Do you forget to eat breakfast in the morning? Health problems are developing.
Bengaluru: ಇತ್ತೀಚೆಗೆ ಕೆಲಸದ ಒತ್ತಡದಲ್ಲಿ ಮುಂಜಾನೆಯ ಉಪಹಾರವನ್ನು (Breakfast) ಸ್ಕಿಪ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಒಂದು ವೇಳೆ ನೀವು ಈ ತಪ್ಪು ಮಾಡುತ್ತಿದ್ದರೆ ತಪ್ಪದೇ ಈ ಸ್ಟೋರಿಯನ್ನು ಓದಿ. ಬೆಳಗಿನ ಉಪಹಾರ ತ್ಯಜಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಚನಕ್ರಿಯ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ವೈದ್ಯರು ಹೇಳುವ ಪ್ರಕಾರ ಒಂದು ತಿಂಗಳವರೆಗೆ ನೀವು ಬೆಳಗಿನ ಉಪಹಾರವನ್ನು ಕಡೆಗಣಿಸಿದರೆ ಹಲವು ಸಮಸ್ಯೆಗಳು ಕಾಡುತ್ತವೆ. ಬೆಳಗಿನ ಹಿತಮಿತ ಉಪಹಾರದಿಂದ ದೇಹದಲ್ಲಿ ಇನ್ಸೂಲಿನ್ ಸೆನ್ಸಿಟಿವಿ (Insulin Sensitivity) ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯೂ ಸರಿಯಾಗಿ ನಡೆಯುತ್ತದೆ ಒಂದು ವೇಳೆ ನೀವು ಬೆಳಗಿನ ಉಪಹಾರವನ್ನು ತ್ಯಜಿಸಿದಲ್ಲಿ, ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಅದು ನಿಮಗೆ ಸಕ್ಕರೆ ಕಾಯಿಲೆಯನ್ನು ತಂದೊಡ್ಡುವ ಅಪಾಯವಿರುತ್ತದೆ ಎಂದು ಹೇಳಿದ್ದಾರೆ.
ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುವುದರಿಂದ ಕೇವಲ ಮಧುಮೇಹ ಸಮಸ್ಯೆ ಮಾತ್ರವಲ್ಲ, ನಿಮ್ಮ ತೂಕದ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ. ಇದು ನಿಮ್ಮ ದೇಹದ ತೂಕದಲ್ಲಿ ವಿಪರೀತ ಪ್ರಮಾಣ ಏರಿಕೆಯಾಗಿ ಬೊಜ್ಜು ಬೆಳೆಸುವ ಸಾಧ್ಯತೆ ಇದೆಯೆಂದು ಡಾ ಶ್ರೀನಿವಾಸನ್ ಒಬೆಸಿಟಿ ರೀಸರ್ಚ್ ಅಂಡ್ ಕ್ಲಿನಿಕಲ್ ಪ್ರಾಕ್ಟಿಸ್ನ (Obesity Research and Clinical Practice) ಅಧ್ಯಯನವೊಂದರಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ.
ಇದು ದೇಹದ ತೂಕ ಹೆಚ್ಚಿಸುವುದು ಹಾಗೂ ತೂಕ ಇಳಿಸುವುದಕ್ಕೂ ಎರಡರ ಮೇಲೂ ಪರಿಣಾಮ ಬೀರುವಂತದ್ದು. ಇಷ್ಟು ಮಾತ್ರವಲ್ಲ ದೀರ್ಘಕಾಲದವರೆಗೆ ಕಾಡುವಂತ ಆರೋಗ್ಯಕರ ಸಮಸ್ಯೆಗಳಿಗೂ ಆಹ್ವಾನ ನೀಡಿದಂತೆ ಎಂದು ಡಾಕ್ಟರ್ (Doctor) ಹೇಳುತ್ತಾರೆ. ಹಾಗಾಗಿ ಆದಷ್ಟು ಬೆಳಗಿನ ಉಪಹಾರವನ್ನು ಬಿಡದೇ ಹಿತಮಿತವಾಗಿ ಸೇವಿಸುವುದು ತುಂಬಾ ಉತ್ತಮ
Is It Good to Eat Breakfast in The Morning Kannada
Bengaluru: Lately it has become common to skip breakfast due to the pressure of work. If you are making this mistake then read this story without fail. Skipping breakfast creates health related problems. Experts say that this causes digestive problems.
Doctors say that if you skip breakfast for a month, many problems will arise. A hearty breakfast improves insulin sensitivity in the body. Metabolism also works properly if you skip breakfast, there is a possibility of increased glucose levels in the body, which may lead to diabetes.
Skipping breakfast not only affects diabetes but also affects your weight. Dr. Srinivasan mentioned in a study of Obesity Research and Clinical Practice that this is an excessive increase in your body weight and may lead to obesity.
It affects both weight gain and weight loss. Not only this, it also invites chronic health problems, says the doctor. So it is very good to eat in moderation without skipping breakfast as much as possible