• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಭಾರತದ ಅಕ್ಕಿ ಆಮದಿನ ಮೇಲೆ ಟ್ರಂಪ್ ವಕ್ರದೃಷ್ಟಿ : ಹೊಸ ಸುಂಕದ ಬೆದರಿಕೆ ಹಾಕಿದ ಅಮೆರಿಕಾ ಅಧ್ಯಕ್ಷ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಭಾರತದ ಅಕ್ಕಿ ಆಮದಿನ ಮೇಲೆ ಟ್ರಂಪ್ ವಕ್ರದೃಷ್ಟಿ : ಹೊಸ ಸುಂಕದ ಬೆದರಿಕೆ ಹಾಕಿದ ಅಮೆರಿಕಾ ಅಧ್ಯಕ್ಷ
0
SHARES
28
VIEWS
Share on FacebookShare on Twitter
  • ಭಾರತಕ್ಕೆ ಅಕ್ಕಿ ಆಮದಿನ ಮೇಲೆ ಸುಂಕ ಬೆದರಿಕೆ (India US Trade Rice Tariff) ಹಾಕಿದ ಡೊನಾಲ್ಡ್‌ ಟ್ರಂಪ್
  • ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್
  • ಅಮೆರಿಕಾ ಮಾರುಕಟ್ಟೆಯಲ್ಲಿ ಸ್ಥಳೀಯ ರೈತರಿಗೆ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಕಿಗೆ ಹೊಸ ಸುಂಕ ಜಾರಿಯ ಆತಂಕ

America: ಅಮೆರಿಕಾ–ಭಾರತ ವ್ಯಾಪಾರ ಸಂಬಂಧಗಳು (India US Trade Rice Tariff) ಇತ್ತೀಚಿನ ವರ್ಷಗಳಲ್ಲಿ ಹಲವು ಏರುಪೇರುಗಳನ್ನು ಕಂಡಿವೆ.

ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಆಮದು-ರಫ್ತು ನೀತಿಗಳ ಬಗ್ಗೆ ಎರಡು ರಾಷ್ಟ್ರಗಳ ನಡುವೆ ಪದೇಪದೇ ತೀವ್ರ ವಾಗ್ವಾದಗಳು ಕೇಳಿಬರುತ್ತಿವೆ.

ಈಗ ಮತ್ತೆ ಇದೇ ವಿಷಯ ಚರ್ಚೆಗೆ ಕಾರಣವಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದಿಂದ ಆಮದು ಆಗುತ್ತಿರುವ ಅಕ್ಕಿ ಉತ್ಪನ್ನಗಳ ಮೇಲೆ ಹೊಸ ಸುಂಕ ವಿಧಿಸುವ ಸಾಧ್ಯತೆ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ.

India US Trade Rice Tariff

ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದ ಮಾತುಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಅವರಿಗೆ ಅಸಮಾಧಾನ ತಂದಿದ್ದು, ಈ ಅಸಮಾಧಾನವೇ ಹೊಸ ಸುಂಕ ಎಚ್ಚರಿಕೆಯ ರೂಪದಲ್ಲಿ ಹೊರಬಂದಿದೆ.

ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಕೃಷಿ ಆಮದುಗಳ ಕುರಿತು ಮಾತನಾಡಿದ ಟ್ರಂಪ್, ಭಾರತ ಮತ್ತು ಇತರ ಏಷ್ಯಾದ ರಾಷ್ಟ್ರಗಳು ಅಮೆರಿಕದ ಮಾರುಕಟ್ಟೆಯನ್ನು ಅಪರಿಮಿತವಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

ಇನ್ನು ಕೆಲವು ಮೂಲಗಳ ಪ್ರಕಾರ ಅಮೆರಿಕಾ ಸ್ಥಳೀಯ ರೈತರ ಒತ್ತಡ ಕೂಡ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

ದಕ್ಷಿಣ ಅಮೆರಿಕಾದಲ್ಲಿ ಅಕ್ಕಿ ಬೆಳೆದು ಬದುಕು ಸಾಗಿಸುವ ಸಾವಿರಾರು ರೈತರಿಗೆ ವಿದೇಶಿ ಅಕ್ಕಿ ದೊಡ್ಡ ಸ್ಪರ್ಧೆಯಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಲೂಸಿಯಾನ ರಾಜ್ಯಕ್ಕೆ ಸೇರಿದ ಅಕ್ಕಿ ಗಿರಣಿ ಉದ್ಯಮಿ ಮೆರಿಲ್ ಕೆನಡಿ, ಭಾರತ, ಥಾಯ್ಲೆಂಡ್ (Thailand) ಮತ್ತು ಚೀನಾ ಅಮೆರಿಕ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸುರಿಸುತ್ತಿವೆ.

