- ಹೆಚ್ಚುತ್ತಿರುವ ಹೃದಯಾಘಾತಕ್ಕೆ ಸೋಂಕು ಕೂಡ ಕಾರಣವಾಗಿರಬಹುದು
- ಹೃದಯ ಆರೋಗ್ಯಕ್ಕಾಗಿ ಲಸಿಕೆಗಳು ಕಡ್ಡಾಯ (Infections can cause heart attacks)
- ಲಸಿಕೆ, ದಂತ ಆರೈಕೆ, ಸೋಂಕು ನಿಯಂತ್ರಣ – ಹೃದಯ ರಕ್ಷಿಸಿಕೊಳ್ಳಲು ಹೊಸ ಮಾರ್ಗ
ಸಾಮಾನ್ಯವಾಗಿ ಹೃದಯಾಘಾತ (Heart Attack) ಎಂದರೆ ಕೊಲೆಸ್ಟ್ರಾಲ್ ಜಮಾವಣೆ, ಅಸ್ವಸ್ಥ ಜೀವನಶೈಲಿ, ಧೂಮಪಾನ, ರಕ್ತದೊತ್ತಡ, ಮಧುಮೇಹ ಇವುಗಳೇ ಮುಖ್ಯ ಕಾರಣ ಎಂದು ಇಂದಿನವರೆಗೂ ತಿಳಿದುಬಂದಿತ್ತು.
ಆದರೆ, ಇದೀಗ ಪ್ರಕಟವಾದ ಒಂದು ಹೊಸ ಅಧ್ಯಯನವು ಈ ಎಲ್ಲಾ ಕಾರಣಗಳ ಜೊತೆಗೆ ಸೋಂಕು(infection) ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದೆ.
ಫಿನ್‌ಲ್ಯಾಂಡ್(Finland) ಮತ್ತು ಯುಕೆಯ ವಿಜ್ಞಾನಿಗಳು(UK scientists) ನಡೆಸಿದ ಅಧ್ಯಯನ Journal of the American Heart Association ನಲ್ಲಿ ಪ್ರಕಟವಾಗಿದ್ದು,
ಅದರಲ್ಲಿ ಹೃದಯಾಘಾತಗಳಿಗೆ ಸೋಂಕುಗಳು ಸಹ ಕಾರಣವಾಗಬಹುದು ಎಂದು ಸೂಚಿಸಿದೆ.
ಅಧ್ಯಯನಗಳ ಪ್ರಕಾರ, ಧಮನಿಗಳಲ್ಲಿ ಉಂಟಾಗುವ ಪ್ಲಾಕ್‌ಗಳ ಒಳಗೆ ಬ್ಯಾಕ್ಟೀರಿಯಾ ಬಯೋಫಿಲ್ಮ್(Bacterial biofilm) ರೂಪದಲ್ಲಿ ಮಲಗಿರುತ್ತವೆ. ಈ ಬಯೋಫಿಲ್ಮ್‌ಗಳು ದೇಹದ ರಕ್ಷಣಾ ವ್ಯವಸ್ಥೆ ಹಾಗೂ
ಆಂಟಿಬಯೋಟಿಕ್‌ಗಳಿಂದ(antibiotics) ರಕ್ಷಿತವಾಗಿರುತ್ತವೆ.ವರ್ಷಗಳ ಕಾಲ ಮೌನವಾಗಿರುವ ಈ ಬ್ಯಾಕ್ಟೀರಿಯಾಗಳು, ವೈರಲ್ ಸೋಂಕು (ಉದಾಹರಣೆಗೆ ಫ್ಲೂ ಅಥವಾ COVID) ಅಥವಾ ಬೇರೊಂದು

ಒತ್ತಡ ಬಂದಾಗ ಜಾಗೃತವಾಗುತ್ತವೆ. ಆ ಸಮಯದಲ್ಲಿ ಉಂಟಾಗುವ ಉರಿಯೂತವು ಪ್ಲಾಕ್ ಒಡೆದು, ರಕ್ತದ ಗಂಟು ಉಂಟುಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಈ ಅಧ್ಯಯನದ ಮುಖ್ಯಸ್ಥ ಪ್ರೊ. ಪೆಕ್ಕಾ ಕಾರ್ಹುನೆನ್(Prof. Pekka Karhunen) ಹೇಳುವಂತೆ, “ಹೃದಯಾಘಾತದಲ್ಲಿ ಬ್ಯಾಕ್ಟೀರಿಯಾ ಪಾತ್ರವಿದೆ ಎಂಬುದು ಹಿಂದೆಯೂ ಹೇಳಲಾಗಿದೆ.
