*ಕೇವಲ ಮಾತಲ್ಲ, ಕಾರ್ಯವೇ ಮುಖ್ಯ
*ಯುವಕರ ಕೈಯಲ್ಲಿದೆ ನಾಳೆಯ ಜಗತ್ತು
- ಅಂತರಾಷ್ಟ್ರೀಯ ಯುವ ದಿನದ ಇತಿಹಾಸವೇನು?
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಸ್ವಾಮಿ ವಿವೇಕಾನಂದರ (Swami Vivekananda) ಮಾತು ಯುವಕರಿಗೆ ಹಾಗೂ ನಮಗೆ ಸದಾ ಸ್ಫೂರ್ತಿ. (International Youth Day)
ಇಂದು ಯುವಜನರಿಗೆ ವಿಶೇಷವಾದ ದಿನ ಎಂದರೆ ತಪ್ಪಾಗಲಾರದು. ಹೌದು ಪ್ರತಿ ವರ್ಷದಂತೆ ಈ ವರ್ಷವೂ ಇಂದು ಆಗಸ್ಟ್ (August) 12ರಂದು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನ ಯುವಕರ ಶಕ್ತಿ, ಸೃಜನಶೀಲತೆ ಮತ್ತು ಬದಲಾವಣೆ ತರಬಲ್ಲ ಸಾಮರ್ಥ್ಯವನ್ನು ನೆನಪಿಸುವ ವಿಶೇಷ ಸಂದರ್ಭವಾಗಿದೆ. ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಪ್ರಗತಿಯ ಬಲವಾದ ಆಧಾರವೂ ಹೌದು.
ಅಂತರಾಷ್ಟ್ರೀಯ ಯುವ ದಿನಾಚರಣೆ ಯಾಕೆ ಆಚರಿಸಲಾಗುತ್ತೆ?
ಅಂತರಾಷ್ಟ್ರೀಯ ಯುವ ದಿನಾಚರಣೆಯನ್ನು ಮೊಟ್ಟ ಮೊದಲಬಾರಿಗೆ 1999 ರ ವರ್ಷದಲ್ಲಿ ಆಚರಿಸಲಾಯಿತು.
ಆ ದಶಕದಿಂದ ಈ ದಶಕದವರೆಗೂ ಕೂಡ ಯುವ ಜನರು ಜಗತ್ತಿನಲ್ಲಿ ನಾನಾ ಸಮಸ್ಯೆ ಸವಾಲುಗಳನ್ನ ಎದುರಿಸುತ್ತಲೇ ಇದ್ದಾರೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅಂತರಾಷ್ಟ್ರೀಯ ಯುವ ದಿನವನ್ನ ವರ್ಷ ವರ್ಷ ಆಚರಿಸಲಾಗುತ್ತೆ.(International Youth Day)
ಈ ಯುವ ದಿನಾಚರಣೆಯನ್ನ ಪ್ರಪಂಚಾದ್ಯಂತ ಆಚರಿಸಲಾಗುತ್ತೆ. ಈ ದಿನಾಚರಣೆ ಅರ್ಧಪೂರ್ಣ ಚರ್ಚೆಗಳು, ಭವಿಷ್ಯದ ಕನಸುಗಳು, ಮತ್ತು ಸ್ಪರ್ಧೆಗಳನ್ನ ಒಳಗೊಂಡಿರುತ್ತದೆ.
ಅಂತರಾಷ್ಟ್ರೀಯ ಯುವ ದಿನದ ಮಹತ್ವ:
ಅಂತರಾಷ್ಟ್ರೀಯ ಯುವ ದಿನದ ಮಹುಮುಖ್ಯ ಉದ್ದೇಶವೆಂದರೆ ಯುವಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಹಾಗೂ ಇವರಿಗೆ ಸರಿಯಾದ ಮಾರ್ಗ ತೋರಿಸುವುದು.