ಇದರ ಪರಿಣಾಮವಾಗಿ ಸ್ಥಳೀಯ ಉತ್ಪಾದಕರು ನಷ್ಟ ಅನುಭವಿಸುತ್ತಿದ್ದಾರೆ,ಎಂದು ಟ್ರಂಪ್‌ ಅವರಿಗೆ ತಿಳಿಸಿದರು.

ಪೋರ್ಟೊ ರಿಕೊ ಕಡೆ ಮಾರುಕಟ್ಟೆ ಕಳೆದುಕೊಂಡಿರುವ ಬಗ್ಗೆ ವಿಶೇಷವಾಗಿ ಬೇಸರ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಸುಂಕಗಳನ್ನು ದ್ವಿಗುಣಗೊಳಿಸುವ ಅಗತ್ಯವಿದೆ ಎಂದು ಕೆನಡಿ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಟ್ರಂಪ್‌, ಸುಂಕವೇ ಎಲ್ಲ ಸಮಸ್ಯೆಗಳಿಗೂ ತ್ವರಿತ ಪರಿಹಾರ ಎಂದರು.

ಇನ್ನು ಟ್ರಂಪ್ ಅವರ ಆಡಳಿತ ಈಗಾಗಲೇ ಆಕ್ರಮಣಕಾರಿ ಸುಂಕ ನೀತಿಗಳಿಗೆ ಹೆಸರುವಾಸಿಯಾಗಿದೆ. ಚೀನಾ, ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಸುಂಕ ಹೇರಿದ ನಂತರ, ಈಗ ಭಾರತವೂ ಅವರ ಗುರಿಯಾಗಿದೆ.

ಟ್ರಂಪ್‌ ಹೇಳುವಂತೆ, ಅಮೆರಿಕಾ ಸುಂಕಗಳಿಂದ ‘ಟ್ರಿಲಿಯನ್‌ಗಟ್ಟಲೆ ಡಾಲರ್‌’ ಗಳಿಸಿದೆ ಎಂಬುದು ತಜ್ಞರಿಂದಲೇ ಪ್ರಶ್ನೆಗೆ ಒಳಗಾಗಿದೆ.

ಆದರೆ ಟ್ರಂಪ್‌ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. “ಸುಂಕ ನೀತಿ ಅಮೆರಿಕದ ಆರ್ಥಿಕತೆಯನ್ನು ಬಲಪಡಿಸುತ್ತಿದೆ” ಎಂಬುದು ಅವರ ವಾದ.

ಕೃಷಿ ವಲಯಕ್ಕೆ 12 ಬಿಲಿಯನ್ ಡಾಲರ್ (Billion Dollar) ಸಹಾಯ ಘೋಷಿಸಿರುವ ಟ್ರಂಪ್ ಆಡಳಿತ, ಈ ಸಹಾಯವನ್ನು ಸುಂಕದಿಂದ ಬಂದ ಆದಾಯದಿಂದ ಬಳಸುವುದಾಗಿ ಹೇಳಿದೆ. ಇದರಿಂದ ಅವರ ಸುಂಕ ನೀತಿಗೆ ರಾಜಕೀಯ ಬೆಂಬಲ ಕೂಡ ದೊರೆಯುತ್ತಿದೆ.

ಇದರಿಂದಾಗಿ ಇತ್ತ, ಭಾರತಕ್ಕೆ ಇದು ದೊಡ್ಡ ಆತಂಕ ಎದುರಾಗಿದ್ದು ಭಾರತ ಅಮೆರಿಕಕ್ಕೆ ಬಾಸ್ಮತಿ ಅಕ್ಕಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ಅಮೆರಿಕಾ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಹೊಸ ಸುಂಕ ಹೇರಿಕೆ ಭಾರತೀಯ ಕೃಷಿ-ರಫ್ತು ವಲಯಕ್ಕೆ ಹಿನ್ನಡೆಯಾಗಬಹುದು.

