Bangalore : ಇಂಡಿಯನ್ ಪ್ರೀಮಿಯರ್ ಲೀಗ್ 2023 (Indian Premier League 2023) ಅತ್ಯಂತ ರೋಚಕ ಘಟ್ಟದತ್ತ ಸಾಗುತ್ತಿದೆ. ಅಭಿಮಾನಿಗಳು ತುದಿಗಾಲಿನಲ್ಲಿ (IPL2023 RCB vs DC) ನಿಲ್ಲುವಂತೆ ಪ್ರತಿಯೊಂದು ಪಂದ್ಯಗಳೂ ರೋಚಕವಾಗಿ ನಡೆಯುತ್ತಿವೆ.
ನಾಳೆ ( ಏ.14) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಂಡಾಂಗಣದಲ್ಲಿ (Chinnaswamy Stadium) ಅತ್ಯಂತ ರೋಚಕ ಪಂದ್ಯ ನಡೆಯಲಿದೆ. ಐಪಿಲ್‌ನ ( ಏ.14) ಬಹುನಿರೀಕ್ಷಿತ ಪಂದ್ಯವನ್ನು ಆಯೋಜಿಸಲಾಗಿದೆ.
ನಾಳೆಯ ಹೈವೋಲ್ಟೇಜ್ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore team) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಅನ್ನು ಎದುರಿಸಲಿದೆ.
ಡೆಲ್ಲಿ ವಿರುದ್ದದ ಕುತೂಹಲಕಾರಿ ಪಂದ್ಯಕ್ಕೆ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿಆರ್‍ಸಿಬಿ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಚಿನ್ನಸ್ವಾಮಿಯಲ್ಲಿ ಫಾಫ್ ಪಡೆ ಬ್ಯಾಟಿಂಗ್-ಬೌಲಿಂಗ್ ಪ್ಯ್ರಾಕ್ಟೀಸ್ ನಡೆಸುತ್ತಿದ್ದಾರೆ.
ಆರ್‍ಸಿಬಿ ತಂಡವು ಪ್ರತಿ ಬಾರಿಯಂತೆ ಈ ಸಲವೂ ಕೂಡ ಗೋ ಗ್ರೀನ್ ಅಭಿಯಾನಕ್ಕೆ ಬೆಂಬಲ ನೀಡುತ್ತಿರುವುದರಿಂದ ಹಸಿರು (IPL2023 RCB vs DC) ಜೆರ್ಸಿಯಲ್ಲಿ ಪಂದ್ಯವನ್ನು ಆಡಲಿದೆ.
ಇನ್ನು 2023 ರ ಐಪಿಎಲ್ (IPL 2023) ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವು 3 ಪಂದ್ಯಗಳಲ್ಲಿ, 2 ಪಂದ್ಯ ಸೋತಿದ್ದು ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ.
ಇದನ್ನೂ ಓದಿ : https://vijayatimes.com/a-woman-filed-a-case-against-a-dog/
ಆರ್‍ಸಿಬಿ ತಂಡಕ್ಕೆ ಈ ಮೂರೂ ಪಂದ್ಯಗಳಲ್ಲಿ ಬೌಲಿಂಗ್ ಒಂದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ಈಗ ಸ್ಟಾರ್ ಸ್ಪಿನ್ನರ್ ಆಗಿರುವ ಶ್ರೀಲಂಕಾದ ವನಿಂದು ಹಸರಂಗ ಆರ್‍ಸಿಬಿ ತಂಡಕ್ಕೆ ಸೇರಿಕೊಂಡಿರುವುದರಿಂದ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ.
ತವರು ಕ್ರೀಡಾಂಗಣದಲ್ಲಿ ಪಂದ್ಯಾಟ ಆಡುತ್ತಿರುವ ಆರ್‌ಸಿಬಿಯ (RCB) ಗೆಲುವಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಐಪಿಎಲ್ ತಂಡಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್‌ಸಿಬಿ.
ಆರ್‌ಸಿಬಿ ಅಭಿಮಾನಿಗಳು ಪ್ರತಿ ಬಾರಿಯೂ ಕಪ್ ನಮ್ದೆ ಅನ್ನೋ ಟ್ಯಾಗ್ ಲೈನ್ ಮೂಲಕ ಅಭಿಯಾನ ಮಾಡ್ತಾ ಆರ್‌ಸಿಬಿ ತಂಡದ ಗೆಲುವಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಹಾಗಾಗಿ ಆರ್‌ಸಿಬಿ ತಂಡಕ್ಕೆ ಈ ಪಂದ್ಯಾಟ ಗೆಲ್ಲಲೇ ಬೇಕು.
ಇದನ್ನೂ ಓದಿ : https://vijayatimes.com/tweets-of-state-congress/
ಯಾಕಂದ್ರೆ ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವುದರಿಂದ ಈ ಪಂದ್ಯವನ್ನು ಗೆದ್ದು ಅಭಿಮಾನಿಗಳ ಉತ್ಸಾಹವನ್ನು ಕಾಯ್ದುಕೊಳ್ಳಬೇಕಾಗಿದೆ.
ಹಾಗಾಗಿ ನಾಳೆ ನಡೆಯಲಿರುವ ಆರ್‌ಸಿಬಿ ಈ ನಾಲ್ಕನೇ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
ಅಭಿಮಾನಿಗಳ ನಿರೀಕ್ಷೆಯನ್ನು ನಿಜಮಾಡಲು ಆರ್‌ಸಿಬಿ ತಂಡ ಇವತ್ತು ಚಿನ್ನಸ್ವಾಮಿಯಲ್ಲಿ ಕಠಿಣ ಅಭ್ಯಾಸ ನಡೆಸಿತು.
ಅಭ್ಯಾಸದ ವೇಳೆ ವನಿಂದು ಹಸರಂಗ ಭರ್ಜರಿಯಾಗಿ ಬೌಲಿಂಗ್ ಅಭ್ಯಾಸ ನಡೆಸಿದರು. ಜೊತೆಗೆ ವಿರಾಟ್ ಕೊಹ್ಲಿ ಕೂಡ ನೆಟ್‌ನಲ್ಲಿ ಬೆವರು ಹರಿಸಿದರು. ಇವರ ಬೆವರಿಗೆ ನಾಳೆ ಬೆಲೆ ಸಿಗುತ್ತೆ ಅನ್ನೋದನ್ನು ಆಶಾ ಭಾವನೆಯಿಂದ ಕಾಯುತ್ತಿದ್ದಾರೆ ಆರ್‌ಸಿಬಿ ಅಭಿಮಾನಿಗಳು.