Mumbai: ದೇಶದ ಆರ್ಥಿಕ ರಾಜಧಾನಿ (State) ಎಂದು ಕರೆಯಲ್ಪಡುವ ಮುಂಬಯಿಯಲ್ಲಿ (Mumbai) 26 ನವೆಂಬರ್ 2008ರಂದು ನಡೆದ ಭಯೋತ್ಪಾದಕ ದಾಳಿಗೆ (Terrorist attacks) 16 ವರ್ಷಗಳು ಕಳೆದಿವೆ. ಅಮಾಯಕ ಜನರನ್ನು (Inosent People) ಕಳೆದುಕೊಂಡ (26/11)ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ. ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ದೇಶ ಹಾಗೂ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರ (Warriors) ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯನೂ ನಮನ ಸಲ್ಲಿಸುತ್ತಿದ್ದಾರೆ.
ಲಷ್ಕರ್-ಇ-ತೊಯ್ಬಾ (Lashkar-e-Taiba) ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ (Martyrs) ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ (CP Radhakrishnan) ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುಷ್ಪ (Eknath Shinde Pushpa) ನಮನ ಸಲ್ಲಿಸಿದ್ದಾರೆ. ಇನ್ನು ಲಷ್ಕರ್-ಇ-ತೊಯ್ಬಾ (Lashkar-e-Taiba) ಭಯೋತ್ಪಾದಕ ಸಂಘಟನೆಯ 10 ಮಂದಿ ಉಗ್ರರು ನ.21 ಪಾಕಿಸ್ತಾನದಿಂದ (Pakistan) ಬೋಟ್ ಮೂಲಕ ಮುಂಬಯಿ ಪ್ರವೇಶಿಸಿದ್ದರು. ಬಳಿಕ ಗುರುತು ಮರೆಸಿಕೊಂಡು ಮೂರು ದಿನಗಳ ಕಾಲ ಹೋಟೆಲ್, ರೈಲ್ವೇ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂಹೆಚ್ಚು ಕಡೆಗಳಲ್ಲಿ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದರು.
ಅದರಲ್ಲೂ ಪ್ರತಿಷ್ಟಿತ ತಾಜ್ ಹೋಟೆಲ್ ಉಗ್ರರ (Taj Hotel Ugrara) ಬಾಂಬ್ ದಾಳಿಗೆ (Bombing) ಹೊತ್ತಿ ಉರಿಯಿತು. ಭಯಾನಕ ದಾಳಿಯಲ್ಲಿ 174 ಜನರು ಮ*ಣ ಹೊಂದಿದ್ದರೆ, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಮುಂಬಯಿ (Mumbai) ದಾಳಿ ನಡೆಸಿದ 10 ಭಯೋತ್ಪಾದಕರ ಪೈಕಿ 9 ಉಗ್ರರನ್ನು ಭದ್ರತಾ ಪಡೆಯ ಸೈನಿಕರು ಹೊಡೆದುರುಳಿಸಿದ್ದರು. ಗುಂಡಿನ ದಾಳಿ ನಡೆಸಿ 58 ಜನರನ್ನು ಹ*ಗೈದ ಅಜ್ಮಲ್ ಕಸಬ್‌ನನ್ನು (Ajmal Kasab) ಸೆರೆ ಹಿಡಿಯಲಾಗಿತ್ತು. ಕಸಬ್‌ನನ್ನು 2012 ನವೆಂಬರ್ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿದ್ದ ದಾಳಿ ನಡೆದು ಇಂದಿಗೆ 16 ವರ್ಷಗಳು ಕಳೆದಿದ್ದರೂ, ಮಾಸದ ಸಾಕಷ್ಟು ನೆನಪುಗಳು ಹಾಗೇ ಉಳಿದುಕೊಂಡಿವೆ. ಭಯೋತ್ಪಾದಕ ದಾಳಿಯಲ್ಲಿ ಪೊಲೀಸರು, ಭದ್ರತಾ ಪಡೆ ಯೋಧರು ಹುತಾತ್ಮರಾಗಿದ್ದಾರೆ. ಅವರನ್ನು ಈ ದಿನ ಸ್ಮರಿಸಿ ಭಾವಪೂರ್ಣ (Heartfelt tribute) ನಮನ ಸಲ್ಲಿಸಲಾಯಿತು.