- ಸಾವಿರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಜಾಗತಿಕ ಸೆಮಿಕಂಡಕ್ಟರ್ ದೈತ್ಯ (Intel layoff )
- ಚಿಪ್ ವಿನ್ಯಾಸ, ಕ್ಲೌಡ್ ತಂತ್ರಾಂಶ, ಉದ್ಯೋಗ ಘಟಕದ ಇಂಜಿನಿಯರ್ ವಿಭಾಗದವರಿಗೆ ಗೇಟ್ ಪಾಸ್
- ವ್ಯಾಪಾರ ವಿಭಾಗದ ಮುಖ್ಯಸ್ಥರು ಸೇರಿದಂತೆ ಎಲ್ಲಾ ಘಟಕಗಳ ಉದ್ಯೋಗಿಗಳ ಲೇಆಫ್
Washington: ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರೆದಿದ್ದು ಮೈಕ್ರೋಸಾಫ್ಟ್(Microsoft) 9 ಸಾವಿರ ಉದ್ಯೋಗಿಗಳ ವಜಾ ಮಾಡಿದ ಬೆನ್ನಲ್ಲೇ,
ವಿಶ್ವದ ಅತಿದೊಡ್ಡ ಸೆಮಿ ಕಂಡಕ್ಟರ್ ಸಂಸ್ಥೆ ಎಂದೇ ಕರೆಸಿಕೊಳ್ಳುವ ಇಂಟೆಲ್ ಕಂಪನಿ(Intel layoff ) ಸುಮಾರು ಐದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡ್ತಿದೆ .
ಈ ಉದ್ಯೋಗ ಕಡಿತ ಇದೀಗ ಅಮೆರಿಕಾದಲ್ಲಿರುವ ವಿವಿಧ ನಗರಗಳಲ್ಲಿರುವ ಇಂಟೆಲ್ ಕಚೇರಿಯ ಮೇಲಾಗಲಿದೆ. ಕಂಪನಿಯ ಆರ್ಥಿಕ ನಷ್ಟವನ್ನು ಸರಿದೂಗಿಸಲು ಉದ್ಯೋಗ ಕಡಿತ ಅನಿವಾರ್ಯ ಎಂದು ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈಗಾಗಲೇ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ವರ್ಕ್ ಅಡ್ಜಸ್ಟಮೆಂಟ್ ಹಾಗೂ ರೀಟ್ರೀವಿಂಗ್ ನೋಟಿಫೀಕೇಷನ್ ಕಾಯಿದೆ ಅಡಿಯಲ್ಲಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ ಎಂದು ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಗಳಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ಈ ಕಾರಣದಿಂದಾಗಿ ಅಮೆರಿಕಾದಲ್ಲಿರುವ ಒರೆಗಾವ್(Oregon) ಮತ್ತು ಕ್ಯಾಲಿಪೋರ್ನಿಯಾದಲ್ಲಿ(California) ಕೆಲಸ ಮಾಡುತ್ತಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ .

ಈಗಾಗಲೇ ಕ್ಯಾಲಿಪೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವವರಿಗೆ ನೀಡಿದ್ದ ಲೇ ಆಫ್ ಅನ್ನು ಡಬಲ್ ಮಾಡಿದ್ದು, ಇದರಿಂದಾಗಿ 1,935 ಮಂದಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ.
ಇನ್ನು ಒರೆಗಾವ್ ಕಚೇರಿಯಲ್ಲಿ ತನ್ನ ಲೇ ಆಫ್ ಅನ್ನು ಅಂದುಕೊಂಡದಕ್ಕಿಂತ ನಾಲ್ಕು ಪಟ್ಟು ಹೆಚ್ಚಿಸಿದ್ದು, 2,392 ಮಂದಿ ಕೆಲಸ ಇಲ್ಲದಂತಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ.
ಈ ಮೊದಲು ಒರೆಗಾವ್ನಲ್ಲಿ ಇಂಟೆಲ್ ಕಂಪನಿಯೇ ಹೆಚ್ಚು ಮಂದಿಗೆ ಉದ್ಯೋಗ ನೀಡಿತ್ತು. ಆದರೇ, ಈಗ ಇದೇ ಇಂಟೆಲ್ ಕಂಪನಿ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ.
