ನೀವು ಎಟಿಎಂ(ATM) ಬಳಸುವವರಾಗಿದ್ದರೆ ತಪ್ಪದೆ ಈ ಸುದ್ದಿಯನ್ನು ಓದಲೇಬೇಕು. ಎಟಿಎಂನಿಂದ ಹಣ ಡ್ರಾ ಮಾಡುವ ಕೆಲವು ನಿಯಮಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು. ಎಟಿಎಂ ಸಂಬಂಧಿತ ಶುಲ್ಕ(Fee) ಹಾಗೂ ಚಾರ್ಜ್ಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ RBI 2019ರ ಜೂನ್ ನಲ್ಲಿ ಸಮಿತಿಯೊಂದನ್ನು ರಚಿಸಿತ್ತು. 2021ರ ಜೂನ್ ತಿಂಗಳಿನಲ್ಲಿ ಎಟಿಎಂ ವಹಿವಾಟಿನ ಶುಲ್ಕಗಳನ್ನು ಆರ್ ಬಿಐ ಪರಿಷ್ಕರಿಸಿತ್ತು.
ಪ್ರತಿಯೊಂದು ಬ್ಯಾಂಕ್ ಪ್ರತಿ ತಿಂಗಳು ನಗದು ಮತ್ತು ನಗದು ರಹಿತ ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪರಿಷ್ಕರಣೆಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದಂತೆ, ನೀವು ಖಾತೆ ತೆರೆದಿರುವ ಬ್ಯಾಂಕ್ ನ ಎಟಿಎಂನಲ್ಲಿ ಆರಂಭಿಕ 5 ವ್ಯವಹಾರಗಳು ಉಚಿತವಾಗಿರುತ್ತವೆ. ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ, ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು.
ಇದರಲ್ಲಿ ಹಣಕಾಸು(Financial) ಹಾಗೂ ಹಣಕಾಸೇತರ ವ್ಯವಹಾರ ಎರಡೂ ಸೇರಿವೆ. ಒಂದು ವೇಳೆ, ಈ ಮಿತಿಯನ್ನು ಮೀರಿದರೆ ಪ್ರತಿ ಹೆಚ್ಚುವರಿ ವ್ಯವಹಾರದ ಮೇಲೆ 20 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಹೌದು, ಈ ಮೊದಲು ಎಟಿಎಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚುವರಿ ವ್ಯವಹಾರ ನಡೆಸಿದ್ರೆ ಗ್ರಾಹಕರು ಪ್ರತಿ ವ್ಯವಹಾರಕ್ಕೆ 20ರೂ. ಶುಲ್ಕ ಪಾವತಿಸಬೇಕಿತ್ತು. ಆದರೆ, 2021ರ ಜೂನ್ 10 ರಂದು ಹೊರಡಿಸಿದ ಅಧಿಸೂಚನೆಯಂತೆ ಹೆಚ್ಚುವರಿ ವ್ಯವಹಾರದ ಮೇಲಿನ ಶುಲ್ಕವನ್ನು ಒಂದು ರೂಪಾಯಿ ಹೆಚ್ಚಿಸಿ 21 ರೂಪಾಯಿ ಮಾಡಲಾಗಿದೆ.
ಈ ಬಗ್ಗೆ ಆರ್ಬಿಐ 2021ರ ಜೂನ್ 10 ರಂದು ಅಧಿಸೂಚನೆ ನೀಡಿತ್ತು, ಈ ಬಗ್ಗೆ ಬ್ಯಾಂಕುಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಿಂಗಳ ಉಚಿತ ಎಟಿಎಂ ವ್ಯವಹಾರ ಮಿತಿ ಮೀರಿದರೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ. ಮೊದಲು ಈ ಶುಲ್ಕ 20ರೂ. ಆಗಿದ್ದು, 2022ರ ಜನವರಿ 1ರಿಂದ ನಗದು ಹಾಗೂ ನಗದು ರಹಿತ ಎಟಿಎಂ ಟ್ರಾನ್ಸಾಕ್ಷನ್ ನಿಗದಿತ ಮಾಸಿಕ ಮಿತಿಯನ್ನು ಮೀರಿದರೆ ಶುಲ್ಕವನ್ನು ಹೆಚ್ಚಿಸುವಂತೆ ಪ್ರಮುಖ ಬ್ಯಾಂಕುಗಳಿಗೆ ಆರ್ ಬಿಐ ಸುತ್ತೋಲೆ ನೀಡಿತ್ತು.
ಬ್ಯಾಂಕ್ ಗ್ರಾಹಕರು ಎಟಿಎಂ ಮಾಸಿಕ ಉಚಿತ ವಹಿವಾಟುಗಳ ಮಿತಿ ಮೀರಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್(Reserve Bank) ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಕೆಲ ಬ್ಯಾಂಕ್ಗಳು ಗ್ರಾಹಕರಿಗೆ ಈ ಮಾಹಿತಿಯನ್ನು ರವಾನಿಸಿವೆ. ಅದೇ ರೀತಿ, ಆಗಸ್ಟ್ 1, 2022 ರಿಂದ ಜಾರಿಗೆ ಬರುವಂತೆ, ಹಣಕಾಸು ವ್ಯವಹಾರಗಳಿಗೆ ಪ್ರತಿ ವಹಿವಾಟಿಗೆ ವಿನಿಮಯ ಶುಲ್ಕವನ್ನು ರೂ.15 ರಿಂದ ರೂ.17 ಕ್ಕೆ ಮತ್ತು ಎಲ್ಲಾ ಕೇಂದ್ರಗಳಲ್ಲಿ ಹಣಕಾಸೇತರ ವಹಿವಾಟುಗಳಿಗೆ ರೂ.5 ರಿಂದ ರೂ.6 ಕ್ಕೆ ಹೆಚ್ಚಿಸಲು ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ ಎಂದು ಆರ್ಬಿಐ ಮತ್ತೊಂದು ಘೋಷಣೆಯಲ್ಲಿ ತಿಳಿಸಿದೆ.
ಎಟಿಎಂ ವಹಿವಾಟುಗಳಿಗೆ ಇಂಟರ್ಚೇಂಜ್ ಶುಲ್ಕವನ್ನು 2012ರ ಆಗಸ್ಟ್ನಲ್ಲಿ ಕೊನೆಯ ಬಾರಿಗೆ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಗ್ರಾಹಕರು ಪಾವತಿಸಬೇಕಾದ ಶುಲ್ಕಗಳನ್ನು ಕೊನೆಯದಾಗಿ 2014ರ ಆಗಸ್ಟ್ನಲ್ಲಿ ಪರಿಷ್ಕರಿಸಲಾಗಿತ್ತು. ಬದಲಾಗುತ್ತಿರುವ ಇಂತಹ RBI ನ ನಿಯಮಗಳ ಬಗ್ಗೆ ಗ್ರಾಹಕರು ಮಾಹಿತಿ ಹೊಂದುವುದು ಅಗತ್ಯವಾಗಿದೆ.
- ಪವಿತ್ರ