Visit Channel

‘ದೇವರ ಸ್ವಂತ ಉದ್ಯಾನವನ’ ಈ ಗ್ರಾಮ : ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಚವಾದ ಗ್ರಾಮ ಇರುವುದು ನಮ್ಮ ಭಾರತದಲ್ಲಿ!

Cleanest Village

ಏಷ್ಯಾ(Asia) ಖಂಡದಲ್ಲಿಯೇ ಅತ್ಯಂತ ಸ್ವಚ್ಛ ಗ್ರಾಮ(Clean Town) ಇರುವುದು ನಮ್ಮ ಭಾರತದಲ್ಲೇ ಎನ್ನುವುದು ಹೆಮ್ಮೆಯ ವಿಚಾರ.

cleanest town

ಈ ಗ್ರಾಮವನ್ನು ‘ದೇವರ ಸ್ವಂತ ಉದ್ಯಾನವನ’(God’s Own Park) ಎಂದೂ ಕರೆಯಲಾಗುತ್ತದೆ. ಹೌದು, 2003ರಲ್ಲಿ ಮೇಘಾಲಯದ(Meghalaya) ಮಾವ್ಲಿನಾಂಗ್‌(Maavlinong) ಗ್ರಾಮಕ್ಕೆ ಏಷ್ಯಾದ ಸ್ವಚ್ಛ ಗ್ರಾಮ ಪ್ರಶಸ್ತಿ ದೊರೆತಿದೆ. ಶೇ. 100ರಷ್ಟು ಸಾಕ್ಷರತೆ(Litracy) ಮತ್ತು ಮಹಿಳಾ ಸಬಲೀಕರಣ(Women Empowerment) ಸಾಧಿಸಿದ ಹಿರಿಮೆಯೂ ಈ ಗ್ರಾಮಕ್ಕಿದೆ. ಇನ್ನು ಶುಚಿತ್ವವೇ ಈ ಹಳ್ಳಿಯ ಜನರ ಧ್ಯೇಯವಾಗಿದೆ. 2007 ರಲ್ಲೇ ಈ ಗ್ರಾಮದ ಎಲ್ಲ ಮನೆಗಳೂ ಶೌಚಾಲಯವನ್ನು ಹೊಂದಿದ್ದವು. ಹಾಗೆಯೇ, ಪ್ರತಿ ಮನೆಯ ಎದುರು ಕೂಡ ಬಿದಿರಿನಿಂದ ತಯಾರಾದ ಕಸದ ಬುಟ್ಟಿಗಳಿರುತ್ತವೆ.

ಮರದ ಒಣ ಎಲೆಗಳ ಸಮೇತ ಎಲ್ಲ ತ್ಯಾಜ್ಯವೂ ಕಸದ ಬುಟ್ಟಿ ಸೇರುತ್ತದೆ. ಮಾವ್ಲಿನಾಂಗ್‌ ನಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಧೂಮಪಾನವನ್ನು(Smoking) ನಿಷೇಧಿಸಲಾಗಿದ್ದು, ಧೂಮಪಾನ ಮಾಡಿದರೆ ಅದಕ್ಕೆ ಕಠಿಣ ಶಿಕ್ಷೆಯನ್ನೂ ಕೂಡ ವಿಧಿಸಲಾಗುತ್ತದೆ. ಇಲ್ಲಿನ ಜನ ಕೇವಲ ತಮ್ಮ ಮನೆಯ ಸ್ವಚ್ಛತೆಯಲ್ಲದೇ, ದಾರಿಯ ಅಕ್ಕಪಕ್ಕ ಮತ್ತು ರಸ್ತೆಯ ಸ್ವಚ್ಛತೆಯ ಬಗ್ಗೆ ಕೂಡ ಗಮನಹರಿಸುತ್ತಾರೆ. ರಸ್ತೆಗಳ ಪಕ್ಕ ಗಿಡಗಳನ್ನೂ ನೆಡುತ್ತಾರೆ. ಸ್ವಚ್ಛತೆಯ ಹೊರತಾಗಿ ಇದೊಂದು ಸುಂದರ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಕೃತಿ ಸೌಂದರ್ಯ, ದೇಶೀಯ ಖಾದ್ಯಗಳ ರುಚಿಗೆ ಮನಸೋಲದವರಿಲ್ಲ.

