• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಭಾರತದ ನಾರಿಯರಿಗೆ ಒಲಿದ ICC ಮಹಿಳಾ ವಿಶ್ವಕಪ್ ಕಿರೀಟ

Teju Srinivas by Teju Srinivas
in Sports, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
0
SHARES
26
VIEWS
Share on FacebookShare on Twitter
  • ಟೀಂ ಇಂಡಿಯಾದ ಮಹಿಳೆಯರ ಮುಡಿಗೇರಿದ ವಿಶ್ವಕಪ್‌ ಕಿರೀಟ
  • ಚೊಚ್ಚಲ ಕಪ್‌ ಗೆದ್ದ ಭಾರತ ಮಹಿಳಾ ತಂಡ
  • 52 ರನ್‌ಗಳ ಅಂತರದಿಂದ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ

Mumbai: ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 2025ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್ (Final) ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ವಿಶ್ವದ ಗಮನ ಸೆಳೆದಿದೆ. (India won ICC Women’s World Cup)

ದಕ್ಷಿಣ ಆಫ್ರಿಕಾ ವಿರುದ್ಧದ ಈ ರೋಮಾಂಚಕ ಹೋರಾಟದಲ್ಲಿ ಟೀಂ ಇಂಡಿಯಾ (Team India) 52 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ, ತನ್ನ ಚೊಚ್ಚಲ ವಿಶ್ವಕಪ್‌ ಕಿರೀಟವನ್ನು ಗೆದ್ದುಕೊಂಡಿದೆ.

 2025ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು  ಚೊಚ್ಚಲ ವಿಶ್ವಕಪ್‌ ಗೆದ್ದಿದೆ

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. (India won ICC Women’s World Cup)

ಅದಕ್ಕೆ ಪ್ರತಿಯಾಗಿ, ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ (Batting) ಅಬ್ಬರಿಸಿ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ (Wicket) ಕಳೆದುಕೊಂಡು 298 ರನ್‌ಗಳ ಭರ್ಜರಿ ಮೊತ್ತವನ್ನು ಕೂಡಿ ಹಾಕಿದೆ.

ಇನ್ನು ಪ್ರಾರಂಭದಿಂದಲೇ ಶಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಕೇವಲ 78 ಎಸೆತಗಳಲ್ಲಿ 87 ರನ್‌ಗಳ (Run) ಮಿಂಚು ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆದ್ದರು.

ಅವರ ಜೊತೆಯಲ್ಲಿ ಸ್ಮೃತಿ ಮಂಧನಾ 45 ರನ್‌ಗಳ ಕೊಡುಗೆ ನೀಡಿ ಉತ್ತಮ ಜೊತೆಯಾಟ ಕಟ್ಟಿದರು.

ಮಧ್ಯ ಕ್ರಮದಲ್ಲಿ ಜೆಮಿಮಾ ರೋಡ್ರಿಗ್ಸ್ (Jemima Rodriguez) (24) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) (20) ತಂಡದ ಮೊತ್ತವನ್ನು ಮತ್ತಷ್ಟು ಸ್ಥಿರಗೊಳಿಸಿದರು.

ಅಂತ್ಯದ ಹೊತ್ತಿನಲ್ಲಿ ದೀಪ್ತಿ ಶರ್ಮಾ ಅವರ ಪರಿಣಾಮಕಾರಿ ಆಟ ಗಮನಸೆಳೆಯಿತು.

ಅವರು ಕೇವಲ 64 ಎಸೆತಗಳಲ್ಲಿ 58 ರನ್ ಗಳಿಸಿ ಭಾರತದ ಮೊತ್ತವನ್ನು ಮೂರು ಅಂಕಿಗೆ ಎತ್ತಿದರು. ಜೊತೆಗೆ ರಿಚಾ ಘೋಷ್ (34) ಮತ್ತು ಅಮಜೌತ್ ಕೌರ್ (12) ಸಹ ಬೆಂಬಲ ನೀಡಿದರು.

ಇನ್ನು ದಕ್ಷಿಣ ಆಫ್ರಿಕಾ ಪರ ಅಯೋಭೋಂಗ್ ಖಾಕಾ ಅತ್ಯುತ್ತಮ ಬೌಲಿಂಗ್‌ (Bowling) ಪ್ರದರ್ಶನ ನೀಡಿದರು.

ಅವರು 10 ಓವರ್‌ಗಳಲ್ಲಿ ಕೇವಲ 55 ರನ್ ನೀಡಿ 3 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಅವರ ಜೊತೆಗೆ ಮಾಲ್ಬಾ ಹಾಗೂ ಟ್ರಾಯೋನ್ ತಲಾ ಒಂದು ವಿಕೆಟ್ ಪಡೆದರು.

ಆದರೆ ಭಾರತದ ಬ್ಯಾಟರ್‌ಗಳ ಹೋರಾಟದ ಎದುರು ಆಫ್ರಿಕಾ ಬೌಲರ್‌ಗಳು ದೊಡ್ಡ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಿಲ್ಲ.