ಆದರೆ ಈ ಅಧ್ಯಯನವೇ ಅತ್ಯಂತ ನೇರವಾದ ಮತ್ತು ವಿಶ್ವಾಸಾರ್ಹ ಸಾಕ್ಷಿ ಒದಗಿಸಿದೆ. ನಾವು ಪ್ಲಾಕ್‌ಗಳ ಒಳಗೆ ಬಾಯಿಯಿಂದ ಬರುವ ಬ್ಯಾಕ್ಟೀರಿಯಾ DNA ಹಾಗೂ ನೇರ ಬಯೋಫಿಲ್ಮ್‌ಗಳನ್ನೂ ಕಂಡಿದ್ದೇವೆ” ಎಂದು ಹೇಳಿದ್ದಾರೆ.
ಇನ್ನು ಭಾರತದಲ್ಲಿ ಹೃದಯ ಕಾಯಿಲೆಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೆಚ್ಚಿನವರು ಕಡಿಮೆ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈಗಾಗಲೇ ಜೀವನಶೈಲಿ(lifestyle) ಕಾರಣಗಳ ಜೊತೆಗೆ,
ಈ ಅಧ್ಯಯನದಿಂದ ಸೋಂಕು ನಿಯಂತ್ರಣವೂ ಹೃದಯರಕ್ಷಣೆಯ ಒಂದು ಭಾಗವಾಗಬೇಕೆಂಬುದು ಸ್ಪಷ್ಟವಾಗಿದೆ.
ರೋಗಿಗಳು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೆಂದರೆ ಫ್ಲೂ(Flu) ಹಾಗೂ COVID ಸೇರಿದಂತೆ ಮುಖ್ಯ ಲಸಿಕೆಗಳನ್ನು(vaccines) ಹಾಕಿಸಿಕೊಳ್ಳಬೇಕು.
ಬಾಯಿ, ಉಸಿರಾಟ ಅಥವಾ ಇತರ ಸೋಂಕುಗಳಿಗೆ ತಕ್ಷಣ ಚಿಕಿತ್ಸೆ ಪಡೆಯಬೇಕು.ಹಲ್ಲು ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕು.ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣ,
ತೂಕ ಕಾಪಾಡಿಕೊಳ್ಳುವುದು ಹಾಗೂ ವ್ಯಾಯಾಮ ಮಾಡುವಂತಹ ಸಾಂಪ್ರದಾಯಿಕ ಕ್ರಮಗಳನ್ನು ಮುಂದುವರಿಸಬೇಕು. ಈ ಅಧ್ಯಯನವು ಮುಖ್ಯವಾಗಿ ಈಗ ಯೂರೋಪಿನ(Europe) ಜನರ ಮೇಲೆ ನಡೆಸಲ್ಪಟ್ಟಿರುವುದರಿಂದ,
ಇದನ್ನು ಓದಿ : ಬೆಂಗಳೂರಿನಲ್ಲಿ ಹೆಚ್ಚಾದ ನಕಲಿ ವೈದ್ಯರ ಹಾವಳಿ: ಆರೋಗ್ಯ ಇಲಾಖೆಯಿಂದ ದಂಡಾಸ್ತ್ರ ಜಾರಿ
ಇದೇ ಪ್ರಕ್ರಿಯೆ ಭಾರತೀಯರಲ್ಲಿ ಕಾಣಿಸಿಕೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜೊತೆಗೆ, ಕಾರಣ ಮತ್ತು ಪರಿಣಾಮದ ನೇರ ಸಂಬಂಧವನ್ನು ದೃಢಪಡಿಸಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದು ಪ್ರೊ. ಪೆಕ್ಕಾ ಕಾರ್ಹುನೆನ್ ಹೇಳಿದ್ದಾರೆ. (Infections can cause heart attacks)