Bengaluru: ಭಾರತದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ಎನ್ಐಆರ್ಎಫ್ (India’s top universities list) 2023 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್
ಆಫ್ ಸೈನ್ಸ್ (IISC) ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಶೋಧನೆ, ವಿಶ್ವವಿದ್ಯಾನಿಲಯಗಳು, ಮ್ಯಾನೇಜ್ಮೆಂಟ್, ಫ್ಯಾಕಲ್ಟಿಗಳು, ಫಾರ್ಮಸಿ, ಮೆಡಿಸಿನ್, ಇಂಜಿನಿಯರಿಂಗ್,
ಆರ್ಕಿಟೆಕ್ಚರ್ ಫ್ಯಾಕಲ್ಟೀಸ್ ವಿಭಾಗಗಳಲ್ಲಿ ಈ ಶ್ರೇಯಾಂಕಗಳನ್ನು (India’s top universities list) ಪ್ರಕಟಿಸಲಾಗಿದೆ.
NIRF ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ನಿರ್ದಿಷ್ಟ ಮೌಲ್ಯಮಾಪನ ವಿಧಾನಗಳನ್ನು ಅಭಿವೃದ್ಧಿಪಡಿಸಿದೆ. ಬೋಧನೆ, ಶಿಕ್ಷಣ, ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರತೆಯು ಮೌಲ್ಯಮಾಪನ ಮಾಡಲಾದ
ಒಟ್ಟು 100 ಅಂಕಗಳಲ್ಲಿ ಪ್ರತಿಯೊಂದು 30 ಅಂಕಗಳನ್ನು ಹೊಂದಿದೆ. ಉಳಿದ 10 ಅಂಕಗಳನ್ನು ಸೇರ್ಪಡೆ, ಔಟ್ರೀಚ್ ಮತ್ತು ಗ್ರಹಿಕೆಗೆ ನೀಡಲಾಗಿದೆ. NIRF 2023 ಟಾಪ್ 10 ವಿಶ್ವವಿದ್ಯಾಲಯಗಳು, ಮತ್ತು ಭಾರತದ ಟಾಪ್
10 ವಿಶ್ವವಿದ್ಯಾಲಯಗಳ (University) ವಿವರಗಳ ಹೀಗಿದೆ

ಎನ್ಐಆರ್ಎಫ್ 2023 ಶ್ರೇಯಾಂಕದ ಭಾರತದ ಟಾಪ್ 10 ವಿಶ್ವ ವಿದ್ಯಾನಿಲಯಗಳು
- 1.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc), ಬೆಂಗಳೂರು.
2.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ದೆಹಲಿ.
3.ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ.
4.ಜಾದವ್ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ
5.ಬನಾರಸ್ ಹಿಂದೂ ಯೂನಿರ್ವಸಿಟಿ (BHU), ವಾರಣಾಸಿ
6.ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್, ಕರ್ನಾಟಕ
7.ಅಮೃತ ವಿಶ್ವ ವಿದ್ಯಾಪೀಠ, ಕೊಯಮತ್ತೂರು, ತಮಿಳುನಾಡು.
8.ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೈದ್ರಾಬಾದ್.
9.ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಅಲಿಗಢ.
10.ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್.

NIRF ranking 2023: ಭಾರತದಲ್ಲಿನ ಟಾಪ್ 10 ಕಾಲೇಜುಗಳು
1.ಮಿರಾಂಡಾ ಹೌಸ್, ನವದೆಹಲಿ.
2.ಹಿಂದೂ ಕಾಲೇಜು, ನವದೆಹಲಿ.
3.ಪ್ರೆಸಿಡೆನ್ಸಿ ಕಾಲೇಜು, ಚೆನ್ನೈ.
4.PSGR ಕೃಷ್ಣಮ್ಮಲ್ ಮಹಿಳಾ ಕಾಲೇಜು, ಕೊಯಮತ್ತೂರು.
5.ಸೇಂಟ್ ಕ್ಸೇವಿಯರ್ ಕಾಲೇಜು, ಕೋಲ್ಕತ್ತಾ.
6.ಆತ್ಮ ರಾಮ್ ಸನಾತನ ಧರ್ಮ ಕಾಲೇಜು, ನವದೆಹಲಿ.
7.ಲೊಯೊಲಾ ಕಾಲೇಜು, ಚೆನ್ನೈ.
8.ರಾಮಕೃಷ್ಣ ಮಿಷೆನ್ ವಿವೆಕಾನಂದ ಸೆಂಚುರಿ ಕಾಲೇಜ್, ಕೋಲ್ಕತ್ತಾ.
9.ಕಿರೋರಿ ಮಾಲ್ ಕಾಲೇಜು, ನವದೆಹಲಿ
10.ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ನವದೆಹಲಿ.
ಇದನ್ನೂ ಓದಿ : https://vijayatimes.com/icc-world-championship/
NIRF ರ್ಯಾಂಕಿಗ್ 2023 ಒಟ್ಟಾರೆ ವಿಭಾಗದಲ್ಲಿ ಟಾಪ್ 10 ಕಾಲೇಜುಗಳು
1.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್.
2.ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು.
3.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ.
4.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ
5.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ.
6.ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ನವದೆಹಲಿ.
7.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ಪುರ.
8.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ.
9.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗುವಾಹಟಿ
10.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ.
ರಶ್ಮಿತಾ ಅನೀಶ್