- RCB ಫ್ಯಾನ್ಸ್‌ಗಾಗಿ ಸಿಹಿ ಸುದ್ದಿ: IPL 2025 ಪಂದ್ಯಗಳು (ipl matches in bangalore stadium) ಬೆಂಗಳೂರಲ್ಲಿ ನಡೆಯಲಿದೆ
- ಸುರಕ್ಷತಾ ಕಠಿಣ ಕ್ರಮ ಜಾರಿಗೆ ಭರವಸೆ ನೀಡಿದ ಡಿಸಿಎಂ
- ಕ್ರೀಡಾಂಗಣದ ಸುರಕ್ಷತಾ ಸುಧಾರಣೆ, ಜನಸಂದಣಿ ನಿಯಂತ್ರಣ ಕ್ರಮ ಹಾಗೂ ಭವಿಷ್ಯದಲ್ಲಿ ಹೊಸ ದೊಡ್ಡ ಸ್ಟೇಡಿಯಂ ನಿರ್ಮಾಣದ ಯೋಜನೆ ಮುಂದಿಟ್ಟ ಡಿಕೆಶಿ
Bengaluru: ಬೆಂಗಳೂರಿನ ಕ್ರಿಕೆಟ್ ವಲಯ, ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಲ್ಲಿ (ipl matches in bangalore stadium) ಕಳೆದ ಕೆಲವು ತಿಂಗಳುಗಳಿಂದ ಆತಂಕ ಮತ್ತು ನಿರೀಕ್ಷೆ ಎರಡೂ ಜೊತೆಯಾಗಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಘಟನೆಯ ಬಳಿಕ, ಮುಂದಿನ IPL ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವ
ಸಾಧ್ಯತೆಗಳ ಬಗ್ಗೆ ಗಟ್ಟಿಯಾಗಿ ಚರ್ಚೆಗಳು ನಡೆದವು. ಆದರೆ ಇದೀಗ ಆ ಚಿಂತೆ ದೂರವಾಗಿದೆ.

ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ (D.K.Shivakumar) ಸ್ಪಷ್ಟಪಡಿಸಿರುವಂತೆ, ಚಿನ್ನಸ್ವಾಮಿ ಕ್ರೀಡಾಂಗಣದಿಂದ IPL ಪಂದ್ಯಗಳನ್ನು ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ.
ಬೆಂಗಳೂರಿನ ಗೌರವ, ರಾಜ್ಯದ ಹೆಮ್ಮೆ ಮತ್ತು ಭಾರತ ಕ್ರಿಕೆಟ್‌ನ ಪ್ರಮುಖ ನೆಲೆ ಎಂಬ ಕಾರಣಕ್ಕೆ, (ipl matches in bangalore stadium) ಅಗತ್ಯ ಕ್ರಮಗಳನ್ನು ಕೈಗೊಂಡು ಪಂದ್ಯಗಳನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ ಎಂದು ಅವರು ಘೋಷಿಸಿದ್ದಾರೆ.
ಇದು RCB ಅಭಿಮಾನಿಗಳಿಗೆ ದೊಡ್ಡ ಭರವಸೆ ಮಾತ್ರವಲ್ಲ, ನಗರಕ್ಕೆ ಮತ್ತೊಮ್ಮೆ ಕ್ರಿಕೆಟ್ (Cricket) ಹಬ್ಬದ ಸಂಭ್ರಮ ತಂದುಕೊಟ್ಟಂತಾಗಿದೆ.
IPL 2024ರಲ್ಲಿ RCB ಮೊದಲ ಬಾರಿಗೆ 18 ವರ್ಷಗಳ ನಿರೀಕ್ಷೆಯನ್ನು ಮುಗಿಸಿ ಟ್ರೋಫಿ (Trophy) ಗೆದ್ದಾಗ ರಾಜ್ಯಾದ್ಯಂತ ಸಂಭ್ರಮ ಮತ್ತು ಉತ್ಸಾಹದ ಅಲೆ ಹರಡಿತ್ತು.
ಜಯೋತ್ಸವದ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ವೀಕ್ಷಕರ ದಟ್ಟಣೆಯಲ್ಲಿ ಕಾಲ್ತುಳಿತದ ದುರಂತ ಸಂಭವಿಸಿ 11 ಜನರು ಸಾವಿಗೀಡಾದ ಘಟನೆ ಎಲ್ಲರನ್ನೂ ಕಂಗೆಡಿಸಿತು.
ಈ ದುರಂತದ ನಂತರ, 2025ರ IPL (19ನೇ ಸೀಸನ್) ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿ ಕೇಳಿಬಂದವು.
ಸಾವಿರಾರು ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದರು.
