• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಐಪಿಎಲ್‌ 2026 ಮಿನಿ ಹರಾಜು: RCB ತಂಡದ ಸಂಪೂರ್ಣ ಪಟ್ಟಿ ಪ್ರಕಟ

Teju Srinivas by Teju Srinivas
in Vijaya Time
ಐಪಿಎಲ್‌ 2026 ಮಿನಿ ಹರಾಜು: RCB ತಂಡದ ಸಂಪೂರ್ಣ ಪಟ್ಟಿ ಪ್ರಕಟ
0
SHARES
23
VIEWS
Share on FacebookShare on Twitter
  • ಅಬುಧಾಬಿಯಲ್ಲಿ ಐಪಿಎಲ್ ಮಿನಿ ಹರಾಜಿನಲ್ಲಿ (IPL 2026 mini auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಮೂವರ ಖರೀದಿ
  • ಐಪಿಎಲ್ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಮಿನಿ ಹರಾಜು ಪ್ರಕ್ರಿಯೆ
  • ವೆಂಕಟೇಶ್ ಅಯ್ಯರ್ ಅನ್ನು ಏಳು ಕೋಟಿಗೆ ಖರೀದಿಸಿದ ಬೆಂಗಳೂರು ತಂಡ

Bengaluru: ಅಬುಧಾಬಿಯಲ್ಲಿ ನಡೆದ ಐಪಿಎಲ್‌ 2026 ಮಿನಿ ಹರಾಜು ಪ್ರಕ್ರಿಯೆ (IPL 2026 mini auction), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮಹತ್ವದ ತಿರುವು ನೀಡಿದೆ.

ಐಪಿಎಲ್‌ನ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಈ ಹರಾಜಿನಲ್ಲಿ, ಬೆಂಗಳೂರು ಫ್ರಾಂಚೈಸಿ ಅಳೆದು ತೂಗಿ ಆಟಗಾರರ ಖರೀದಿಗೆ ಮುಂದಾಗಿದೆ.

ಅಧಿಕೃತ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲವಾದರೂ, ಮಾರ್ಚ್‌ 26ರ ಸುಮಾರಿಗೆ ಟೂರ್ನಿ (Tourney) ಆರಂಭವಾಗಿ ಮೇ 31ರವರೆಗೆ ನಡೆಯುವ ಸಾಧ್ಯತೆ ಇದೆ.

ಈ ಹಿನ್ನಲೆಯಲ್ಲಿ, ತಂಡದ ಸಂಯೋಜನೆ ಮತ್ತು ಹಣಕಾಸಿನ ನಿರ್ವಹಣೆ ಪ್ರಮುಖ ಅಂಶಗಳಾಗಿ ಪರಿಣಮಿಸಿವೆ.

IPL 2026 mini auction

ಇನ್ನು ಹರಾಜು ಪ್ರಕ್ರಿಯೆಗೆ ಮುನ್ನವೇ RCB ತಂಡ ಹಲವು ಆಟಗಾರರನ್ನು ಉಳಿಸಿಕೊಂಡಿತ್ತು.

ಅದರೊಂದಿಗೆ, ಅಚ್ಚರಿ ಮೂಡಿಸುವಂತೆ ಕೆಲ ಪ್ರಮುಖ ಆಲ್ರೌಂಡರ್ ಹಾಗೂ ಅನುಭವಿ ಆಟಗಾರರನ್ನು (IPL 2026 mini auction) ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು.

ಈ ಹರಾಜಿನಲ್ಲಿ ಎಲ್ಲರ ಗಮನ ಸೆಳೆದಿದ್ದ ಹೆಸರುಗಳು ಕ್ಯಾಮರೂನ್ ಗ್ರೀನ್ ಮತ್ತು ವೆಂಕಟೇಶ್ ಅಯ್ಯರ್.

ಕ್ಯಾಮರೂನ್ ಗ್ರೀನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ (Knight Rider) ತಂಡ ದಾಖಲೆಯ ಮೊತ್ತಕ್ಕೆ ಖರೀದಿಸಿದರೆ, ವೆಂಕಟೇಶ್ ಅಯ್ಯರ್ ನಿರೀಕ್ಷಿತ ಮಟ್ಟದ ಸ್ಪರ್ಧೆಯಿಲ್ಲದೆ ಹರಾಜಿನಲ್ಲಿ ಮುಂದುವರಿದರು.

ಅಂತಿಮವಾಗಿ, RCB ತಂಡವು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ.ಗೆ ಖರೀದಿಸಿ ತಮ್ಮ ಬಳಗಕ್ಕೆ ಸೇರಿಸಿಕೊಂಡಿದೆ.

ಸೀಮಿತ ಪ್ಲಾನ್ ಹಾಗೂ ಹಣದೊಂದಿಗೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ತಂಡ, ಹಣಕಾಸಿನ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಪ್ರತಿಯೊಂದು ಬಿಡ್ ಹಾಕಿತು.

