- ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡ
- ನಾಲ್ಕನೇ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದು ಬೀಗಿದ ಭಾರತ
- ಭಾರತದ ನಾಲ್ಕನೇ ಪ್ರಶಸ್ತಿ, 2026 ವಿಶ್ವಕಪ್‌ಗೆ ನೇರ ಟಿಕೆಟ್
New Delhi: ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ ಹಾಕಿ ಏಷ್ಯಾಕಪ್ (Hockey Asiacup) 2025 ಫೈನಲ್ ಪಂದ್ಯದಲ್ಲಿ ಭಾರತ ಹಾಕಿ ತಂಡ ಇತಿಹಾಸ ಸೃಷ್ಠಿಸಿದೆ.
ಹರ್ಮನ್‌ಪ್ರೀತ್ ಸಿಂಗ್ ಅವರ ನಾಯಕತ್ವದಲ್ಲಿ ಬಲಿಷ್ಠವಾಗಿ ಮೈದಾನಕ್ಕಿಳಿದ ಭಾರತ, ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ವಿರುದ್ಧ 4-1 ಅಂತರದ ಅದ್ಭುತ ಜಯ ದಾಖಲಿಸಿದೆ. (India won Hockey Asia Cup)

ಈ ಮೂಲಕ ಭಾರತ 8 ವರ್ಷಗಳ ದೀರ್ಘ ನಿರೀಕ್ಷೆಗೆ ತೆರೆದು, ನಾಲ್ಕನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು(Asia Cup Trophy) ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.
ಈ ಟೂರ್ನಿಯಲ್ಲಿ ಆರಂಭದಿಂದಲೂ ಭಾರತ ಅಜೇಯ ಪ್ರದರ್ಶನ ನೀಡಿತ್ತು. ಸೂಪರ್ 4 ಹಂತದಲ್ಲಿ ಕೊರಿಯಾ ವಿರುದ್ಧ 2-2 ಡ್ರಾ ಮಾಡಿಕೊಂಡಿದ್ದರೂ, ಫೈನಲ್‌ನಲ್ಲಿ ಆ ತಪ್ಪುಗಳನ್ನು ಸರಿಪಡಿಸಿ ಸಂಪೂರ್ಣ ಆಧಿಪತ್ಯ ಮೆರೆದಿತು.
ಎದುರಾಳಿ ತಂಡಕ್ಕೆ ಯಾವುದೇ ಅವಕಾಶ ನೀಡದೇ, ಭಾರತದ ಆಟಗಾರರು ಆಕ್ರಮಣ-ರಕ್ಷಣೆಯ ಸಮತೋಲನದಿಂದ ಪಂದ್ಯವನ್ನು ಆಡಿದ್ದಾರೆ.
ಇನ್ನು 9ನೇ ಬಾರಿ ಫೈನಲ್ (Final) ಆಡುವ ಅವಕಾಶ ಪಡೆದಿದ್ದ ಭಾರತ ತಂಡ, ಈ ಬಾರಿ ತನ್ನ ನಾಲ್ಕನೇ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕೊನೆಯ ಬಾರಿ 2017ರಲ್ಲಿ ಟ್ರೋಫಿ ಗೆದ್ದಿದ್ದ ಭಾರತ, ಈ ಯಶಸ್ಸಿನೊಂದಿಗೆ 8 ವರ್ಷಗಳ ನಿರೀಕ್ಷೆಗೆ ತೆರೆ ಎಳೆದಿದೆ. (India won Hockey Asia Cup)
ಏಷ್ಯಾಕಪ್ ಇತಿಹಾಸದಲ್ಲಿ ದಕ್ಷಿಣ ಕೊರಿಯಾ ಅತಿ ಹೆಚ್ಚು (5 ಬಾರಿ) ಚಾಂಪಿಯನ್ ಪಟ್ಟಕ್ಕೇರಿದೆ. ಇದುವರೆಗೆ ಉಭಯ ರಾಷ್ಟ್ರಗಳು 3 ಫೈನಲ್‌ಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ 2 ಬಾರಿ ಕೊರಿಯಾ ಮತ್ತು 1 ಬಾರಿ ಭಾರತ ಗೆದ್ದಿತ್ತು.
ಈ ಬಾರಿ ಭಾರತ ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ.ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಅವರ ನಾಯಕತ್ವ ಹಾಗೂ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದವು.
ಆರಂಭದಲ್ಲೇ ಆಕ್ರಮಣಶೀಲ ಆಟ ತೋರಿದ ಭಾರತ, ಅವಕಾಶ ಸಿಕ್ಕಾಗಲೇ ಗೋಲುಗಳನ್ನು ಬಾರಿಸಿ ಎದುರಾಳಿಗಳ ಸಂಪೂರ್ಣ ಒತ್ತಡಕ್ಕೆ ತಳ್ಳಿತು.
ದಕ್ಷಿಣ ಕೊರಿಯಾ (South Korea) ತಲೆ ಎತ್ತುವ ಅವಕಾಶವೇ ದೊರೆಯದಂತೆ ಮಾಡಿದ ಭಾರತದ ಆಟ, ಪ್ರೇಕ್ಷಕರಲ್ಲಿ ಸಂಭ್ರಮ ಹುಟ್ಟಿಸಿತು.
ಈ ಭರ್ಜರಿ ಗೆಲುವಿನಿಂದ ಭಾರತ ಕೇವಲ ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇ ಸೀಮಿತವಾಗಿಲ್ಲ, ಬರುವ 2026ರಲ್ಲಿ ನೆದರ್ಲ್ಯಾಂಡ್ಸ್ (Netherlands) ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ FIH ಪುರುಷರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವ ಗೌರವವನ್ನೂ ಗಳಿಸಿದೆ.
ಇದು ಮುಂದಿನ ದೊಡ್ಡ ಟೂರ್ನಿಗೆ ಭಾರತ ತನ್ನ ಸಿದ್ಧತೆಗಳನ್ನು ಬಲಪಡಿಸಲು ಒಳ್ಳೆಯ ವೇದಿಕೆಯಾಗಲಿದೆ.ಈ ವಿಜಯದಿಂದಾಗಿ ಕ್ರೀಡಾಭಿಮಾನಿಗಳು ಹಾಗೂ ಮಾಜಿ ಹಾಕಿ ಆಟಗಾರರಲ್ಲಿ ಉತ್ಸಾಹ ಹೆಚ್ಚಾಗಿದೆ.
ಭಾರತದ ಯುವ ಆಟಗಾರರ ತೇಜಸ್ವಿ ಪ್ರದರ್ಶನ, ಅನುಭವಿಗಳ ತಂತ್ರಜ್ಞಾನಿ ಕೌಶಲ್ಯ ಮತ್ತು ತಂಡದ ಒಗ್ಗಟ್ಟು ಎಲ್ಲವೂ ಸೇರಿ ಈ ಚಾಂಪಿಯನ್‌ಶಿಪ್ (Championship) ಗೆಲುವಿಗೆ ಕಾರಣವಾಗಿವೆ.
2026ರ ವಿಶ್ವಕಪ್‌ನಲ್ಲಿ ಭಾರತದ ಸಾಧನೆ ಬಗ್ಗೆ ಈಗಲೇ ಭಾರೀ ನಿರೀಕ್ಷೆಗಳು ಮೂಡಿವೆ.