ಆದರೆ ಡಿಸಿಎಂ ಡಿಕೆಶಿ ಅಭಿಮಾನಿಗಳ ಮನದಾಳದ ಚಿಂತೆಯನ್ನು ನೇರವಾಗಿ ಪರಿಹರಿಸಿ, ಚಿನ್ನಸ್ವಾಮಿ ನಮ್ಮ ರಾಜ್ಯದ ಗೌರವ.
ಪಂದ್ಯಗಳು ಇಲ್ಲಿಂದ ಹೋಗುವುದಿಲ್ಲ,ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾನೂನು ಚೌಕಟ್ಟಿನಡಿಯಲ್ಲಿ ಜನಸಂದಣಿ ನಿಯಂತ್ರಣ, ಪ್ರವೇಶ–ನಿರ್ಗಮನ ವ್ಯವಸ್ಥೆ, ಭದ್ರತಾ ಕ್ರಮಗಳ ಬಲಪಡಿಸುವತ್ತ ಸರ್ಕಾರ ಮತ್ತು KSCA ಕೈ ಜೋಡಿಸಲಿದೆ ಎಂದು ಅವರು ತಿಳಿಸಿದರು.
ಇನ್ನು ನಗರದ ಮಧ್ಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣವು ದಶಕಗಳಿಂದ ಕರ್ನಾಟಕ ಕ್ರಿಕೆಟ್‌ನ ಮೂಲ ಕೇಂದ್ರವಾಗಿದ್ದು, ಸಾವಿರಾರು ಅಭಿಮಾನಿಗಳ ಭಾವನೆಗಳೊಂದಿಗೆ ಬೆಸೆದುಕೊಂಡಿದೆ.
ಆದರೆ ಅದರ ಗಾತ್ರ ಹಾಗೂ ಸುತ್ತಮುತ್ತಲಿನ ರಸ್ತೆ ಅಗಲದ ಸಮಸ್ಯೆ, ಸಂಚಾರ ದಟ್ಟಣೆ, ಪಾರ್ಕಿಂಗ್ (Parking) ತೊಂದರೆಗಳು ಹಲವು ವರ್ಷಗಳಿಂದ ಮುಂದುವರಿಯುತ್ತಿವೆ.
ಜೂನ್ 4ರ ದುರಂತಕ್ಕೂ ಇದೇ ಕಾರಣಗಳಲ್ಲಿ ಕೆಲವು ಪ್ರಮುಖ ಕಾರಣಗಳಾಗಿದ್ದವು.
ಈ ಹಿನ್ನೆಲೆಯಲ್ಲಿ ಡಿಕೆಶಿ ಮಾತನಾಡುತ್ತಾ, ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ಮುಂದುವರಿಸುವದಕ್ಕೆ ಸ್ಥಳಾಂತರವಿಲ್ಲದ ಖಚಿತತೆ
ನೀಡಿದಂತೆಯೇ, ಪರ್ಯಾಯವಾಗಿ ಹೊಸದಾಗಿ ದೊಡ್ಡ ಸಾಮರ್ಥ್ಯದ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆಯನ್ನೂ ಘೋಷಿಸಿದ್ದಾರೆ.
ಬೆಂಗಳೂರು ಹಾಗೂ ಕರ್ನಾಟಕ ದೇಶದ ಕ್ರಿಕೆಟ್ ನಕ್ಷೆಯಲ್ಲಿ ಮತ್ತಷ್ಟು ಬಲವಾಗಿ ನಿಲ್ಲಬೇಕಾದರೆ, ವಿಶ್ವಮಟ್ಟದ ದೊಡ್ಡ ಸ್ಟೇಡಿಯಂ
ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಇದು ಭವಿಷ್ಯದಲ್ಲಿ IPL, ICC ಪಂದ್ಯಗಳು ಮತ್ತು ಇತರ ಕ್ರೀಡಾ ಈವೆಂಟ್‌ಗಳನ್ನು ಆಕರ್ಷಿಸಲು ಸಹಕಾರಿಯಾಗಿದೆ.
ಕ್ರಿಕೆಟ್ ಪ್ರೇಮಿಗಳು ಈ ನಿರ್ಧಾರವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ.
RCB ಅಭಿಮಾನಿಗಳಿಗೆ IPL ಎಂದರೆ ಕೇವಲ ಟೂರ್ನಿಯಲ್ಲ ಅದೊಂದು ಎಮೋಷನಲ್ ಎನ್ನುವಂತಾಗಿದೆ.
ಹಾಗಾಗಿ ಇದೀಗ ಎಲ್ಲರ ದೃಷ್ಟಿ 2025ರ IPL ಸೀಸನ್‌ತ್ತ ತಿರುಗಿದೆ.
ಇದನ್ನು ಓದಿ : ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ: 40 ಸೆಕೆಂಡ್‌ನಲ್ಲಿ 25 ಜನ ಸಾವು