ಬಹುನಿರೀಕ್ಷಿತ ಆಪಲ್ ಐಫೋನ್ 17 ಸರಣಿ(iPhone 17 series) ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 4 ಮಾದರಿಗಳನ್ನು ಪರಿಚಯಿಸಿದೆ. ಸ್ಟ್ಯಾಂಡರ್ಡ್ ಮಾಡೆಲ್ ಐಫೋನ್ 17,
ಅಲ್ಟ್ರಾ-ಸ್ಲಿಮ್ ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಎನ್ನುವ 4 ಸರಣಿಗಳನ್ನು ಬಿಡುಗಡೆ ಮಾಡಿದೆ. (iPhone 17 series is released)
ಇದರ ವೈಶಿಷ್ಟ್ಯವೆಂದರೆ ಈ ಎಲ್ಲಾ ಮಾದರಿಗಳಲ್ಲಿ 128GB ಮಾದರಿಯ ಬದಲಾಗಿ 256GB ಸ್ಟೋರೇಜ್ನಿಂದ(storage) ಪ್ರಾರಂಭವಾಗುತ್ತದೆ.
ಆಪಲ್ ತನ್ನ ಅವೇ ಡ್ರಾಪಿಂಗ್ ಕಾರ್ಯಕ್ರಮದಲ್ಲಿ ಹೊಸ ಐಫೋನ್ 17 (Apple iPhone 17), ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್
ಮಾದರಿಗಳನ್ನು ಬಿಡುಗಡೆ ಮಾಡಿದೆ. ಐಫೋನ್ 17 ಪ್ರೊ ಮಾದರಿಗ ಆಪಲ್‌ನ ಉನ್ನತ ಶ್ರೇಣಿಯ ಚಿಪ್‌ಸೆಟ್ ಆಗಿರುವ ಆಪಲ್‌ನ A19 ಪ್ರೊ ಚಿಪ್ ಅನ್ನು ಒಳಗೊಂಡಿವೆ,
ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ಅಪ್‌ಗ್ರೇಡ್‌ಗಳೊಂದಿಗೆ ಈ ಹೊಸ ಮಾದರಿಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಸಾಧನಗಳು ಆಪಲ್ ಇಂಟೆಲಿಜೆನ್ಸ್‌ನ AI ವೈಶಿಷ್ಟ್ಯಗಳನ್ನು ಪಾಲಿಸುತ್ತವೆ.
ಐಫೋನ್ 17 ಇದು ಡ್ಯುಯಲ್-ಸೈನ್ ಫೋನ್ ಆಗಿದ್ದು, ಇದು iOS 26 ನೊಂದಿಗೆ ತಯಾರಾಗಿದೆ. ಯುಎಸ್‌ನಲ್ಲಿ ಮಾತ್ರ ಇ-ಸಿಮ್ ಮಾದರಿ ಲಭ್ಯವಿರುತ್ತದೆ,

ಪ್ರಪಂಚದ ಉಳಿದ ಭಾಗಗಳಲ್ಲಿ ನ್ಯಾನೋ ಮತ್ತು ಇಸಿಮ್ ಸಂಯೋಜನೆಯೊಂದಿಗೆ ಇದು ಬರುತ್ತದೆ. ಇದು 6.3-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯೊಂದಿಗೆ
120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಆಪಲ್ ಐಫೋನ್ 17 ನಲ್ಲಿ 120Hz ರಿಫ್ರೆಶ್ ದರವನ್ನು ನೀಡಿರುವುದು ಇದೇ ಮೊದಲನೇ ಬಾರಿ,
ಇನ್ನು ಐಫೋನ್ 16 ಪ್ರೊ ಮಾದರಿಗಳಿಂದ ತೆಗೆದ ಹೊಸ ಪ್ರೊಮೋಷನ್ ಪ್ಯಾನೆಲ್ ಆಗಿದೆ. ಈ ಫೋನ್‌ನ ಪರದೆಯು 3,000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ.
