
ನಮ್ಮ ದೇಶದಲ್ಲಿ, ಎಲ್ಲಾ ಶುಭ ಸಮಾರಂಭಗಳಲ್ಲಿ, ಆಚರಣೆಗಳಲ್ಲಿ, ಶತಮಾನಗಳಿಂದಲೂ ಅಡಿಕೆಗೆ ಅಗ್ರಸ್ಥಾನವಿದೆ. ರೈತರಿಗೆ, ಅದರಲ್ಲೂ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ(Betel Nut)ಉತ್ತಮ ವಾಣಿಜ್ಯ ಬೆಳೆ ಅಡಿಕೆಯಾಗಿದೆ.
ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ಪ್ರತಿನಿತ್ಯ ತಮ್ಮ ಜೀವನದ ಒಂದು ಭಾಗವಾಗಿ ಪರಿಗಣಿಸಿ, ಸಂಪ್ರದಾಯವಾಗಿ, ಆಹಾರವಾಗಿ, ಔಷಧಿಯಾಗಿ (medicine) ಸೇವಿಸುತ್ತಾ ಬಂದಿದ್ದಾರೆ.
ಅಡಿಕೆ ಶುಭ ಅಥವಾ ಮಂಗಳ ದ್ರವ್ಯ ಎಂದು ಎಷ್ಟು ವಿಶಿಷ್ಟ ಸ್ಥಾನ (Unique position) ಪಡೆದಿದೆಯೋ, ಅದಕ್ಕೂ ಮೀರಿದ ಶ್ರೇಷ್ಠ ಔಷಧೀಯ ಗುಣಗಳಿಂದ ಕೂಡಿದೆ. ಇದರ ನಿತ್ಯ ಉಪಯೋಗದಿಂದಾಗುವ ಆರೋಗ್ಯದ ಲಾಭಗಳು ಹಲವಾರು. https://vijayatimes.com/need-not-verify-date-of-birth/
ಅದರಲ್ಲೂ ಸ್ಥಾನಿಕವಾಗಿ, ತತ್ ಕ್ಷಣದ ಲಾಭಕ್ಕಿಂತಲೂ ಹೆಚ್ಚಾಗಿ ನಂತರದ ಅಥವಾ ಚಿರಕಾಲೀನ ಲಾಭಗಳು ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.
ಈ ‘ಅಡಿಕೆ’ ಎನ್ನುವ ಪದವನ್ನು ಹೇಗೆ ಬಿಡಿಸಿ ಬರೆಯಬಹುದು? ಅಡಗು+ಕಾಯ್ = ಅಡಕ್ಕಾಯ್ = ಅಡಕೆ. ಹೀಗೆ ಬಿಡಿಸಿ ಬರೆಯಬಹುದು. ಅಡಗು ಎಂಬುದಕ್ಕೆ ಅವಿತುಕೊಳ್ಳು, ಮರೆಯಾಗಿರುವುದು ಎಂಬ ಅರ್ಥವಿದೆ.
ಅದೇ ರೀತಿ ಕಾಯ್ ಎಂಬುದಕ್ಕೆ ಹಣ್ಣಾಗದಿರುವುದು ಎಂಬ ಅರ್ಥವಿದೆ. ಹಾಗಾದರೆ ಅಡಗಿರುವ ಕಾಯಿಯೇ ಅಡಗುಕಾಯಿ=ಅಡಕ್ಕಾಯಿ => ಅಡಕೆ=> ಅಡಿಕೆ=> ಅಡ್ಕೆ ಎಂದು ಹೇಳಬಹುದು.

ಅಡಿಕೆಯ ಅರ್ಥವೇ ಅಡಗಿರುವ ಕಾಯಿ ಎಂದು. ಅಡಿಕೆಯ ಹೊರ ಕವಚವನ್ನು ತಿನ್ನಲಾಗುವುದಿಲ್ಲ, ಯಾವುದೇ ತಿನಿಸುಗಳಲ್ಲಿಯೂ ಅದನ್ನು ಬಳಸುವುದಿಲ್ಲ. ಅಂದರೆ ಒಳಗೆ ಅಡಗಿರುವ ಕಾಯಿ ಮಾತ್ರವೇ ಬಹಳ ಮೌಲ್ಯ ಹೊಂದಿರುವ ಭಾಗ.
ಹಾಗಾಗಿ ಇದಕ್ಕೆ ಅಡಕೆ ಎಂಬ ಹೆಸರು ಬಂದಿರಬಹುದು. ಎಲ್ಲರಿಗೂ ಗೊತ್ತಿರುವ ಹಾಗೆ ಅಡಿಕೆ ಮರಗಳು ಅಡ್ಡಡ್ಡ ಬೆಳೆಯದೆ ಉದ್ದುದ್ದ ಎತ್ತರೆತ್ತರಕ್ಕೆ ಬೆಳೆಯುತ್ತವೆ. ಹಾಗಾಗಿ ಇವನ್ನು ಒತ್ತೊತ್ತಾಗಿ ಬೆಳೆಸಲಾಗುತ್ತದೆ.
https://vijayatimes.com/need-not-verify-date-of-birth/
ಹಾಗಾಗಿ ಅಡಿಕೆ ತೋಟದಲ್ಲಿ ಹಲವಾರು ಮರಗಳು ಒಮ್ಮೆಗೆ ಕಾಣಸಿಗುತ್ತವೆ. ಮೇಲಿನ ಎರಡು ಪದಗಳಾದ ’ಏರು’ ಮತ್ತು ‘ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗು’ ಎಂಬುದರಿಂದ ಕೂಡ ಅಡಕೆ ಎಂಬುದು ಬಂದಿರಬಹುದು.
ಮೇಲ ಮೇಲಕ್ಕೆ ಏರುವ ಮರ,ಇಲ್ಲವೆ ಒತ್ತೊತ್ತಾಗಿ ಸಂಖ್ಯೆಯಲ್ಲಿ ಹೆಚ್ಚು ಕಾಣಸಿಗುವ ಮರ ಎಂಬ ಹುರುಳನ್ನು ಇದು ಹೊಂದಿದೆ.
ಪವಿತ್ರ