Visit Channel

ಹೆಡ್ ಫೋನ್ ಬಳಸುವವರು ಎಚ್ಚರ ; ಹೆಚ್ಚು ಬಳಕೆಯಿಂದ ಉಂಟಾಗುವ ತೊಂದರೆಗಳು ಹೀಗಿದೆ

Earphones

ಈಗಂತೂ ಇಯರ್ ಫೋನ್(Ear Phone) ಅಥವಾ ಹೆಡ್ ಫೋನ್(Headphone) ಎನ್ನುವುದು ಪ್ರತಿಯೊಬ್ಬರ ಕಿವಿಯಲ್ಲೂ ಕೂಡ ಇದ್ದೇ ಇರುತ್ತದೆ. ಕೆಲವರಂತೂ ಇಯರ್ ಫೋನ್ ಇಲ್ಲದೆ ಹೊರಗಡೆ ಕಾಲಿಡುವುದಿಲ್ಲ, ಇನ್ನು ಕೆಲವರು 24 ಗಂಟೆಗಳ ಕಾಲ ಕೂಡ ಈ ಹೆಡ್ ಫೋನ್ ಹಾಕಿರುತ್ತಾರೆ. ಆದರೆ ಇದನ್ನು ಬಳಸುವ ಶೇಕಡ 99 ರಷ್ಟು ಜನರಿಗೆ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ. ನೀವು ಹೆಡ್ ಫೋನ್ ಬಳಕೆ ಮಾಡುತ್ತಿದ್ರೆ 90 ಡೆಸಿಬಲ್ ಗಿಂತ ಹೆಚ್ಚಿನ ಸೌಂಡ್ ಅನ್ನು ಕೇಳಲೇಬೇಡಿ.

Health

ಇದು ನಮ್ಮ ಕಿವಿ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಒಂದು ವೇಳೆ 100 ಡೆಸಿಬಲ್(Decibal) ಗಿಂತ ಹೆಚ್ಚಿನ ಸೌಂಡ್ ಅನ್ನು ಹೆಡ್ ಫೋನ ಮೂಲಕ 15 ನಿಮಿಷಗಳಿಗಿಂತ ಹೆಚ್ಚು ಕೇಳಿದರೆ ಕಿವಿ ಮಂದವಾಗುತ್ತಾ ಹೋಗುತ್ತದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಹೆಡ್ ಫೋನ್ ಮೂಲಕ ಸಾಂಗ್ ಕೇಳ್ತಾ ಇದ್ರೆ ಜೋರಾದ ಶಬ್ದವನ್ನು ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಕಿವಿಗಳಲ್ಲಿ ಬ್ಯಾಕ್ಟೀರಿಯಗಳಿಂದ ಉಂಟಾಗುವ ಸೋಂಕುಗಳ ಬಗ್ಗೆ ನೀವು ಕೇಳಿದ್ದೀರಾ ಎನಿಸುತ್ತದೆ.

ಕಿವಿಗಳ ಸೋಂಕು ಸಾಧಾರಣವಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಆದರೆ ಒಂದು ವಿಚಾರ ನಿಮಗೆ ಗೊತ್ತಿರಲಿ, ಹೆಡ್ ಫೋನ್ ಮತ್ತು ಇಯರ್ ಫೋನ್ ಗಳನ್ನು ಬೇರೆ ಯಾರಿಗಾದರೂ ಬಳಕೆ ಮಾಡಲು ಕೊಟ್ಟರೆ ಅವರಿಗೆ ಕಿವಿಯ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಉಪಯೋಗಿಸುವ ಇಯರ್ ಫೋನ್ ಅಥವಾ ಹೆಡ್ ಫೋನ್, ನಿಮ್ಮಿಂದ ಬೇರೆಯವರಿಗೆ ಸೋಂಕನ್ನು ಹರಡಿಸುತ್ತದೆ ಮತ್ತು ಅಷ್ಟೇ ಸುಲಭವಾಗಿ ಬೇರೆಯವರಿಂದಲೂ ನಿಮಗೆ ಸೋಂಕನ್ನು ಹರಡಿಸುವ ಸಾಧ್ಯತೆ ಇರುತ್ತದೆ.

Headphone


ಇಯರ್ಫೋನ್ ಮುಂಭಾಗದ ರಬ್ಬರ್ ಅಥವಾ ಸ್ಪಾಂಜ್ ಅನ್ನು ಕನಿಷ್ಠ ತಿಂಗಳಿಗೆ ಒಂದು ಬಾರಿ ಬದಲಿಸಿ. ಇದರಿಂದ ಸೋಂಕು ಹರಡುವ ಸಾಧ್ಯತೆಯನ್ನು ತಪ್ಪಿಸಬಹುದು. ನಿಮಗೆ ಹೆಚ್ಚಿನ ಶಬ್ದದ ಮ್ಯೂಸಿಕ್ ಕೇಳುವ ಅಭ್ಯಾಸವಿದೆಯಾ ಒಂದು ವೇಳೆ ಇದ್ದರೆ ಅದನ್ನು ಇವತ್ತೇ ಬಿಟ್ಟು ಬಿಡಿ ಇದರಿಂದ ಆಯಾಸವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಹಾರ್ಮೋನ್ ಉತ್ಪತ್ತಿ ಹೆಚ್ಚಾಗುತ್ತದೆ, ರಕ್ತದೊತ್ತಡ ಹಾಗೂ ಪಲ್ಸ್ ರೇಟನ್ನು ಹೆಚ್ಚು ಮಾಡುತ್ತದೆ. ಕೆಲವರಿಗೆ ಹೆಚ್ಚು ಇಯರ್ ಫೋನ್ ಬಳಸಿದರೆ ಕಿವಿ ನೋವು ಬರುತ್ತದೆ,

ಕಿವಿಯಲ್ಲಿ ಒಂದು ರೀತಿಯ ಶಬ್ದ ಬಡಿದಂತಾಗುತ್ತದೆ. ಇಯರ್ ಫೋನ್ ಮತ್ತು ಹೆಡ್ ಫೋನ್ ಗಳನ್ನು ನೀವು ಬಳಸುವಾಗ ಎಲೆಕ್ಟ್ರಿಕಲ್ ಮ್ಯಾಗ್ನೆಟ್ ಉತ್ಪತ್ತಿಯಾಗುವುದೇ ಇದಕ್ಕೆ ಕಾರಣವಾಗಿರುತ್ತದೆ.

  • ಪಚಿತ್ರ ಸಚಿನ್

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.