ನನ್ನ ಸಹೋದರ ನನ್ನನ್ನು ಎರಡು ಬಾರಿ ನೇಣು ಹಾಕಲು ಪ್ರಯತ್ನಿಸಿದ್ದಾನೆ ಎಂದು ದಲಿತ ವ್ಯಕ್ತಿಯ ಪತ್ನಿ ಸೈಯದ್ ಸುಲ್ತಾನ ಆರೋಪಿಸಿದ್ದಾರೆ. ತನ್ನ ಮುಸ್ಲಿಂ ಕುಟುಂಬದ ಗೌರವಕ್ಕಾಗಿ ನನ್ನನ್ನು ಸಾಯಿಸಲು ನನ್ನ ಅಣ್ಣ ಮದುವೆ ಮುಂಚೆಯೇ ಎರಡು ಬಾರಿ ನೇಣು ಹಾಕಿ ಸಾಯಿಸಲು ಪ್ರಯತ್ನ ಮಾಡಿದ್ದ ಎಂದು ಹೇಳಿದ್ದಾರೆ.

ಬಿ ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನಾ ತಮ್ಮ ಪ್ರೀತಿಯು ತಮ್ಮ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಚೆನ್ನಾಗಿ ತಿಳಿದಿದ್ದರಂತೆ. ಮದುವೆಯಾಗುವ ಮುನ್ನವೇ ಸುಲ್ತಾನಗೆ ತಮ್ಮ ಮುಂದಿನ ಜೀವನದ ಮೇಲೆ ಬೆದರಿಕೆಗಳು ಕೇಳಿಬರುತ್ತಿದ್ದವಂತೆ. ಅದು ಅವರ ಸಮುದಾಯದಿಂದ ಅಲ್ಲ, ತಮ್ಮ ಕುಟುಂಬದವರಿಂದ ಸಾಯಿಸುವ ಬೆದರಿಕೆಗಳು ಪದೇ ಪದೇ ಕೇಳಿಬರುತ್ತಿತ್ತು ಎಂದು ಹೇಳಿಕೆಯಲ್ಲಿ ಸುಲ್ತಾನ ವಿವರಿಸದ್ದಾರೆ. ಸುಲ್ತಾನ ತಾಯಿ ನೀನು ಆತನನ್ನು ಮದುವೆಯಾದರೆ ನಿನ್ನ ಗಂಡನನ್ನು ನಿನ್ನ ಅಣ್ಣ ಸಾಯಿಸದೇ ಬಿಡುವುದಿಲ್ಲ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರಂತೆ.
ಆದ್ರೆ, ಈ ಮಾತಿಗೆ ಹೆದರದ ಸುಲ್ತಾನಾ ತನ್ನ ಪ್ರಿಯಕರನ ಜೊತೆ ಮನೆಬಿಟ್ಟು ಓಡಿ ಹೋಗಿ ದೇವಾಲಯದಲ್ಲಿ ಮದುವೆ ಮಾಡಿಕೊಂಡು ಯಾರಿಗೂ ದಾರಿ ತಿಳಿಯಬಾರದು ಎಂಬ ಕಾರಣಕ್ಕೆ ತಮ್ಮ ಮೊಬೈಲ್ ಸಿಮ್ ಹೊಡೆದಾಕಿ ಬಳಿಕ ಪೊಲೀಸ್ ಅಧೀಕ್ಷಕರ ರಕ್ಷಣೆ ಕೋರಿದ್ದರಂತೆ. ಆದರೆ ಅಷ್ಟರೊಳೆಗೆ ಸುಲ್ತಾನ ಅವರ ಅಣ್ಣ ಗಂಡ-ಹೆಂಡತಿ ಇಬ್ಬರು ರಸ್ತೆಯಲ್ಲಿ ಹೋಗುತ್ತಿದ್ದ ಮಾಹಿತಿಯನ್ನು ಪಡೆದು,

ಆತನ ಸಹಚರರೊಂದಿಗೆ ಬಂದು ಆಕೆಯ ಪತಿ ನಾಗರಾಜನನ್ನು ರಾಡ್ ನಿಂದ ಬಲವಾಗಿ ಹೊಡೆದು ಎರಡು ಬಾರಿ ಚಾಕುವಿನಿಂದ ಇರಿದು ಆತ ಪ್ರಾಣಬಿಡುವವರೆಗೂ ಅಲ್ಲೇ ಇದ್ದು, ತದನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸುಲ್ತಾನ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.