ಹರಾಜಿಗೆ ಮೊದಲು RCB ಬಳಿ 16.40 ಕೋಟಿ ರೂ. ಪರ್ಸ್ ಬ್ಯಾಲನ್ಸ್ ಇದ್ದು, ಇದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಒಳಗೊಂಡಂತೆ ಗರಿಷ್ಠ ಎಂಟು ಆಟಗಾರರನ್ನು ಖರೀದಿಸುವ ಅವಕಾಶವಿತ್ತು.

ಅಂತಿಮವಾಗಿ ನಾಲ್ವರು ಆಟಗಾರರನ್ನು ತಂಡ ಸೇರ್ಪಡೆ ಮಾಡಿಕೊಂಡ ಬಳಿಕ, ಪರ್ಸ್‌ನಲ್ಲಿ ಕೇವಲ 1.90 ಕೋಟಿ ರೂ. ಮಾತ್ರ ಉಳಿದಿದೆ.

ಇದು ಮುಂದಿನ ಹರಾಜು ಅಥವಾ ತುರ್ತು ಬದಲಾವಣೆಗಳ ವೇಳೆ RCBಗೆ ಸವಾಲಾಗುವ ಸಾಧ್ಯತೆಯೂ ಇದೆ.

ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ, RCB ನಿರ್ವಹಣೆಯು ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಮಯಾಂಕ್ ಅಗರ್ವಾಲ್ (Mayank Agarwal) , ಮನೋಜ್ ಭಂಡಗೆ, ಸ್ವಾಸ್ತಿಕ್ ಚಿಕಾರ, ಮೋಹಿತ್ ರಾಥಿ, ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone) ಮತ್ತು ಲುಂಗಿ ಎನ್‌ಗಿಡಿ ಸೇರಿದಂತೆ ಆರು ಆಟಗಾರರನ್ನು ಬಿಡುಗಡೆ ಮಾಡಲಾಗಿದೆ.

ಈ ನಿರ್ಧಾರಗಳು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿವೆ.

ಮತ್ತೊಂದೆಡೆ, ವೆಂಕಟೇಶ್ ಅಯ್ಯರ್ ಜೊತೆಗೆ ಜೇಕಬ್ ಡಫಿ (2 ಕೋಟಿ ರೂ.), ಸಾತ್ವಿಕ್ ದೇಶ್ವಾಲ್ (30 ಲಕ್ಷ ರೂ.) ಮತ್ತು ಮಂಗೇಶ್ ಯಾದವ್ (30 ಲಕ್ಷ ರೂ.) ಅವರನ್ನು ಹರಾಜಿನಲ್ಲಿ ಖರೀದಿಸುವ ಮೂಲಕ ತಂಡದ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗಿದೆ.

ಐಪಿಎಲ್‌ 2026ಕ್ಕೆ RCB ತಂಡ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ನೋಡಿದರೆ, ಅನುಭವ ಮತ್ತು ಯುವ ಶಕ್ತಿಯ ಸಮನ್ವಯ ಸ್ಪಷ್ಟವಾಗಿ ಕಾಣಿಸುತ್ತದೆ. ವಿ

ರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್, ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಇವರೊಂದಿಗೆ ಯುವ ಪ್ರತಿಭೆಗಳು ಸೇರಿರುವುದು RCBಗೆ ಬಲ ನೀಡುವ ಸಾಧ್ಯತೆ ಇದೆ.

ಇದನ್ನು ಓದಿ : https://vijayatimes.com/post-office-td-scheme/
Tags: AuctionbengaluruCricketIPLrcb

Related News

ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ
Vijaya Time

ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ

January 10, 2026
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ
Vijaya Time

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ

January 7, 2026
ಒಂದು ದಿನಕ್ಕೆ ಬಳಸುವ ಹಣಕ್ಕೂ ಕಾನೂನಿದೆ: RBI ಮತ್ತು ಆದಾಯ ತೆರಿಗೆ ನಿಯಮಗಳ ಸಂಪೂರ್ಣ ಮಾಹಿತಿ
Vijaya Time

ಒಂದು ದಿನಕ್ಕೆ ಬಳಸುವ ಹಣಕ್ಕೂ ಕಾನೂನಿದೆ: RBI ಮತ್ತು ಆದಾಯ ತೆರಿಗೆ ನಿಯಮಗಳ ಸಂಪೂರ್ಣ ಮಾಹಿತಿ

January 7, 2026
ಹೆಚ್ಚುತ್ತಿರುವ ಸೈಬರ್ ಅಪರಾಧ: ಆರು ವರ್ಷಗಳಲ್ಲಿ ₹52,976 ಕೋಟಿಗೂ ಅಧಿಕ ವಂಚನೆ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ
Vijaya Time

ಹೆಚ್ಚುತ್ತಿರುವ ಸೈಬರ್ ಅಪರಾಧ: ಆರು ವರ್ಷಗಳಲ್ಲಿ ₹52,976 ಕೋಟಿಗೂ ಅಧಿಕ ವಂಚನೆ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ

January 5, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.