ದೆಹಲಿ, ಆಗಸ್ಟ್ 02: ಭಾರತೀಯರು 5,000 ಕೋಟಿ ರೂ.ಗಿಂತ ಹೆಚ್ಚು ಖರ್ಚು ಕಳೆದ ಆರು ತಿಂಗಳಲ್ಲಿ ಮಾಡಿದ್ದಾರೆ. ಅದು ಯಾವುದೇ ಕಾರು(Car) ಅಥವಾ ಐಫೋನ್ಗಳಿಗೆ(I Phone) ಅಲ್ಲ,ಬದಲಾಗಿ ಸೌಂದರ್ಯವರ್ಧಕ ಉತ್ಪನ್ನಗಳಿಗೋಸ್ಕರ. ಹೌದು ಭಾರತದ ಟಾಪ್ 10 ನಗರಗಳಲ್ಲಿ ಲಿಪ್ಸ್ಟಿಕ್(Lipstick), ನೇಲ್ ಪಾಲಿಷ್(Nail Polish) ಮತ್ತು ಐಲೈನರ್(Eye Liner) ಸೇರಿದಂತೆ 100 ಮಿಲಿಯನ್ಗಿಂತಲೂ ಹೆಚ್ಚು ಕಾಸ್ಮೆಟಿಕ್ ಉತ್ಪನ್ನಗಳು(Cosmetic Product) ಕಳೆದ ಆರು ತಿಂಗಳಲ್ಲಿ ಮಾರಾಟವಾಗಿವೆ ಎಂದು ಭಾರತದಲ್ಲಿ ಸೌಂದರ್ಯವರ್ಧಕಗಳ ಕಾಂತಾರ್ ವರ್ಲ್ಡ್ಪ್ಯಾನೆಲ್ನ(Kantar World Panel) ವಿಭಾಗದ ಮೊದಲ ಅಧ್ಯಯನದ ಪ್ರಕಾರ ತಿಳಿದು ಬಂದಿದೆ.

ವರದಿಯ ಪ್ರಕಾರ,ಗ್ರಾಹಕರು ಸುಮಾರು 5,000 ಕೋಟಿ ರೂ.ಗಿಂತ ಹೆಚ್ಚು ಈ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಖರ್ಚು ಮಾಡಿದ್ದಾರೆ,ಇದರಲ್ಲಿ ಆನ್ಲೈನ್ನಲ್ಲಿ(Online) 40 ಪ್ರತಿಶತದಷ್ಟು ಖರೀದಿಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆನ್ಲೈನ್ ಮತ್ತು ಆಫ್ಲೈನ್(Offline) ಎರಡರಲ್ಲೂ ಸೌಂದರ್ಯವರ್ಧಕಗಳನ್ನ ಖರೀದಿಸುವ ಕೆಲಸ ಮಾಡುವ ಮಹಿಳೆಯರು, 1.6 ಪಟ್ಟು ಹೆಚ್ಚು ಸೌಂದರ್ಯವರ್ಧಕಗಳ ಮೇಲೆ ಖರ್ಚು ಮಾಡುತ್ತಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನೂ ಓದಿ : ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವೇ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಳಿಸಿತ್ತು: ಸಿದ್ದರಾಮಯ್ಯ
ಕಾಂತಾರ್ನ ವರ್ಲ್ಡ್ ಪ್ಯಾನೆಲ್ ವಿಭಾಗದ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಕೆ ರಾಮಕೃಷ್ಣನ್(K.Ramakrishnan) ತಿಳಿಸಿರುವ ಪ್ರಕಾರ ಇತ್ತೀಚೆಗೆಉದ್ಯೋಗಗಳಿಗೆ ಹೆಚ್ಚಿನ ಮಹಿಳೆಯರು ಸೇರ್ಪಡೆಯಾಗುತ್ತಿರುವುದರಿಂದ, ಸೌಂದರ್ಯವರ್ಧಕಗಳ ಬಳಕೆ ಭವಿಷ್ಯದಲ್ಲಿ ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಏಷ್ಯಾ(Asia) ವಿಶ್ವದ ಸೌಂದರ್ಯ ಕೇಂದ್ರವಾಗಿದೆ,ಜಾಗತಿಕವಾಗಿ ಸೌಂದರ್ಯ ಪ್ರವೃತ್ತಿಗಳ ಮೇಲೆ ದಕ್ಷಿಣ ಕೊರಿಯಾದಂತಹ(South Korea) ದೇಶಗಳು ಪ್ರಭಾವ ಬೀರುತ್ತಿವೆ ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಗ್ರಾಹಕರು ಬಣ್ಣದ ಸೌಂದರ್ಯವರ್ಧಕಗಳ ಮೇಲೆ ಸರಾಸರಿ 1,214 ರೂ. ಕಳೆದ ಆರು ತಿಂಗಳಲ್ಲಿ ಖರ್ಚು ಮಾಡಿದ್ದಾರೆ ಒಟ್ಟು ಮಾರಾಟದಲ್ಲಿ ಶೇಕಡಾ 38 ರಷ್ಟನ್ನು ಈ ಲಿಪ್ಸ್ಟಿಕ್ ಉತ್ಪನ್ನಗಳು ಹೊಂದಿವೆ, ನಂತರ ಉಗುರು ಉತ್ಪನ್ನಗಳು ಕೂಡ ಈ ಲಿಸ್ಟ್ ನಲ್ಲಿ ಸೇರಿವೆ. ತಮ್ಮ ಸೌಂದರ್ಯ ಖರೀದಿಗಳನ್ನು ಈ ಮೂಲಕ ಭಾರತೀಯ ಶಾಪರ್ಗಳು ವೈವಿಧ್ಯಗೊಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್, 2ನೇ ಬಾರಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ
ಇತ್ತೀಚೆಗೆ ಸಾಂಪ್ರದಾಯಿಕ ಉತ್ಪನ್ನಗಳಾದ ಕಾಜಲ್(Kajal) ಮತ್ತು ಲಿಪ್ಸ್ಟಿಕ್ಗಳನ್ನು ಭಾರತೀಯರು ಅನೇಕ ರೀತಿಯಲ್ಲಿ ಅನ್ವೇಷಿಸುತ್ತಿದ್ದಾರೆ ಮತ್ತು ವಿವಿಧ ಸಂದರ್ಭಗಳಲ್ಲಿ ಮತ್ತು ದೈನಂದಿನ ಉಡುಗೆಗಳಿಗೆ ಅನುಗುಣವಾಗಿ ಪ್ರೈಮರ್(Primer), ಐ ಶ್ಯಾಡೋ(Eye Shadow) ಮತ್ತು ಕನ್ಸೀಲರ್ಗಳಂತಹ ವಸ್ತುಗಳನ್ನು ಇತೀಚೆಗೆ ಹೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಟ್ರೆಂಡ್ ನಿಂದ(Trend) ತಿಳಿದುಕೊಳ್ಳಬಹುದು.
ರಶ್ಮಿತಾ ಅನೀಶ್