299 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಚೆನ್ನಾಗಿತ್ತು.

ಓಪನರ್ ಲೋರಾ ವೋಲ್ವರ್ಡ್ ಮತ್ತು ಲೀಜ್ ಲೀ ಉತ್ತಮ ಪಾರ್ಟ್ನರ್‌ಶಿಪ್ (Patnership) ನೀಡಿದರೂ ಮಧ್ಯದ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳ ನಿಯಂತ್ರಣದ ಬೌಲಿಂಗ್ ಅವರಿಗೆ ಕಂಟಕವಾಯಿತು.

ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತೀವ್ರ ಒತ್ತಡ ಸೃಷ್ಟಿಸಿದರು.

ಅವರು ಮಧ್ಯ ಕ್ರಮದ ಬ್ಯಾಟರ್‌ಗಳನ್ನು ಶೀಘ್ರ ವಿಕೆಟ್‌ಗಳ ಮೂಲಕ ಪೆವಿಲಿಯನ್‌ಗೆ ಕಳಿಸಿದರು. ದಕ್ಷಿಣ ಆಫ್ರಿಕಾ ತಂಡ 45.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 246 ರನ್‌ಗಳಿಗೆ ಆಲೌಟ್ (Allout) ಆಯಿತು.

ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡವು ತಮ್ಮ ಮೊದಲ ಏಕದಿನ ವಿಶ್ವಕಪ್ ಟ್ರೋಫಿಯನ್ನು (Trophy) ಮುಡಿಗೇರಿಸಿಕೊಂಡಿತು.

ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಬೃಹತ್ ಕ್ಷಣವಾಗಿದ್ದು, ದೇಶದಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.

ಈ ಗೆಲುವಿನ ಪುರಸ್ಕಾರವಾಗಿ ಟೀಂ ಇಂಡಿಯಾಗೆ ₹39.78 ಕೋಟಿಯ ಭರ್ಜರಿ ಬಹುಮಾನ ಲಭಿಸಿದೆ ಇದು ವಿಶ್ವಕಪ್‌ ಇತಿಹಾಸದಲ್ಲೇ ಅತ್ಯಧಿಕ ಬಹುಮಾನದ ಮೊತ್ತ ಎನ್ನಿಸಿಕೊಂಡಿದೆ.

ಅದೇ ವೇಳೆ, ರನ್ನರ್‌ ಅಪ್‌ ಸ್ಥಾನ ಪಡೆದ ದಕ್ಷಿಣ ಆಫ್ರಿಕಾ ತಂಡಕ್ಕೆ ₹19.88 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ.

ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

Tags: CricketICCMumbaiteamindiaWomenworld cup

Related News

ಕರಾವಳಿ ಕರ್ನಾಟಕದ ಜನರೇ ಎಚ್ಚರ, ಮತ್ತೆ ಅಬ್ಬರಿಸಲಿದೆ ಮುಂಗಾರು ಮಳೆ, ಹವಾಮಾನ ಇಲಾಖೆ ಎಚ್ಚರಿಕೆ
ಪ್ರಮುಖ ಸುದ್ದಿ

ಕರಾವಳಿ ಕರ್ನಾಟಕದ ಜನರೇ ಎಚ್ಚರ, ಮತ್ತೆ ಅಬ್ಬರಿಸಲಿದೆ ಮುಂಗಾರು ಮಳೆ, ಹವಾಮಾನ ಇಲಾಖೆ ಎಚ್ಚರಿಕೆ

July 18, 2026
ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ; ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ
ದೇಶ-ವಿದೇಶ

ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ; ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ

July 18, 2026
ಸಿದ್ದರಾಮಯ್ಯ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದ ಸತೀಶ್ ಜಾರಕಿಹೊಳಿ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದ ಸತೀಶ್ ಜಾರಕಿಹೊಳಿ

July 18, 2026
ಮನೆಬಾಗಿಲಿಗೇ ಇ-ಸ್ವತ್ತು ಸೇವೆ: ಗ್ರಾಮಸ್ಥರ ಅಲೆದಾಟಕ್ಕೆ ಬ್ರೇಕ್, ಸಮಸ್ಯೆ ಪರಿಹಾರಕ್ಕೆ ಪಂಚ ಸದಸ್ಯರ ಸಮಿತಿ ರಚನೆ
ಪ್ರಮುಖ ಸುದ್ದಿ

ಮನೆಬಾಗಿಲಿಗೇ ಇ-ಸ್ವತ್ತು ಸೇವೆ: ಗ್ರಾಮಸ್ಥರ ಅಲೆದಾಟಕ್ಕೆ ಬ್ರೇಕ್, ಸಮಸ್ಯೆ ಪರಿಹಾರಕ್ಕೆ ಪಂಚ ಸದಸ್ಯರ ಸಮಿತಿ ರಚನೆ

July 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.