ಚಂಡೀಗಢ,ಜೂ.19: ಭಾರತೀಯ ಅಥ್ಲೆಟಿಕ್ಸ್ನ ದಂತಕಥೆ ಮಿಲ್ಕಾ ಸಿಂಗ್ ಶುಕ್ರವಾರ ರಾತ್ರಿ ನಿಧನರಾದರು.
ಹಾರುವ ಸಿಂಗ್ ಎಂದೇ ಖ್ಯಾತಿ ಪಡೆದದ್ದ ಭಾರತದ ಮಾಜಿ ಅಥ್ಲಿಟ್ ಮಿಲ್ಖಾ ಸಿಂಗ್ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿ, ಗುಣಮುಖರಾಗಿದ್ದರು. ಆದರೆ ಶುಕ್ರವಾರ ರಾತ್ರಿ 11.30ರ ವೇಳೆಗೆ ಮಿಲ್ಖಾ ಸಿಂಗ್ ನಿಧನರಾದರು. ಮಿಲ್ಖಾ ಅವರ ಪತ್ನಿ ನಿರ್ಮಲ್ ಅವರು ಐದು ದಿನದ ಹಿಂದೆಯಷ್ಟೇ ನಿಧನ ಹೊಂದಿದ್ದರು.
1960ರ ರೋಮ್ ಒಲಿಂಪಿಕ್ಸ್ನಲ್ಲಿ 400 ಮೀ. ಓಟದಲ್ಲಿ ಕೂದಲೆಳೆಯಲ್ಲಿ ಪದಕ ವಂಚಿತರಾಗಿದ್ದ ಮಿಲ್ಕಾ ಸಿಂಗ್. ಭಾರತೀಯ ಕ್ರೀಡಾ ಲೋಕದಲ್ಲಿ ಫ್ಲೈಯಿಂಗ್ ಸಿಂಗ್ ಎಂದೇ ಕರೆಯಲ್ಪಡುತ್ತಿದ್ದ ಮಿಲ್ಖಾ ಅವರು, ಟ್ರ್ಯಾಕ್ ಆಂಡ್ ಫೀಲ್ಡ್ ನಲ್ಲಿ ಉನ್ನತ ಸಾಧನೆ ಮಾಡಿದ್ದ ಮಾಡಿದ್ದರು. ತನ್ನ ವೇಗದಿಂದ ಗಮನ ಸೆಳೆದಿದ್ದ ಅವರು ಏಶ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಾದ ಬಳಿಕ 1958ರ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಚಿನ್ನದ ಪದಕ ಪಡೆದಿದ್ದರು.
1960ರ ರೋಮ್ ಒಲಿಂಪಿಕ್ಸ್ ನಲ್ಲಿ ಫೈನಲ್ ಹಂತ ತಲುಪಿದ್ದ ಮಿಲ್ಖಾ 400 ಮೀ ರೇಸ್ ನಲ್ಲಿ ಅತ್ಯಂತ ಸಣ್ಣ ಅಂತರದಿಂದ ಹಿಂದುಳಿದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಮಿಲ್ಖಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ನಾಯಕರು, ಕ್ರೀಡಾಪಟುಗಳು, ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.