ಕೊರೋನಾ(CoronaVirus) ನಂತರ ಭಾರತೀಯ ಚಿತ್ರರಂಗ(Indian Cinemas) ಮತ್ತೆ ಹಳಿಗೆ ಮರಳಿದೆ. 2022ರಲ್ಲಿ ಭಾರತೀಯ ಚಿತ್ರಗಳು ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಣಗಳಿಕೆಯಲ್ಲಿ ಭಾರೀ ಯಶಸ್ಸು ಕಂಡಿವೆ.
ಬಾಕ್ಸ್-ಆಫೀಸ್ನಲ್ಲಿ ಅತಿ ಹೆಚ್ಚು ಹಣವನ್ನು ದೋಚಿದ ಟಾಪ್ 5 ಭಾರತೀಯ ಚಲನಚಿತ್ರಗಳ ವಿವರ ಇಲ್ಲಿದೆ ನೋಡಿ.
ಟಾಪ್-5
ಚಿತ್ರ : ಭೂಲ್ ಭುಲೈಯಾ 2
ಭೂಲ್ ಭುಲೈಯಾ(Bhul Bhulaiya) 2 ಮೇ 2022 ರಲ್ಲಿ ಬಿಡುಗಡೆಯಾಗಿದೆ. ಇದು ಹಾಸ್ಯ ಚಿತ್ರವಾಗಿದ್ದು ಅಪಾರ ಜನಪ್ರಿಯತೆ ಗಳಿಸಿದೆ. ಭೂಲ್ ಭುಲೈಯಾ 2 ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ಟಬು ಮತ್ತು ರಾಜ್ಪಾಲ್ ನೌರಂಗ್ಯಾದವ್ ಮುಖ್ಯ ತಾರಾಗಣದಲ್ಲಿದ್ದಾರೆ. ಇನ್ನು ಈ ಬಜೆಟ್ ಸುಮಾರು ರೂ. 80 ಕೋಟಿ ರೂ. ಆಗಿದ್ದು, ಮೊದಲ ದಿನವೇ ಚಿತ್ರ ವಿಶ್ವಾದ್ಯಂತ 20 ಕೋಟಿ ರೂ. ಸಂಗ್ರಹ ಮಾಡಿತ್ತು. ಇಲ್ಲಿಯವರೆಗೆ ವಿಶ್ವಾದ್ಯಂತ ಈ ಚಿತ್ರ 262 ಕೋಟಿ ರೂ. ಗಳಿಕೆ ಮಾಡಿದೆ.
ಟಾಪ್ -4
ಚಿತ್ರ : ದಿ ಕಾಶ್ಮೀರಿ ಫೈಲ್(The Kashmir Files)
ಈ ಚಿತ್ರದಲ್ಲಿ 1990ರಲ್ಲಿ ಕಣಿವೆರಾಜ್ಯ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕಥನವಿದೆ. ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿಜೋಷಿ ನಟಿಸಿದ್ದಾರೆ. ಈ ಚಿತ್ರದ ಬಜೆಟ್ 20 ಕೋಟಿ ರೂ. ಮಾತ್ರ. ಆದರೆ ಇಲ್ಲಿಯವರೆಗೆ ಈ ಚಿತ್ರ ವಿಶ್ವದಾದ್ಯಂತ ಅಪಾರ ಹಣ ಗಳಿಕೆ ಮಾಡಿದೆ. ಭಾರತದಲ್ಲಿ 290 ಕೋಟಿ ರೂ. ಮತ್ತು ವಿದೇಶದಲ್ಲಿ 46 ಕೋಟಿ ರೂ.ಗಳಿಸಿದ್ದು, ಒಟ್ಟು 336 ಕೋಟಿ ರೂ.ಲಾಭ ಮಾಡಿದೆ.
ಟಾಪ್ -3 ಚಿತ್ರ : ವಿಕ್ರಮ್(Vikram) ಇದೊಂದು ತಮಿಳು(Tamil) ಚಿತ್ರವಾಗಿದ್ದು, ಸರಣಿ ಹತ್ಯೆಗಳ ಕುರಿತಾದ ಸಾಹಸಮಯ ಚಿತ್ರವಾಗಿದ್ದು, ಇದನ್ನು ಕಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ವಿಜಯ ಸೇತುಪತಿ, ಫಹದ್ ಫಾಸಿಲ್ ನಟಿಸಿದ್ದಾರೆ. ಜೂನ್ನಲ್ಲಿ ಚಿತ್ರ ತೆರೆಕಂಡಿದೆ. ಈ ಚಿತ್ರದ ಬಜೆಟ್ ಸುಮಾರು 120 ಕೋಟಿ ರೂ.ಆಗಿದೆ. ಈ ಚಿತ್ರ ಭಾರತದಲ್ಲಿ 265 ಕೋಟಿ ರೂ. ಮತ್ತು ವಿದೇಶಗಳಲ್ಲಿ 120 ಕೋಟಿ ರೂ. ಒಟ್ಟು 385 ಕೋಟಿ ರೂ.ಗಳಿಕೆ ಮಾಡಿದೆ.
ಟಾಪ್-2 ಚಿತ್ರ : ಆರ್ಆರ್ಆರ್(RRR) ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶಿಸಿದ್ದಾರೆ. ಆರ್ಆರ್ಆರ್ ಚಿತ್ರ ಬಹುತಾರಾಗಣದ ಚಿತ್ರವಾಗಿದೆ. ಅಜಯ್ ದೇವಗನ್, ಜೂ.ಎನ್ಟಿಆರ್, ರಾಮ್ ಚರಣ್, ಆಲಿಯಾಭಟ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಬಜೆಟ್ ಸುಮಾರು 450 ಕೋಟಿ ರೂ. ಆಗಿದೆ. ಭಾರತದಲ್ಲಿ 920 ಕೋಟಿ ರೂ. ಮತ್ತು ವಿದೇಶಗಳಲ್ಲಿ 215 ಕೋಟಿ ರೂ. ಸೇರಿ ಒಟ್ಟು 1136 ಕೋಟಿ ರೂ.ಗಳಿಸಿದೆ. https://vijayatimes.com/social-media-influencer-kaby-lame/
ಟಾಪ್-1
ಚಿತ್ರ : ಕೆಜಿಎಫ್ ಚಾಪ್ಟರ್ 2(KGF Chapter 2)
ಇದು ಕನ್ನಡದ ಆಕ್ಷನ್ ಚಿತ್ರವಾಗಿದೆ. ಈ ವರ್ಷದ ಏಪ್ರಿಲ್ನಲ್ಲಿ ಈ ಸಿನಿಮಾ ತೆರೆಕಂಡಿದೆ. ಈ ಚಿತ್ರದಲ್ಲಿ ಯಶ್(Yash), ಸಂಜಯ ದತ್, ರವೀನಾ ಟಂಡನ್ ನಟಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.