New Delhi : 2011ರಿಂದ ಕಳೆದ ಜೂನ್ ವರೆಗೆ 17.50 ಲಕ್ಷ ಭಾರತೀಯರು ಭಾರತದ ಪೌರತ್ವವನ್ನು ತೊರೆದು, ವಿದೇಶಗಳ ಪೌರತ್ವವನ್ನು ಸ್ವೀಕರಿಸಿದ್ದಾರೆ (India to Foreign citizenship)

ಎಂದು ವಿದೇಶಾಂಗ ಸಚಿವ ಲೋಕಸಭೆ ಮಾಹಿತಿ ನೀಡಿದ್ದಾರೆ.
2022ರಲ್ಲಿ 2,25,620, 2021ರಲ್ಲಿ 1,63,37, 2020ರಲ್ಲಿ 85,256 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಇದಕ್ಕೆ ಕಾರಣವನ್ನು ತಿಳಿಸಿರುವ ವಿದೇಶಾಂಗ ಸಚಿವರು
ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಭಾರತೀಯ ತಂತ್ರಜ್ಞರಿಗೆ ಸಿಗುತ್ತಿರುವ ಮನ್ನಣೆ, ವಲಸೆ ಪ್ರವೃತ್ತಿ ಸೇರಿದಂತೆ ಅನೇಕ ಕಾರಣಗಳಿಗೆ ಜನರು ಭಾರತವನ್ನು ತೊರೆಯುತ್ತಿದ್ದಾರೆ.
ಕಳೆದ ಎರಡು ದಶಕಗಳ ಅವಧಿಯಲ್ಲಿ ಜಾಗತಿಕ ಕೆಲಸದ ಸ್ಥಳವನ್ನು ಹುಡುಕುತ್ತಿರುವ ಭಾರತೀಯಯ ಸಂಖ್ಯೆಯು ಗಮನಾರ್ಹವಾಗಿದೆ. ಅವರಲ್ಲಿ ಸಾಕಷ್ಟು ಜನರು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ

ವಿದೇಶಿ ಪೌರತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದ್ಯೋಗ ಮತ್ತು ವೈಯಕ್ತಿಕ ಅನುಕೂಲಕ್ಕಾಗಿ ಭಾರತೀಯರು ಪೌರತ್ವ ತ್ಯಜಿಸುತ್ತಿದ್ದಾರೆ ಎಂದಿದ್ದಾರೆ. ಇನ್ನು ಭಾರತೀಯ ಪೌರತ್ವವನ್ನು ತ್ಯಜಿಸಿರುವ
ಇದನ್ನು ಓದಿ: ನಂದಿನಿ ಹಾಲಿನ ದರ 3 ರೂ. ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ; ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿ
ಹೆಚ್ಚಿನ ಭಾರತೀಯರು ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳ ಪೌರತ್ವವನ್ನು ಪಡೆಯುತ್ತಿದ್ದಾರೆ. ಆ ದೇಶಗಳಲ್ಲಿ ಸಿಗುತ್ತಿರುವ ಉದ್ಯೋಗಾವಕಾಶಗಳು ಭಾರತೀಯರ
ಸಮುದಾಯವನ್ನು ಸೆಳೆಯುತ್ತಿವೆ ಎನ್ನಲಾಗಿದೆ. ಈ ಸಂಖ್ಯೆಯೂ ಮುಂದಿನ ದಿನಗಳಲ್ಲಿ ಇನ್ನಷ್ಟು (India to Foreign citizenship) ಹೆಚ್ಚಾಗುವ ಸಾಧ್ಯತೆಯಿದೆ.
ಪೌರತ್ವ ತ್ಯಜಿಸುವ ಭಾರತೀಯರ ವಾರ್ಷಿಕ ಅಂಕಿ-ಅಂಶಗಳು
2022 – 2,25,620
2021 – 1,63,370
2020- 85,256
2019- 1,44,017
2018- 1,34,561
2017- 1,33,049
2016- 1,41,603
2015 – 1,31,489
2014- 1,29,328
2013- 1,31,405
2012 – 1,20,923
2011 – 1,22,819
ಪೌರತ್ವ ತ್ಯಜಿಸಲು ಕಾರಣಗಳು
• ಜಾಗತಿಕ ಮಟ್ಟದಲ್ಲಿ ಭಾರತೀಯ ತಂತ್ರಜ್ಞರಿಗೆ ಸಿಗುತ್ತಿರುವ ಮನ್ನಣೆ
• ವಿದೇಶಗಳಲ್ಲಿ ಸಿಗುತ್ತಿರುವ ಆಕರ್ಷಕ ಸಂಬಳ
• ಭಾರತದಲ್ಲಿ ಕಡಿಮೆ ಉದ್ಯೋಗಾವಕಾಶಗಳು
• ವಿದೇಶಗಳ ವ್ಯಾಮೋಹ
• ವೈಯಕ್ತಿಕ ಅನುಕೂಲ
• ಪೌರತ್ವ ತ್ಯಜಿಸಲೇಬೇಕಾದ ಅನಿವಾರ್ಯತೆ
- ಮಹೇಶ್