Paris Olympics 2024 : ಪ್ಯಾರಿಸ್ನಲ್ಲಿ (Paris) ನಡೆಯುತ್ತಿರುವ ಒಲಿಂಪಿಕ್ಸ್ ಹಾಕಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ತಂಡ, ಸೆಮಿಫೈನಲ್ನಲ್ಲಿ (Semi-final) ಜರ್ಮಿನಿ ತಂಡದೊಂದಿಗೆ ವಿರೋಚಿತ ಸೋಲಿನೊಂದಿಗೆ ಚಿನ್ನ ಗೆಲ್ಲುವ ಕನಸು ಈ ಬಾರಿಯೂ ಭಗ್ನಗೊಂಡಿದೆ.
ತೀವ್ರ ಹಣಾಹಣಿಯಿಂದ ಪಂದ್ಯದಲ್ಲಿ ಆರಂಭದ 7ನೇ ನಿಮಿಷದಲ್ಲಿ ಭಾರತ ತಂಡ ಮೊದಲ ಗೋಲು ದಾಖಲಿಸಿತು. ನಾಯಕ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ (Harmanpreet Singh Penalty Corner) ಮೂಲಕ ಮೊದಲ ಗೋಲು ಬಾರಿಸಿದರು. ಆದರೆ 18ನೇ ಮತ್ತು 27ನೇ ನಿಮಿಷದಲ್ಲಿ ಜರ್ಮನಿ 2 ಗೋಲು ಬಾರಿಸಿ ಮೊದಲಾರ್ಧದಲ್ಲಿ 2-1 ಮುನ್ನಡೆ ಪಡೆಯಿತು. ನಂತರ ಭಾರತ ತಂಡವು 36ನೇ ನಿಮಿಷದಲ್ಲಿ ಗೋಲ್ ಹೊಡೆಯುವ ಮೂಲಕ ಸಮಬಲ ಸಾಧಿಸಿತು.
ಆದರೆ 54ನೇ ನಿಮಿಷದಲ್ಲಿ ಜರ್ಮನಿ ತಂಡ ಗೋಲು ದಾಖಲಿಸುವ ಮೂಲಕ ಅಂತಿಮ ಹಂತದಲ್ಲಿ ಮುನ್ನಡೆ ಸಾಧಿಸಿತು. ಆದರೆ ಪಂದ್ಯ ಮುಗಿಯಲು 20 ಸೆಕೆಂಡ್ ಹಾಗೂ 6 ಸೆಕೆಂಡ್ ಇದ್ದಾಗಲೂ ಭಾರತ ತಂಡಕ್ಕೆ ಗೋಲ್ ಹೊಡೆಯುವ ಅವಕಾಶ ಸಿಕ್ಕಿತ್ತು. ಆದರೆ ಚೆಂಡು ಗೋಲು ಪೆಟ್ಟಿಗೆಯ ಮೇಲಕ್ಕೆ ಹೋಗುವ ಮೂಲಕ ಫೈನಲ್ (Final) ಪ್ರವೇಶಿಸುವ ಭಾರತ ತಂಡದ ಕನಸು ಭಗ್ನಗೊಂಡಿತು.
ಕಂಚಿಗಾಗಿ ಹೋರಾಟ: ಗುರುವಾರ ನಡೆಯಲಿರುವ ಪಂಡ್ಯದಲ್ಲಿ ಭಾರತ ತಂಡ ಸ್ಪೇನ್ (Spane) ವಿರುದ್ಧ ಕಂಚಿನ ಪದಕಕ್ಕೆ ಸೆಣಸಾಡಲಿದೆ. ಈ ಹಿಂದೆ 1980 ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಫೈನಲ್ (Masco Olympic Final) ಪ್ರವೇಶಿಸಿ ಭಾರತ ತಂಡ ಚಿನ್ನವನ್ನು ಗೆದ್ದುಕೊಂಡಿತ್ತು. ಅದೇ ಭಾರತದ ಕೊನೆಯ ಫೈನಲ್ ಪಂದ್ಯವಾಗಿದೆ.