ಇಂದು ಅನೇಕ ಯುವಕರು ಶಿಕ್ಷಣ, ಉದ್ಯೋಗ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಮತ್ತು ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಆದರೆ ನಿರುದ್ಯೋಗ, ನಶೆ, ಅಸಮಾನತೆ ಮತ್ತು ತಂತ್ರಜ್ಞಾನ ದುರುಪಯೋಗದಂತಹ ಸವಾಲುಗಳು ಇನ್ನೂ ಎದುರಿಸುತ್ತಿವೆ.
ಸರ್ಕಾರ, ಸಮಾಜ ಮತ್ತು ಕುಟುಂಬಗಳು ಯುವಕರಿಗೆ ಸೂಕ್ತ ಮಾರ್ಗದರ್ಶನ, ಅವಕಾಶಗಳು ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ಅವರ ಸಾಮರ್ಥ್ಯ ಸಂಪೂರ್ಣವಾಗಿ ಅರಳುತ್ತದೆ.
ಈ ದಿನದಂದು ಅಂತಹ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸಲು ವೇದಿಕೆ ಒದಗಿಸುತ್ತದೆ.
ಯುವಕರು ಇಂದು ಎದುರಿಸುತ್ತಿರುವ ಸವಾಲುಗಳು ಕೇವಲ ಅಂಕಿ ಅಂಶಗಳಲ್ಲ, ಅವು ನಿಜವಾದ ಬದುಕಿನ ಹೋರಾಟವಾಗಿದೆ.
ಉದ್ಯೋಗದ ಕೊರತೆ, ಗುಣಮಟ್ಟದ ಶಿಕ್ಷಣದ ಅಲಭ್ಯತೆ, ಆರೋಗ್ಯ ಸೇವೆಗಳ ಅಸಮಾನತೆ ಇವು ಅವರ ಕನಸುಗಳನ್ನು ನುಂಗುತ್ತಿದೆ.
ಸರ್ಕಾರಗಳು ಮತ್ತು ಸಮಾಜಗಳು ಯುವಕರ ಬಗ್ಗೆ ಮಾತನಾಡುವುದರಲ್ಲಿ ಮಾತ್ರ ತೃಪ್ತಿಪಡುವ ಕಾಲ ಕಳೆದಿದೆ. ನೀತಿ ಮಟ್ಟದಲ್ಲಿ ಬದಲಾವಣೆಗಳು,
ಅವಕಾಶಗಳ ಸೃಷ್ಟಿ, ಮಾರ್ಗದರ್ಶನ ವ್ಯವಸ್ಥೆ ಇವು ನಡೆಯಬೇಕಾಗಿದೆ.
ಯುವಕರ ಶಕ್ತಿ ಸರಿಯಾದ ದಾರಿಯಲ್ಲಿ ಸಾಗಬೇಕಾದಾರೆ ಕುಟುಂಬ, ಶಿಕ್ಷಣ ಸಂಸ್ಥೆಗಳು, ಸರ್ಕಾರ ಮತ್ತು ಸಮಾಜ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು.
ಅವರಿಗೆ ಅವಕಾಶ, ಮಾರ್ಗದರ್ಶನ ಮತ್ತು ಸ್ವಾತಂತ್ರ್ಯ ನೀಡಿದಾಗ ಅವರು ಅದ್ಭುತವಾಗಿ ಏನಾದರು ಸಾಧಿಸಬಲ್ಲರು.
ಯುವಕರು ಕೇವಲ ಭವಿಷ್ಯದ ನಾಯಕರು ಅಲ್ಲ, ಅವರು ಇಂದಿನ ನಿರ್ಮಾತೃಗಳೂ ಹೌದು. ಅವರ ಧ್ವನಿಯನ್ನು ನಿರ್ಧಾರಮಟ್ಟದಲ್ಲಿ ಕೇಳಿಸಿಕೊಳ್ಳುವಂತೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ.
