New Delhi : ದೇಶಾದ್ಯಂತ ಸಂಚರಿಸುವ ಎಲ್ಲ ರೈಲುಗಳ(Train) ಚಲನೆಯ ಸಮಯವನ್ನು ನಿಖರವಾಗಿ ಪತ್ತೆಹಚ್ಚಲು ಭಾರತೀಯ ರೈಲ್ವೆಯು(Indian Railways took ISRO Help)ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸಹಯೋಗದೊಂದಿಗೆ ಅಭಿವೃದ್ದಿಪಡಿಸಿದೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯವು, ಭಾರತೀಯ ರೈಲ್ವೇಯು ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆಯನ್ನು (RTIS) ಸ್ಥಾಪಿಸುತ್ತಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ(Indian Railways took ISRO Help) “ಆಗಮನ, ನಿರ್ಗಮನ ಅಥವಾ ಓಟ ಸೇರಿದಂತೆ ನಿಲ್ದಾಣಗಳಲ್ಲಿ ರೈಲು ಚಲನೆಯ ಸಮಯವನ್ನು ಸ್ವಯಂಚಾಲಿತವಾಗಿ ದಾಖಲಿಸಿಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಕಂಟ್ರೋಲ್ ಆಫೀಸ್ ಅಪ್ಲಿಕೇಶನ್ (COA) ವ್ಯವಸ್ಥೆಯಲ್ಲಿ ರೈಲು ಸಂಚರಿಸುವ ಮಾಹಿತಿಯು ದಾಖಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಹೊಸದಾಗಿ ಪ್ರಾರಂಭಿಸಿದ ಚಾಟ್ಬಾಟ್ ಬೀಟಾ ವ್ಯವಸ್ಥೆಯು ಪ್ರಯಾಣಿಕರಿಂದ ಗಮನಾರ್ಹ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

1 ಶತಕೋಟಿ ಜನರು ಇದನ್ನು ಬಳಸಿದ್ದಾರೆ ಎಂದು IRCTC ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸಲು ಹೊಸ ಅನುಕೂಲಕರ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಗ್ರಾಹಕರು ಧ್ವನಿ, ಚಾಟ್ ಮತ್ತು ಕ್ಲಿಕ್ ಆಧಾರಿತ ವ್ಯವಸ್ಥೆಯ ಮೂಲಕ ಸಿಸ್ಟಮ್ನೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
ಇದಕ್ಕೆ ಯಾವುದೇ ಪಾಸ್ವರ್ಡ್ಗಳ ಅಗತ್ಯವಿಲ್ಲ ಮತ್ತು ಒನ್ ಟೈಮ್ ಪಾಸ್ವರ್ಡ್ (OTP) ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ರೈಲು ಟಿಕೆಟ್ ಅನ್ನು ಸಂವಾದಾತ್ಮಕ ರೀತಿಯಲ್ಲಿ ಕಾಯ್ದಿರಿಸಬಹುದು, PNR ಸ್ಥಿತಿಯನ್ನು ಪರಿಶೀಲಿಸುವುದು, ಟಿಕೆಟ್ಗಳನ್ನು ರದ್ದುಗೊಳಿಸುವುದು, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವುದು,
ಇದನ್ನೂ ಓದಿ : https://vijayatimes.com/dead-body-kept-18-months-in-home/
ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ತತ್ಕಾಲ್ ಸಮಯಗಳಂತಹ ಪ್ರಶ್ನೆಗಳಿಗೆ ಉತ್ತರಿಸುವಂತಹ ಹಲವು ವೈಶಿಷ್ಟ್ಯಗಳನ್ನು ಈ ವ್ಯವಸ್ಥೆ ಹೊಂದಿದೆ.
- ಮಹೇಶ್.ಪಿ.ಎಚ್