Meghalaya


ಮಾವ್ಲಿನಾಂಗ್‌ನಲ್ಲಿ ಪ್ರಮುಖವಾಗಿ ಕಾಶಿ ಬುಡಕಟ್ಟು ಸಮುದಾಯ ವಾಸಿಸುತ್ತಿದೆ. ಅಚ್ಚರಿಯೆಂದರೆ, ಇದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿದೆ. ಕೇವಲ ಪಿತೃ ಪ್ರಧಾನ ಕುಟುಂಬಗಳನ್ನು ನೋಡಿರುವ ನಾವು ಮಾತೃ ಪ್ರಧಾನ ಕುಟುಂಬದ ವೈಶಿಷ್ಟ್ಯವನ್ನು ಇಲ್ಲಿ ಕಾಣಬಹುದು. ಅತಿಥಿ ಸತ್ಕಾರದಲ್ಲೂ ಈ ಗ್ರಾಮದ ಜನರು ಎತ್ತಿದ ಕೈ. ಇಲ್ಲಿನ ವೈವಿದ್ಯಮಯ ಖಾದ್ಯಗಳು ನಿಮ್ಮ ಬಾಯಿ ರುಚಿಯನ್ನು ತಣಿಸುತ್ತವೆ. ಪ್ರತಿ ಖಾದ್ಯವೂ ಇವರೇ ಬೆಳೆದ ಸಾವಯವ ತರಕಾರಿಗಳಿಂದಲೇ ತಯಾರಾಗಿರುತ್ತವೆ. ಮಾಂಸಾಹಾರ ಮತ್ತು ಸಸ್ಯಾಹಾರ ಎರಡರಲ್ಲೂ ಬಗೆ ಬಗೆಯ ಖಾದ್ಯಗಳು ಇಲ್ಲಿ ಲಭ್ಯ.

ಪೆಪ್ಪರ್‌ ಪೋರ್ಕ್‌, ತಾಜಾ ಮತ್ತು ಹೊಗೆಯಿಂದ ಬೇಯಿಸಿದ ಬಾಳೆ ಹೂ, ಮಾಂಸ ಮತ್ತು ಅಕ್ಕಿಯಿಂದ ತಾಯಾರಿಸಿದ ಜಾದೋ, ಸೋಯಾಬಿನ್‌ನಿಂದ ತಯಾರಿಸಿದ ತುಂಗ್ರಿಂಬೈ ಮತ್ತು ಸ್ಥಳೀಯವಾಗಿ ಬೆಳೆದ ಕಾಳು ಪದಾರ್ಥಗಳ ಖಾದ್ಯಗಳನ್ನು ಸವಿಯಬಹುದು.
ಈ ಗ್ರಾಮಕ್ಕೆ ಭೇಟಿ ನೀಡಲು ಅತ್ಯಂತ ಪ್ರಶಸ್ತವಾದ ಸಮಯ ಮಳೆಗಾಲ. ಮಳೆಯಲ್ಲಿ ಮಿಂದ ಇಲ್ಲಿನ ಪ್ರಕೃತಿ ಹಸುರಿನಿಂದ ಕಂಗೊಳಿಸುತ್ತ ಬಗೆ ಬಗೆಯ ಹೂವುಗಳರಳಿ ಸ್ವರ್ಗವೇ ಧರೆಗಿಳಿದಂತೆ ಕಾಣುತ್ತದೆ. ಇಲ್ಲಿ ಕೆಲವು ವಿಶೇಷ ಹಬ್ಬಗಳು ಜರಗುತ್ತವೆ.

Asia's cleanest

ಈ ಸಮಯದಲ್ಲೂ ಭೇಟಿ ನೀಡಿ ಇಲ್ಲಿನ ವಿಶಿಷ್ಟ ಆಚರಣೆಗಳನ್ನು ಕಣ್ತುಂಬಿಕೊಳ್ಳಬಹುದು. ಈ ಗ್ರಾಮಕ್ಕೆ ಪ್ರತಿಯೊಬ್ಬರೂ ಒಮ್ಮೆ ಭೇಟಿನೀಡಿ ಸ್ವಚ್ಛತೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.