- ಇಂಗ್ಲೆಡ್ ತಂಡದ ವಿರುದ್ಧ 13 ರನ್ಗಳ ಜಯ ಸಾಧಿಸಿದ ಭಾರತದ ಮಹಿಳಾ ತಂಡ
- ಹೊಸ ಇತಿಹಾಸ ನಿರ್ಮಿಸುವಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ ಯಶಸ್ವಿ
- ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡ ಮಹಿಳಾಮಣಿಗಳು
ಭಾರತದ ಮಹಿಳಾ ತಂಡ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಇನ್ನು ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನ ಗೆದ್ದು ಬೀಗಿದೆ. ಇದೆಲ್ಲಕ್ಕಿಂತ ಹೆಚ್ಚಿನ ವಿಶೇಷ ಎಂದರೆ ಭಾರತದ
ಮಹಿಳಾ ತಂಡ ಇದೇ ಪ್ರಪ್ರಥಮ ಬಾರಿಗೆ ಇಂಗ್ಲೆಂಡ್ನಲ್ಲಿ ಏಕದಿನ ಮತ್ತು ಟಿ20 ಸರಣಿ ಎರಡರಲ್ಲೂ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.
ಇನ್ನು ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಇದಕ್ಕೂ ಮುನ್ನ ನಡೆದ 5 ಪಂದ್ಯಗಳ ಟಿ20 ಆಟದ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿತ್ತು .
ಅದರ ಬೆನ್ನಲ್ಲೇ ಇದೀಗ ಏಕದಿನ ಸರಣಿಯಲ್ಲಿಯೂ ಕೂಡ ಆತಿಥೇಯರನ್ನು ಬಗ್ಗು ಬಡಿಯುವಲ್ಲಿ ಭಾರತೀಯ ಮಹಿಳಾ ಮಣಿಗಳು ಪಡೆ ಯಶಸ್ವಿಯಾಗಿದ್ದಾರೆ.
ಅಲ್ಲಿಗೆ ಭಾರತೀಯ ವನಿತೆಯರು ಟೀಮ್ ಇಂಡಿಯಾದ 49 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿ ಗೆಲುವಿನ ಸಿಹಿ ಹಂಚಿದ್ದಾರೆ.

ಇನ್ನು ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ಗಳ ಜಯ ಸಾಧಿಸಿತ್ತು. ಆದರೆ ದ್ವಿತೀಯ ಏಕದಿನ ಪಂದ್ಯದಲ್ಲಿ
8 ವಿಕೆಟ್ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ಮಹಿಳಾ ಆಟಗಾರರು ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದ್ದರು.
ಹೀಗಾಗಿ ಮೂರನೇ ಏಕದಿನ ಪಂದ್ಯವು ಅಂತ್ಯತ ರೋಚಕವಾಗಿ ಹಾಗೂ ಫೈನಲ್ ಫೈಟ್ ಆಗಿ ಮಾರ್ಪಟ್ಟಿತು.
ಇನ್ನು ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್ಸೈಡ್ ಮೈದಾನದಲ್ಲಿ ಮೂರನೇ ಪಂದ್ಯ ನಡೆದಿತ್ತು . ಅದರಲ್ಲಿ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಬ್ಯಾಟಿಂಗ್ ಮಾಡುತ್ತೇವೆ ಎಂದು ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಭರವಸೆಯ ಆಟಗಾರ್ತಿ ಸ್ಮೃತಿ ಮಂಧಾನ 45 ರನ್ ಗಳಿಸಿ ಉತ್ತಮ ಓಪನಿಂಗ್ ಒದಗಿಸಿದ್ದರು.
ಅವರ ನಂತರದಲ್ಲಿ ಬಂದ ಹರ್ಲೀನ್ ಡಿಯೋಲ್ ಕೂಡ 45 ರನ್ಗಳ ಗಳಿಸಿ ಔಟ್ ಆದರು.
ತಂಡದ ನಾಯಕಿ ಹರ್ಮನ್ಪ್ರೀತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿಗಳ ಮನದಲ್ಲಿ ಸೋಲಿನ ಭಯ ಮೂಡುವಂತೆ ಮಾಡಿದರು.
ಇನ್ನು ಇವರು ಆರಂಭದಿಂದಲೇ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಕಾರಣ ಕೇವಲ 84 ಬಾಲ್ ಗೆ 14 ಫೋರ್ಗಳೊಂದಿಗೆ 102 ರನ್ ಗಳಿಸಿ ಭಾರತ ಮಹಿಳಾ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ಬಹುಪಾಲು ಪಾತ್ರ ವಹಿಸಿದರು.
ಅವರ ಅತ್ಯುತ್ತಮ ಬ್ಯಾಟಿಂಗ್ ಇಂದಾಗಿ ಇವರು ಭಾರತದ ಮೂರನೇ ಮಹಿಳಾ ಅತ್ಯುತ್ತಮ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇನ್ನು ಹರ್ಮನ್ಪ್ರೀತ್ ಕೌರ್ ಅವರ ಜೊತೆಯಾಗಿ ಜೆಮಿಮಾ ರೊಡ್ರಿಗಸ್ ಅವರುಸಾಥ್ ನೀಡಿ ಕೇವಲ 45 ಎಸೆತಗಳಲ್ಲಿ 50 ರನ್ ಗಳಿಸುವಲ್ಲಿ ಯಶಸ್ವಿ ಆದರು.
ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 318 ರನ್ ಗಳಿಸುವಲ್ಲಿ ಯಶಸ್ವಿ ಆಯಿತು.ಇನ್ನು 319 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ 305 ರನ್ಗಳಿಗೆ ಆಲೌಟ್ ಆಯಿತು.
ಈ ಮೂಲಕ ಭಾರತ ಮಹಿಳಾ ತಂಡವು 13 ರನ್ಗಳ ಜಯ ಗಳಿಸಿ ವಿಜಯಸಾಧಿಸುವಂತಾಯಿತು.
ಅಲ್ಲಿಗೆ 2-1 ಅಂತರದಿಂದ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಜಯ ಗಳಿಸಿದಂತಾಯಿತು.
ಇದನ್ನು ಓದಿ: ಪ್ಯಾರಿಸ್ ಡೈಮಂಡ್ ಲೀಗ್ ನಲ್ಲಿ ಬಂಗಾರ ಗೆದ್ದ ನೀರಜ್ ಚೋಪ್ರಾ: ಜೂನಿಯರ್ ವೆಬರ್ ಗೆ ಸೋಲು!
ಅಷ್ಟೇ ಅಲ್ಲದೇ ಈ ಇದೇ ಪ್ರಪ್ರಥಮ ಬಾರಿಗೆ ಭಾರತ ಮಹಿಳಾ ತಂಡ ಏಕದಿನ ಹಾಗೂ ಟಿ20 ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.