ಭಾರತ-ಅಮೆರಿಕಾ ವ್ಯಾಪಾರ ಮಾತುಕತೆಗಳು ಈಗಾಗಲೇ ನಿಧಾನಗತಿಯಲ್ಲಿ ಸಾಗುತ್ತಿವೆ. ಸುಂಕ ಭೀತಿ ಹೆಚ್ಚಿದರೆ ಮಾತುಕತೆಗಳು ಮತ್ತಷ್ಟು ಸಂಕೀರ್ಣವಾಗುವ ಸಾಧ್ಯತೆ ಇದೆ.

ಅಮೆರಿಕಾ ಮದ್ಯದ ಮೇಲೆ ಭಾರತ ವಿಧಿಸಿರುವ ಹೆಚ್ಚಿನ ಸುಂಕ ನೆನಪಿಸಿಕೊಂಡ ಟ್ರಂಪ್, ಭಾರತವೂ ಸಮನಾಗಿ ತೆರಿಗೆಗಳನ್ನು ಸರಿಪಡಿಸಬೇಕೆಂದು ಸೂಚಿಸಿದ್ದಾರೆ.

ವ್ಯಾಪಾರ ಸಮತೋಲನದ ಹೆಸರಿನಲ್ಲಿ ಒತ್ತಡ ಹೇರುವ ಟ್ರಂಪ್, ಭಾರತಕ್ಕೆ ಸ್ನೇಹಪೂರ್ಣ ಸಂಬಂಧಕ್ಕಿಂತ ವ್ಯಾಪಾರ ಬಲಪಡಿಸುವುದೇ ಮುಖ್ಯ ಎಂದು ತೋರುತ್ತಿದೆ.

ಒಟ್ಟಾರೆ, ಟ್ರಂಪ್ ಅವರ ಈ ಹೊಸ ಸುಂಕ ಎಚ್ಚರಿಕೆ ಭಾರತ–ಅಮೆರಿಕಾ ವ್ಯಾಪಾರದಲ್ಲಿ ಮತ್ತೊಂದು ಕದನದ ಸೂಚನೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿ ವ್ಯಾಪಾರವೇ ದೊಡ್ಡ ಚಟುವಟಿಕೆ.

ಇಂತಹ ಸಮಯದಲ್ಲಿ ಅಮೆರಿಕಾ ಸುಂಕ ಹೆಚ್ಚಿಸಿದರೆ, ಅದರ ಪರಿಣಾಮ ಭಾರತಕ್ಕೆ ಮಾತ್ರವಲ್ಲ, ಇಡೀ ಏಷ್ಯಾದ ಅಕ್ಕಿ ರಫ್ತು ರಾಷ್ಟ್ರಗಳಿಗೆ ಬೀಳಬಹುದು.

ವ್ಯಾಪಾರ ಒಪ್ಪಂದ ಮಾತುಕತೆ ಮರುಜೀವ ಪಡೆದು, ಸಂಕಷ್ಟ ಪರಿಹಾರವಾಗಬೇಕಿರುವಾಗ, ಟ್ರಂಪ್ ಅವರ ಕಠಿಣ ಸುಂಕ ನೀತಿ ಇನ್ನಷ್ಟು ಹೊಸ ಸಮಸ್ಯೆಗಳ ಸೃಷ್ಟಿಸುವ ಸಾಧ್ಯತೆ ಇದೆ.

ಇದನ್ನು ಓದಿ : ಉತ್ತರ ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: 20 ಮಂದಿಗೆ ಗಾಯ,ಒಬ್ಬರ ಸ್ಥಿತಿ ಗಂಭೀರ
Tags: americaexportIndiaTrump

Related News

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

January 24, 2026
ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ
ಪ್ರಮುಖ ಸುದ್ದಿ

ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ

January 24, 2026
ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ
ಪ್ರಮುಖ ಸುದ್ದಿ

ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ

January 24, 2026
ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ
ದೇಶ-ವಿದೇಶ

ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ

January 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.