ಈ ಹೊಸ ಆಪಲ್ ಐಫೋನ್ 17 ಸರಣಿಯಲ್ಲಿ ಸೆರಾಮಿಕ್ ಶೀಲ್ಡ್ ಎರಡು ರಕ್ಷಣೆಯನ್ನು ನೀಡುತ್ತದೆ. ಇದರ ಜೊತೆಗೆ, ಆಲ್ವೇಸ್ ಆನ್ ಡಿಸ್ಪ್ಲೇ ವೈಶಿಷ್ಟ್ಯವು ಸಹ ಇದರಲ್ಲಿ ಲಭ್ಯವಿದ್ದು,
ಇದರ ಜೊತೆಗೆ ಐಫೋನ್ 17 ನಲ್ಲಿ IP68 ರೇಟಿಂಗ್ ಅನ್ನು ಸಹ ನೀಡಲಾಗಿದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಐಫೋನ್ 17 ನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ
ವ್ಯವಸ್ಥೆ ಇದ್ದು, ಇದರ ಮುಖ್ಯ ಕ್ಯಾಮೆರಾ 48MP ಆಗಿರುತ್ತದೆ ಮತ್ತು ಈ ಸಂವೇದಕವು 2X ಟೆಲಿಫೋಟೋ ಕ್ಯಾಮೆರಾದಂತೆಯೂ ಕಾರ್ಯನಿರ್ವಹಿಸುತ್ತದೆ.
ಇದರ ಜೊತೆಗೆ, 48MP ಫ್ಯೂಷನ್ ಅಲ್ಟ್ರಾ ವೈಡ್ ಕ್ಯಾಮೆರಾ ಸಹ ಇದರಲ್ಲಿ ಇರುವುದರಿಂದ ಇದರ ಸಹಾಯದಿಂದ, ಬಳಕೆದಾರರು ಮ್ಯಾಕ್ರೋ ಶಾಟ್‌ಗಳನ್ನು ಕ್ಲಿಕ್
ಮಾಡಲು ಸಾಧ್ಯವಾಗುತ್ತದೆ ಮತ್ತು ಐಫೋನ್ 17 ನ ಮುಂಭಾಗದಲ್ಲಿ ಹೊಸ ಸೆಂಟರ್ ಸ್ಟೇಜ್ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಈ ಮಾದರಿಗಳಲ್ಲಿ ಕಳೆದ ಬಾರಿಗಿಂತ ವಿಭಿನ್ನ ಮತ್ತು ದೊಡ್ಡ ಕ್ಯಾಮೆರಾ ಮಾಡ್ಯೂಲ್‌ಗಳನ್ನಿ ಕಾಣಬಹುದು.
ಈ ಹೊಸ ಸರಣಿಯ ಮಾದರಿಗಳ ಫೋನ್‌ನ ಚಾರ್ಜಿಂಗ್ ವೇಗವನ್ನು ಸಹ ಹೆಚ್ಚಿಸಲಾಗಿದೆ. ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದಾಗಿದೆ.
ಆಪಲ್‌ನ ಈ ಎಲ್ಲಾ4 ಸರಣಿಗಳನ್ನು ಸೆಪ್ಟೆಂಬರ್ 12 ಶುಕ್ರವಾರ ಸಂಜೆ 5:30 ಮುಂಗಡ ಬುಕ್ ಮಾಡಬಹುದು. ಅವುಗಳ ಮಾರಾಟವು ಸೆಪ್ಟೆಂಬರ್ 19 ರಿಂದ ಆಪಲ್‌ನ ಆನ್‌ಲೈನ್
ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಹಾಗೂ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಭಾರತದಲ್ಲಿ iPhone 17 ಉತ್ಪಾದನೆ ಆರಂಭ – ಬೆಂಗಳೂರಿನಲ್ಲಿ ಆ್ಯಪಲ್ 1000 ಕೋಟಿಗೆ ಕಚೇರಿ ಲೀಸ್
ಆಪಲ್‌ನ ಈ ಎಲ್ಲಾ4 ಸರಣಿಗಳ ಬೆಲೆ:
- iPhone 17 – 82,900 ರೂಪಾಯಿ
- iPhone 17 Air – 1,19,900 ರೂಪಾಯಿ
- iPhone 17 Pro – 1,34,900 ರೂಪಾಯಿ
- iPhone 17 Pro Max – 1,49,900 ರೂಪಾಯಿ (iPhone 17 series is released)