ವಾಷಿಂಗ್ಟನ್ (Washington) (ಅಮೇರಿಕಾ) : ಅಮೇರಿಕಾದ (American) ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ಸ್ವೀಕರಿಸಿದ ನಂತರ ಹಲವು ಮಹತ್ವದ ನೀತಿಗಳನ್ನು ರೂಪಿಸಲು ಮುಂದಾಗಿದ್ದು, ಈ ನೀತಿಗಳು ವಲಸಿಗರ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿವೆ. H1B ವೀಸಾ (H1B visa) ನೀತಿಯ ಪರಿಷ್ಕರಣೆ, ಹೊಸ ಪೌರತ್ವ ಕಾನೂನುಗಳು (New citizenship laws) ಅಮೇರಿಕಾದಲ್ಲಿರವ ವಲಸಿಗ ಸಮುದಾಯಗಳನ್ನು (Immigrant communities) ಆತಂಕಕ್ಕೆ ತಳ್ಳಿದೆ. ಇದೀಗ ಅಮೇರಿಕಾದಲ್ಲಿ F-1 ವೀಸಾದಡಿಯಲ್ಲಿ (F-1 visa) ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು (Indian students) ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು (Indian students in America) ಅಧಿಕ ಖರ್ಚುಗಳನ್ನು ನಿಭಾಯಿಸಲು ಪಾರ್ಟ್ಟೈಮ್ ಕೆಲಸಕ್ಕೆ ಹೋಗುತ್ತಾರೆ. ಇದರಿಂದಾಗಿ ಅವರ ನಿತ್ಯದ ಭಾರೀ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. F-1 ವೀಸಾದಡಿಯಲ್ಲಿ ಇದಕ್ಕೆ ಅವಕಾಶವೂ ಇದೆ. ಆದರೆ ವಲಸಿಗ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆ ಮಾತ್ರ ಕೆಲಸ ಮಾಡಬೇಕು. ಅದಕ್ಕಿಂತ ಹೆಚ್ಚಿನ ಗಂಟೆಗಳ ಕೆಲಸಗಳನ್ನು ಮಾಡುವಂತಿಲ್ಲ. ಆದರೆ ಭಾರೀ ಖರ್ಚುಗಳನ್ನು ನಿರ್ವಹಣೆ ಮಾಡುವ ದೃಷ್ಠಿಯಿಂದ ವಿದ್ಯಾರ್ಥಿಗಳು ಪೆಟ್ರೋಲ್ ಬಂಕ್ (Petrol station), ಗ್ಯಾಸ್ ಸ್ಟೇಷನ್ಗಳು (Gas stations), ಕೆಫೆಗಳು (Cafes) ಸೇರಿದಂತೆ ಇತರೆ ಮಳಿಗೆಗಳಲ್ಲಿ ಹೆಚ್ಚುವರಿ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ವಲಸೆ ನೀತಿಗಳು ಕಠಿಣವಾಗಿದ್ದು, ಗಡೀಪಾರು ಭೀತಿಯಿಂದ ವಿದ್ಯಾರ್ಥಿಗಳು ಈ ಹೆಚ್ಚುವರಿ ಕೆಲಸಗಳನ್ನು ಮಾಡುತ್ತಿಲ್ಲ. ಇದರಿಂದಾಗಿ ಅಮೇರಿಕಾದಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಇದರಿಂದಾಗಿ ಭಾರತದಲ್ಲಿರುವ ಸ್ನೇಹಿತರು ಮತ್ತು ಕುಟುಂಬದಿಂದ ಸಾಲ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾಬ್ಯಾಸಕ್ಕಾಗಿ ಭಾರತದ ಬ್ಯಾಂಕ್ಗಳಲ್ಲಿ ಭಾರೀ ಸಾಲ ಪಡೆದುಕೊಂಡು ಹಲವು ವಿದ್ಯಾರ್ಥಿಗಳು ಹೋಗಿದ್ದು, ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.
ಈ ಬಗ್ಗೆ ತನ್ನ ನೋವನ್ನು ಹಂಚಿಕೊಂಡಿರುವ ವಿದ್ಯಾರ್ಥಿಯೊರ್ವ, “ನಾನು ಪ್ರತಿ ದಿನ ಕೆಫೆಯಲ್ಲಿ ಕೆಲಸ ಮಾಡಿ, ಗಂಟೆಗೆ 7 ಡಾಲರ್ ಸಂಪಾದನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೆ. ಆದರೆ ವಲಸೆ ಅಧಿಕಾರಿಗಳು ಅನಧಿಕೃತ ಕೆಲಸಗಳ ಮೇಲೆ ಕ್ರಮ ಕೈಗೊಳ್ಳಬಹುದು ಎಂಬ ಆತಂಕದಿಂದ ಕೆಲಸ ಬಿಟ್ಟಿದ್ದೇನೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. 42 ಲಕ್ಷ ರೂ. ಸಾಲ ಮಾಡಿಕೊಂಡು ನಾನು ಅಮೆರಿಕದಲ್ಲಿ ಓದಲು ಬಂದಿದ್ದೇನೆ. ಇದೀಗ ಮತ್ತಷ್ಟು ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಇಲಿನಾಯ್ಸ್ನಲ್ಲಿ (Illinois) ಪದವಿ ವಿದ್ಯಾರ್ಥಿಯಾಗಿರುವ ಅರ್ಜುನ್ ಹೇಳಿತ್ತಾರೆ.
ತಪಾಸಣೆಯಿಂದ ಕೆಲಸ ಮಾಡುವುದನ್ನು ನಿಲ್ಲಿಸಿದ ವಿದ್ಯಾರ್ಥಿಗಳು : ಟ್ರಂಪ್ (Trump) ಅಧಿಕಾರಕ್ಕೆ ಬಂದ ನಂತರ ವಲಸಿಗರ ಕೆಲಸಗಳ ಮೇಲೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಹೆಚ್ಚುವರಿ ಕೆಲಸ ಮಾಡುವ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗುತ್ತಿದೆ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಆತಂಕಗೊಂಡು, ಹೆಚ್ಚುವರಿ ಕೆಲಸಗಳ ಮಾಡುವುದನ್ನೇ ನಿಲ್ಲಿಸಿದ್ದಾರೆ. ಗಡೀಪಾರು (Deportation) ಅಥವಾ ವಿದ್ಯಾರ್ಥಿ ವೀಸಾ (Student visa) ಕಳೆದುಕೊಳ್ಳುವ ಭೀತಿಯಿಂದ ಕೆಲಸ ತೊರೆಯುತ್ತಿದ್ದಾರೆ.