ಗುಜರಾತಿನಲ್ಲಿ ಮಾನವಕುಲವೇ ಬೆಚ್ಚಬೀಳುವ ಭೀಕರ ಕೃತ್ಯ
5 ವರ್ಷದ ಬಾಲಕಿಯ ಕುತ್ತಿಗೆ ಸೀಳಿ ಕೊಲೆ (Inhuman act in Gujarat)
ಕೊಲೆಯ ಹಿಂದಿನ ನಿಖರವಾದ ಉದ್ದೇಶವಿನ್ನೂ ಅಸ್ಪಷ್ಟ
Gujarat: ಗುಜರಾತ್ನ ಛೋಟಾಡೆಪುರ (Chhotadepur) ಜಿಲ್ಲೆಯಲ್ಲಿ ಮಾನವಕುಲವೇ ಬೆಚ್ಚಬೀಳುವ ಭೀಕರ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಿದ ವ್ಯಕ್ತಿಯೋರ್ವ ರಕ್ತವನ್ನು ದೇವಾಲಯದ ಮೆಟ್ಟಿಲುಗಳ ಮೇಲೆ ಎರಚಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯ ಪನೆಜ್ ಗ್ರಾಮದಲ್ಲಿರುವ ಆಕೆಯ ಮನೆಯಿಂದ ಮೃತ ಬಾಲಕಿಯನ್ನು ಬೆಳಿಗ್ಗೆ ತಾಯಿಯ ಸಮ್ಮುಖದಲ್ಲಿ ಆರೋಪಿ ಲಾಲಾ ತಾದ್ರಿ ಅಪಹರಿಸಿದ್ದಾನೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಗೌರವ್ ಅಗ್ರವಾಲ್ ಹೇಳಿದ್ದಾರೆ.

ಬುಡಕಟ್ಟು ಸಮುದಾಯ (Tribal community) ಪ್ರಾಬಲ್ಯವಿರುವ ಜಿಲ್ಲೆಯ ಪಣೆಜ್ ಗ್ರಾಮದ ಮನೆಯಿಂದ ತಾಯಿಯ ಸಮ್ಮುಖದಲ್ಲಿಯೇ ಬಾಲಕಿಯನ್ನು ಇಂದು ಬೆಳಗ್ಗೆ ಆರೋಪಿ ಲಾಲಾ ತಾಡ್ವಿ ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೊಡಲಿಯಿಂದ ಆಕೆಯ ಕುತ್ತಿಗೆಗೆ (Inhuman act in Gujarat) ಸೀಳಿ ಹತ್ಯೆ ಮಾಡಿದ್ದಾನೆ.
ನಂತರ ದುಷ್ಕರ್ಮಿ, ಬಾಲಕಿಯ ಕುತ್ತಿಗೆಯಿಂದ ಕೋಡಿಯಂತೆ ಹರಿಯುತ್ತಿದ್ದ ರಕ್ತವನ್ನು ಸಂಗ್ರಹಿಸಿದ್ದು, ತನ್ನ ಮನೆ ಸಮೀಪದ ಚಿಕ್ಕ ದೇವಾಲಯದ ಮೆಟ್ಟಿಲುಗಳಿಗೆ ತರ್ಪಣ ಮಾಡಿದ್ದಾನೆ. ಬಾಲಕಿಯ ತಾಯಿ ಮತ್ತು ಗ್ರಾಮದ ಇತರರು ಈ ಭೀಬತ್ಸ ಕೃತ್ಯವನ್ನು (The heinous act) ನೋಡಿ ಶಾಕ್ ಆಗಿದ್ದಾರೆ. ಆದರೆ, ಆರೋಪಿ ಬಳಿ ಕೊಡಲಿ ಇದುದ್ದರಿಂದ ಏನೂ ಮಾಡದೇ ಮೂಕ ಪ್ರೇಕ್ಷಕರಾಗಿದ್ದಾರೆ.
ಇದನ್ನೂ ಓದಿ: ಕೋವಿಡ್ ಹಗರಣದ ತನಿಖೆ ಹೊಣೆ ಸಿಐಡಿಗೆ ವಹಿಸಿದ ಸರ್ಕಾರ
ಇನ್ನೂ ಕೊಲೆಯ ಹಿಂದಿನ ನಿಖರವಾದ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಯು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವಂತೆ ತೋರುತ್ತಿದೆ ಎಂದು ಅಗರ್ ವಾಲ್ ಹೇಳಿದರು.ಬಾಲಕಿಯ ಕುಟುಂಬದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ (Under the Indian Penal Code) ಕೊಲೆ ಮತ್ತು ಅಪಹರಣದ ಸೆಕ್ಷನ್ಗಳ ಅಡಿಯಲ್ಲಿ ಆರೋಪಿ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ಅಗರವಾಲ್ ಮಾಹಿತಿ ನೀಡಿದ್ದಾರೆ.