ದುಬೈ ಸೆ.22 : ನಾಯಕ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ ವಾಲ್ ಅವರ ಶತಕದ ಜತೆಯಾಟದ ನಡುವೆಯೂ ಪಂಜಾಬ್ ಕಿಂಗ್ಸ್,ರಾಜಸ್ತಾನ ರಾಯಲ್ಸ್ ವಿರುದ್ದ ಎರಡು ರನ್‌ಗಳ ವಿರೋಚಿತ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಸಂಜು ಸ್ಯಾಮ್ಸನ್ 4, ಲಿಯಾಮ್ ಲಿವಿಂಗ್‌ಸ್ಟೋನ್ 25, ರಿಯಾನ್ ಪರಾಗ್ 4, ಮಹಿಪಾಲ್ ಲೋಮ್ರರ್ 43, ರಾಹುಲ್ ತೆವಾಟಿಯಾ 2, ಕ್ರಿಸ್ ಮೋರಿಸ್ 5, ಚೇತನ್ ಸಕಾರಿಯಾ 7, ಕಾರ್ತಿಕ್ ತ್ಯಾಗಿ 1 ರನ್‌ನೊಂದಿಗೆ 20 ಓವರ್ ಎಲ್ಲಾ ವಿಕೆಟ್ ಕಳೆದು 185 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಪಂಜಾಬ್ ಪರ ಅರ್ಷದೀಪ್ ಸಿಂಗ್ 32 ರನ್‌ಗೆ 5 ವಿಕೆಟ್, ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ 1, ಹರ್ಪ್ರೀತ್ ಬ್ರಾರ್ 1 ವಿಕೆಟ್ ಗಳಿಸಿದರು.
185 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ್ದ ಪಂಜಾಬ್ ಆರಂಭದಲ್ಲೇ ಬಿರುಸಿನ ಆಟಕ್ಕೆ ಮೊರೆ ಹೋಗಿತ್ತು. ಆರಂಭಿಕ ದಾಂಡಿಗರಾದರಾಹುಲ್ 33 ಎಸೆತಗಳಲ್ಲಿ 4 ಬೌಂಡರಿ ಎರಡು ಸಿಕ್ಸರ್ ಬಾರಿಸಿ 49 ರನ್ ಗಳಿಸಿದರು. ಜೊತೆಗೆ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ 3000 ರನ್ ಪೂರೈಸಿದ ಕೀರ್ತಿಗೆ ಭಾಜನರಾದರು
ಮತ್ತೊಂದಡೆ ಅಗರ್ ವಾಲ್ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 67 ರನ್ ಬಾರಿಸಿದರು. ಈ ಜೋಡಿ ಮೊದಲನೇ ವಿಕೆಟ್ ಗೆ 120 ರನ್ ಪೇರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಅಂತಿಮವಾಗಿ ಕಾರ್ತಿಕ್ ತ್ಯಾಗಿಯ ಬಿಗಿ ಬೌಲಿಂಗ್ ದಾಳಿಗೆ ಪಂಜಾಬ್ 2 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.
ರಾಜಸ್ಥಾನ್ ಪರ ಕಾರ್ತಿಕ್ ತ್ಯಾಗಿ 2, ಚೇತನ್ ಸಕಾರಿಯಾ 1, ರಾಹುಲ್ ತೆವಾಟಿಯಾ 1 ವಿಕೆಟ್ ಪಡೆದುಕೊಂಡರು, ಸೆಳೆದರು.ಡೆತ್ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮೂಲಕ ರಾಜಸ್ಥಾನ್ ಗೆಲುವಿಗೆ ಕಾರಣರಾದ ಕಾರ್ತಿಕ್ ತ್ಯಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.