download app

FOLLOW US ON >

Monday, August 8, 2022
Breaking News
ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ಇಂದು ರಾಜ್ಯ ಸಂಪುಟ ವಿಸ್ತರಣೆ; ಏಳು ನೂತನ ಸಚಿವರ ಸೇರ್ಪಡೆ

ಬೆಂಗಳೂರು, ಜ. 13: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯಾರಿರಲಿದ್ದಾರೆ, ಯಾರು ನೂತನವಾಗಿ ಸಂಪುಟ ಸಭೆಗೆ ಸೇರ್ಪಡೆಯಾಗಲಿದ್ದಾರೆ ಎಂಬುದರ ಬಗ್ಗೆ ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿಸಿದ್ದಂತು ನಿಜ. ಈ ಕುತೂಹಲಕ್ಕೆ ಇಂದು ತೆರೆ ಬಿಳಲಿದೆ. ಇಂದು ಮಧ್ಯಾಹ್ನ 3:50ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯುವುದು ನಿಶ್ಚಿತವಾಗಿದೆ. ನೂತನ ಸಚಿವರಾರು ಎಂಬುದು ಈಗಾಗಲೇ ಬೆಳಗ್ಗೆ 11 ಗಂಟೆಯವರೆಗೂ ಸಸ್ಪೆನ್ಸ್ ಆಗಿತ್ತು. ಸ್ವತಃ ಯಡಿಯೂರಪ್ಪ ಅವರೇ ಮಾಧ್ಯಮಗಳೆದರು ಏಳು ಮಂದಿಯ ಹೆಸರನ್ನು ಪ್ರಕಟ ಮಾಡಿದ್ದಾರೆ. ಎಂಟಿಬಿ ನಾಗರಾಜ್, ಆರ್ ಆಂಕರ್, ಸಿ.ಪಿ. ಯೋಗೇಶ್ವರ್, ಅರವಿಂದ್ ಲಿಂಬಾವಳಿ, ಎಸ್ ಅಂಗಾರ, ಉಮೇಶ್ ಕತ್ತಿ, ಮುರುಗೇಶ್ ಆರ್ ನಿರಾಣಿ ಅವರಿಗೆ ಮಂತ್ರಿಭಾಗ್ಯ ಸಿಕ್ಕಿದೆ. ಇವರೆಲ್ಲರಿಗೂ ಯಡಿಯೂರಪ್ಪ ಅವರೇ ಖುದ್ದಾಗಿ ಫೋನ್ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನ ನೀಡಿದ್ದರು. ಈಗ ಅವರೇ ಅದನ್ನ ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ.

ಸದ್ಯ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಖಾಲಿ ಉಳಿದಿರುವುದು ಏಳು ಸ್ಥಾನ ಮಾತ್ರ. ಅಬಕಾರಿ ಸಚಿವ ಆರ್ ನಾಗೇಶ್ ಅವರನ್ನ ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ. ಅವರು ರಾಜೀನಾಮೆ ನೀಡಿದರೆ ಎಂಟು ಖಾತೆಗಳು ಖಾಲಿ ಉಳಿಯುತ್ತವೆ. ಈಗ ಏಳು ಮಂದಿಯನ್ನ ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಇನ್ನೊಂದು ಖಾತೆ ಖಾಲಿ ಉಳಿಯಲಿದೆ.

ಎಂಟಿಬಿ ನಾಗರಾಜ್, ಆರ್. ಶಂಕರ್, ಸಿ.ಪಿ ಯೋಗೇಶ್ವರ್, ಅರವಿಂದ ಲಿಂಬಾವಳಿ, ಎಸ್. ಅಂಗಾರ, ಉಮೇಶ್ ಕತ್ತಿ, ಮುರುಗೇಶ್ ಆರ್.ನಿ ರಾಣಿ ಸಿಎಂ ಸಚಿವ ಸಂಪುಟದಲ್ಲಿ ಸೇರಲಿದ್ದಾಋಎ ಎಂದು ಖುದ್ದು ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ.  

ಮಂತ್ರಿಸ್ಥಾನದ ನಿರೀಕ್ಷೆಯಲ್ಲಿದ್ದ ಮುನಿರತ್ನಗೆ ನಿರಾಸೆ ಉಂಟಾಗಿದೆ. ಮುನಿರತ್ನ ಕೊನೆಯ ಕ್ಷಣದವರೆಗೂ ಪ್ರಯತ್ನ ಮುಂದುವರೆಸಿದರಾದರೂ, ಪ್ರಯತ್ನ ವಿಫಲವಾಗಿದೆ. ಮೈತ್ರಿಪಾಳಯದಿಂದ ಬಂದ 17 ಮಂದಿಯಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಮುನಿರತ್ನ ಕೂಡ ಒಬ್ಬರು. ಆದರೆ, ಎಸ್.ಟಿ. ಸೋಮಶೇಖರ್, ಎಂಟಿಬಿ ನಾಗರಾಜ್, ಬೈರತಿ ಬಸವರಾಜ್ ಅವರೊಂದಿಗೆ ಇದ್ದ ಮುನಿರತ್ನ ಮಾರ್ಗಮಧ್ಯೆ ಏಕಾಂಗಿಯಾಗಿ ಹೋದರು. ತಮ್ಮ ಸ್ನೇಹಿತರ ಬಳಗ ಬಿಟ್ಟು ತಾವೊಬ್ಬರೇ ಲಾಬಿಗೆ ಯತ್ನಿಸಿದ್ದರು. ಹೀಗಾಗಿ ತಮ್ಮ ಗೆಳೆಯರ ಬಳಗದಿಂದ ಈವರೆಗೆ ಮುನಿರತ್ನಗೆ ಯಾವ ನೆರವೂ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರು ಆರ್ ಅಶೋಕ್, ಬಸವರಾಜ ಬೊಮ್ಮಾಯಿ ಮೊದಲಾದ ಹಿರಿಯ ಬಿಜೆಪಿ ನಾಯಕರ ಮೂಲಕ ಮಂತ್ರಿಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ವಲಯದಲ್ಲಿರುವ ಹಾಗೂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ. ರೇಣುಕಾಚಾರ್ಯ ಕೂಡ ಮಂತ್ರಿಸ್ಥಾನಕ್ಕೆ ಒಳಗಿಂದೊಳಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಹಗ್ಗ-ಜಗ್ಗಾಟದ ಒತ್ತಡದಲ್ಲಿ ತಮ್ಮ ಆಪ್ತನ ಮಾತು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲ. ಆದರೂ ರೇಣುಕಾಚಾರ್ಯ ತಮ್ಮ ಪ್ರಯತ್ನ ಬಿಡದೆ ನೇರ ಅರುಣ್ ಸಿಂಗ್ ಬಳಿಯೇ ಲಾಬಿ ಮಾಡಲಿದ್ದಾರೆ ಎಂಬ ಮಾತು ದಟ್ಟವಾಗಿ ಹಬ್ಬುತ್ತಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article