Visit Channel

ಇನ್‌ಸ್ಟಾಗ್ರಾಂ ಹೊಸ ಫೀಚರ್‌ ಲಭ್ಯ

ಮುಂಬೈ ಡಿ 17 : ಸಾಮಾಜಿಕ ಜಾಲತಾಣಗಳ ಪೈಕಿ ಪ್ರಮುಖವಾಗಿರು ಇನ್‌ಸ್ಟಾಗ್ರಾಂ ಇದೀಗ ಬಳಕೆದಾರರಿಗಾಗಿ ಹೊಸ ಫೀಚರ್‌ವೊಂದನ್ನು ಬಿಡುಗಡೆಮಾಡಿದೆ.  

ಸ್ಟೋರಿ ಫೀಡ್‌ಗಳ ಮೂಲಕ ಇನ್ನು ಮುಂದೆ 60 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇನ್‌ಸ್ಟಾಗ್ರಾಂನಲ್ಲಿ 15 ಸೆಕೆಂಡ್‌ಗಳಿಗಿಂತ ಹೆಚ್ಚಿನ ಅವಧಿಯ ವಿಡಿಯೋಗಳನ್ನು ಬಳಕೆದಾರರು ಅಪ್ಲೋಡ್ ಮಾಡಿದರೆ ಅದು ಭಾಗಗಳಾಗಿ ಪೋಸ್ಟ್‌ ಆಗುತ್ತಿತ್ತು. ಆದರೀಗ ಅದು 60 ಸೆಕೆಂಡ್ ಗಳ ವರೆಗೆ ಮುಂದುವರಿಯಲಿದೆ. ಇನ್ನು ಫೇಸ್ಬುಕ್‌ನ ಹೆಸರು ಮೆಟಾ ಆಗಿ ಅಕ್ಟೋಬರ್‌ನಲ್ಲಿ ಬದಲಾದ ವಾರದ ಒಳಗೆ ಇನ್‌ಸ್ಟಾಗ್ರಾಂ ತನ್ನ ಒಟ್ಟಾರೆ ಬಳಕೆದಾರರ ಬಳಗವು ಎರಡು ಶತಕೋಟಿ ದಾಟಿರುವುದನ್ನು ಕಂಡಿದೆ. ಬಳಕೆದಾರರ ಸಂಖ್ಯೆ ಶತಕೋಟಿ ದಾಟಿದ ಬಳಿಕ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಬಹಿರಂಗವಾಗಿ ತೋರುವ ಪರಿಪಾಠಕ್ಕೆ ಇನ್‌ಸ್ಟಾಗ್ರಾಂ ಮುಂದಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.