ಅಷ್ಟೇ ಅಲ್ಲದೆ ಅಮೆರಿಕಾದ ಅರಿಜೋನಾದ(Arizona) ಕಚೇರಿಯಲ್ಲಿ 696 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ.
ಒಟ್ಟೂ ಅಮೆರಿಕಾದ ನಾಲ್ಕು ರಾಜ್ಯಗಳಿಂದ ಬರೋಬ್ಬರಿ 5 ಸಾವಿರ ಮಂದಿಗೆ ಇಂಟೆಲ್ ಲೇ ಆಫ್ ನೀಡಿದಂತೆ ಆಗಿದೆ.
ಇನ್ನು ಇಂಟೆಲ್ ಕಂಪನಿಗೆ ಹೊಸದಾಗಿ ಸೇರಿರುವ ಸಿಇಒ ಲಿಪ್ ಬು ಟ್ಯಾನ್ ಅವರ ಪುನರ್ ರಚನೆಯ ಯೋಜನೆಯಿಂದಾಗಿ ಹಲವಾರು ಉದ್ಯೋಗಿಗಳಕೆಲಸ ಕಡಿತಕ್ಕೆ ಸಂಸ್ಥೆ ಮುಂದಾಗಿದೆ.
ಇದರಿಂದಾಗಿ ಆರ್ಥಿಕ ನಷ್ಟವನ್ನು ಸರಿದೂಗಿಸಬಹುದು ಮತ್ತು ಕಂಪೆನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಎನ್ನುವುದು ಇಂಟೆಲ್ ಸಂಸ್ಥೆಯ ಯೋಜನೆಯಾಗಿದೆ.
ಸದ್ಯದ ಅಮೆರಿಕಾದ(America) ಮಾರುಕಟ್ಟೆ ಪರಿಸ್ಥಿತಿಯಲ್ಲಿ ಈ ನಿರ್ಧಾರ ಅತ್ಯಗತ್ಯವಾಗಿತ್ತು ಎಂದು ಸಿಇಒ ಸಮರ್ಥಿಸಿಕೊಂಡಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್ ನಗರದಲ್ಲಿರುವ ಇಂಟೆಲ್ ಕಂಪನಿ ಕಚೇರಿಯ ಉದ್ಯೋಗಿಗಳಿಗೆ ಇದರ ಬಿಸಿ ಹೆಚ್ಚು ತಟ್ಟಲಿದೆ.
ಇದರ ಜೊತೆಗೆ, ಅರಿಜೋನಾ ಮತ್ತು ಟೆಕ್ಸಾಸ್ ನಲ್ಲೂ ಪಿಂಕ್ ಸ್ಲಿಪ್ ನೀಡಲಾಗ್ತಿದೆ.ಇನ್ನು ಈ ಸಂಸ್ಥೆಯ ಈಗಿನ ಕೆಲವು ಪ್ರಾಜೆಕ್ಟ್ ಗಳನ್ನು ಹೊರಗುತ್ತಿಗೆ ನೀಡುವ ಪ್ಲಾನ್ ಮಾಡಿದೆ .
ಮೆಘಾ ಆರ್ಡರ್ ಅಕ್ಸೆಂಚರ್ ಸಂಸ್ಥೆಗೆ ಇಂಟೆಲ್ ಕಂಪನಿಯ ಹೊರಗುತ್ತಿಗೆ ಲಭಿಸಿದ್ದು ಇನ್ಮುಂದೆ ಆ ಸಂಸ್ಥೆಯ ಜೊತೆಗಿನ ಸಂವಹನವನ್ನು
ಇದನ್ನು ಓದಿ : 9 ಸಾವಿರ ನೌಕರರನ್ನು ವಜಾಗೊಳಿಸಲು ಮೈಕ್ರೊಸಾಫ್ಟ್ ನಿರ್ಧಾರ, ಬೀದಿಗೆ ಬಿತ್ತು ಉದ್ಯೋಗಿಗಳ ಬದುಕು
ಎಐ (artificial intelligence) ಮೂಲಕ ನಡೆಸುವ ನಿರ್ಧಾರಕ್ಕೂ ಬರಲಾಗಿದೆ ಎಂದು ಇಂಟೆಲ್ ಕಂಪನಿಯ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. (Intel layoff )