Indian stock market is in danger: Rahul Gandhi says country’s retail investors should keep their wealth
New Delhi: ಕಳೆದ ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು (American Hindenburg Research Institute) ಸೆಬಿ ಮುಖ್ಯಸ್ಥರ ಮೇಲೆ ಮಾಡಿರುವ ಆರೋಪಗಳು ಭಾರತದ ಷೇರುಪೇಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ.ಇದೀಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಷೇರುಪೇಟೆಯ ವಿಶ್ವಾಸಾರ್ಹತೆಯ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ದೇಶದ ರಿಟೇಲ್ (Retail) ಹೂಡಿಕೆದಾರರ ಸಂಪತ್ತು ಅಪಾಯದಲ್ಲಿದೆ ಕಷ್ಟಪಟ್ಟು ಗಳಿಸಿದ ಸಂಪತ್ತನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಹಳ ಅಪಾಯವಿದೆ. ಈ ಹಿಂದೆ ಕೂಡ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಈ ಕುರಿತಾಗಿ ಹೇಳಿತ್ತು. ಆದರೆ ಎಲ್ಲರೂ ಸೇರಿ ಅದನ್ನು ಅಲ್ಲಗಳೆದಿದ್ದರು.ಷೇರು ಮಾರುಕಟ್ಟೆಯ ಮೇಲೆ ನಿಗಾವಹಿಸುವ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯು (SEBI) ಹೊಂದಾಣಿಗೆ ಒಳಪಟ್ಟಿದೆ, ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಇದನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಒಂದು ವೇಳೆ ನೀವು ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ಪಂದ್ಯವನ್ನು ವೀಕ್ಷಿಸುತ್ತಿದ್ದೀರಿ ಎಂದುಕೊಳ್ಳಿ.ಭಾರತ ಮತ್ತು ಆಸ್ಟ್ರೇಲಿಯ ನಡುವೆ ಪಂದ್ಯ ನಡೆಯುತ್ತಿದೆ. ಆ ಪಂದ್ಯವನ್ನು ವೀಕ್ಷಿಸುವತ್ತಿರುವವರು ಹಾಗೂ ಆಟ ಆಡುತ್ತಿರುವವರಿಗೆ ಗೊತ್ತಾಗುತ್ತಿದೆ.
ಅಲ್ಲಿನ ಅಂಪೈರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು. ಆಗ ಆ ಪಂದ್ಯದ ಕಥೆ ಏನಾಗುತ್ತದೆ? ಅದರ ಅಂತಿಮ ಫಲಿತಾಂಶ ಏನಾಗುತ್ತದೆ? ಆ ಪಂದ್ಯ ಭಾಗಿಯಾದವರಿಗೆ ಹೇಗೆ ಅನ್ನಿಸಬೇಕು ಹೇಳಿ.ಅದೇ ರೀತಿಯ ಪರಿಸ್ಥಿತಿಯು ಈಗ ಷೇರುಪೇಟೆಯಲ್ಲಿದೆ. ಎಂದು ಹೇಳುವ ಮೂಲಕ ಅಪಾಯ ಸೂಚನೆಯನ್ನು ಕೊಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹೆಚ್ಚೆಚ್ಚು ಜನರು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬೇಗನೆ ಶ್ರೀಮಂತರಾಗಬಹುದು ಆಸೆಗೆ ಪ್ರಾಮಾಣಿಕವಾಗಿ ಹಾಗೂ ಕಷ್ಟಪಟ್ಟು ದುಡಿದ ಉಳಿತಾಯದ ಹಣವನ್ನು ಅಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅದರ ಅವರ ಹೂಡಿಕೆಗಳು ಈಗ ತೀವ್ರ ಅಪಾಯದಲ್ಲಿದೆ. ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಅದನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ. ಇಲ್ಲಿ ಷೇರುಪೇಟೆಯ ನಿಯಂತ್ರಕರೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎಂದು ಹಿಂಡನ್ಬರ್ಗ್ ವರದಿಯ ಆರೋಪವನ್ನು ಪ್ರಸ್ತಾಪಿಸಿ, ವಿವರಿಸಿದ್ದಾರೆ.
Indian Stock Market News Today
The accusations made by the American Hindenburg Research Institute on the head of SEBI are more likely to affect the Indian stock market. Now the leader of the opposition in the Lok Sabha, Rahul Gandhi, has spoken words of caution about the credibility of the stock market. He has released a video message and suggested that the wealth of retail investors in the country is at risk to save their hard-earned wealth.
There is a lot of risk in the Indian stock market. Hindenburg Research Institute had said about this earlier too. But everyone together denied it. The Securities and Exchange Board of India (SEBI) which oversees the stock market is under scrutiny, Rahul Gandhi said that it is my duty to bring this to your attention as the Leader of the Opposition in the Lok Sabha.
Suppose you are watching an international cricket match. The match is going on between India and Australia. Those who are watching that match and those who are playing the game know it. The umpire there has adjusted. So what will be the story of that match? What will be the end result? Tell me how those who participated in that match must have felt. The same situation is now in the stock market. He has given a warning by saying that.
Over the last few years more and more people are investing in the stock market. They are investing their hard-earned savings with the desire to get rich quickly. Its investments are now at grave risk. It is my duty as Leader of Opposition in Lok Sabha to bring it to your notice. Here the regulator of the stock market has adjusted. He proposed and explained the allegation of the Hindenburg Report.