ಯುವಕರು ಸಮಾಜದ ಬದಲಾವಣೆಯ ಮುಂಚೂಣಿಯಲ್ಲಿ ನಿಲ್ಲುವ ಶಕ್ತಿಯುಳ್ಳವರು. ಅವರು ಆಲೋಚನೆ, ಉತ್ಸಾಹ, ಸೃಜನಶೀಲತೆ ಮತ್ತು ಧೈರ್ಯದ ಸಂಕೇತ.
ಇಂದಿನ ಯುವಕರಲ್ಲಿ ತಂತ್ರಜ್ಞಾನ ಜ್ಞಾನ, ಸಾಮಾಜಿಕ ಜವಾಬ್ದಾರಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಹೆಚ್ಚುತ್ತಿರುವ ಜಾಗೃತಿ ಭವಿಷ್ಯದ ಭರವಸೆಯನ್ನು ಹೆಚ್ಚಿಸುತ್ತದೆ ಎನ್ನುವುದು ಗಮನಾರ್ಹ.
ಅಂತರಾಷ್ಟ್ರೀಯ ಯುವ ದಿನವು ಕೇವಲ ಒಂದು ದಿನದ ಹಬ್ಬವಲ್ಲ, ಇದು ನಮ್ಮ ಸಮೂಹ ಬದ್ಧತೆಯ ಪರೀಕ್ಷೆ.
ಮಾತುಗಳಿಂದ ಹೊರಬಂದು ಕಾರ್ಯತತ್ಪರ ಹೆಜ್ಜೆಗಳತ್ತ ಸಾಗಿದಾಗ ಮಾತ್ರ, ಯುವ ಶಕ್ತಿಯ ನಿಜವಾದ ಅರ್ಥವನ್ನು ನಾವು ಅನುಭವಿಸಬಹುದು.
ಇಂದಿನ ಯುವಕರೇ ದೇಶದ ಶಕ್ತಿ ಮತ್ತು ನಾಯಕರು. ಯುವಕ-ಯುವತಿಯರು ಸಂವಿಧಾನದ ಅಡಿಯಲ್ಲಿ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಿ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಬೇಕು.
ದೇಶ ಮುನ್ನಡೆಯಲು ಯುವಜನತೆಯ ಪಾತ್ರ ಬಹುಮುಖ್ಯ ಯುವಜನತೆಗೆ ಪ್ರೊತ್ಸಾಹ ನೀಡಿ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಯಲು ಎಲ್ಲರೂ ಕೈಜೋಡಿಸೋಣ.
ಭಾರತ ವಿಶ್ವದಲ್ಲಿಯೇ ಅತೀ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವಾಗಿದೆ. ಯುವ ಸಂಪನ್ಮೂಲವನ್ನು ದೇಶದ ಪ್ರಗತಿಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಅನಿಗೊಳಿಸಬೇಕು.
ಇದನ್ನು ಓದಿ : ಕಂಟೆಂಟ್ ಕ್ರಿಯೇಟರ್ಸ್ ಗೆ ಶಾಕ್ ಕೊಟ್ಟ ಯೂಟ್ಯೂಬ್: ಶ್ರಮವಿಲ್ಲದೆ ವಿಡಿಯೋ ಶೇರ್ ಮಾಡೋರಿಗೆ ಗೇಟ್ ಪಾಸ್
ಯುವಕರ ಕೈಯಲ್ಲಿ ನಾಳೆಯ ಜಗತ್ತು ಇದೆ. ಅವರ ಕನಸುಗಳನ್ನು ಬೆಂಬಲಿಸಿ, ಅವರ ಧೈರ್ಯವನ್ನು ಬಲಪಡಿಸಬೇಕು. ಯುವಕರು ಕನಸು ಕಂಡರೆ ಭವಿಷ್ಯ ಹೊಳೆಯುತ್ತದೆ, ನಂಬಿಕೆಯಿಂದ ಹೆಜ್ಜೆ ಇಟ್ಟರೆ ಅಸಾಧ್ಯವೇ ಸಾಧ್ಯವಾಗುತ್ತದೆ.
- ವಿಶ್ವಪ್ರಕಾಶ ಟಿ ಮಲಗೊಂಡ