್ನಿಸಿದ್ದು, ಇದರ ಜೊತೆಗೆ ಇಂಡಿಯಾ ಭಾರತ್ ಆಗುತ್ತಿರುವುದಕ್ಕೆ ನನ್ನ ಸಹಮತವಿದೆ ಎಂದು ಬೆಂಬಲ ಸೂಚಿಸಿದ್ದಾರೆ.
ಇಂಡಿಯಾ ಭಾರತ್ ಆದರೂ, ಭಾರತ್ ಇಂಡಿಯಾ ಆದರೂ, ಇದೆಲ್ಲಾ ಆಗುವುದಕ್ಕೂ ಮೊದಲು ಈ ದೇಶ ಬಡತನ, ನಿರುದ್ಯೋಗ ಮತ್ತು ತಾರತಮ್ಯ ಮುಕ್ತ ಭಾರತವಾಗಬೇಕು ಅನ್ನುವುದು
ಭಾರತೀಯರ ಸಹಮತವಾಗಿದೆ.
ಇದನ್ನು ಓದಿ: CSI ಮಾಡರೇಟರ್ ಬಿಷಪ್ ಎ ಧರ್ಮರಾಜ್ ರಸಾಲಂ ಅವರ ಆಯ್ಕೆಯನ್ನು ರದ್ದು ಮಾಡಿದ ಮದ್ರಾಸ್ ಹೈಕೋರ್ಟ್
- ಭವ್ಯಶ್ರೀ ಆರ್.ಜೆ