Visit Channel

ಶಿಫ್ಟ್‌ ಮುಗಿಯಿತೆಂದು ಅರ್ಧದಲ್ಲೇ ವಿಮಾನ ನಿಲ್ಲಿಸಿದ ಪೈಲೆಟ್

flight

ಇಸ್ಲಾಮಾಬಾದ್: ಯಾವುದೇ ಕೆಲಸಕ್ಕಾದರೂ ನಿಷ್ಠೆ ಅನ್ನುವುದು ಇರುತ್ತೆ ಆದರೆ ಇಲ್ಲೋಬ್ಬ ಪೈಲೆಟ್‌ ತನ್ನ ಶಿಫ್ಟ್‌ ಮುಗಿಯಿತೆಂದು ಅರ್ಧದಲ್ಲೇ ವಿಮಾನ ಪ್ರಯಾಣವನ್ನು ನಿಲ್ಲಿಸಿದ ಘಟನೆ ಪಾಕಿಸ್ತಾನದ ಇಸ್ಲಮಾಬಾದ್‌ನಲ್ಲಿ ನಡೆದಿದೆ.  

ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಪೈಲಟ್ ತುರ್ತು ಭೂ ಸ್ಪರ್ಶ ಮಾಡಿದ್ದ ಪಿಕೆ 9754 ವಿಮಾನವನ್ನು ತನ್ನ ಶಿಫ್ಟ್ ಮುಗಿಯಿತೆಂದು ಮತ್ತೆ ಹಾರಿಸದೆ ಅರ್ಧದಲ್ಲಿಯೇ ನಿಲ್ಲಿಸಿದ್ದಾನೆ.

ಹವಾಮಾನ ವೈಪರಿತ್ಯದಿಂದಾಗಿ ರಿಯಾದ್‌ನಿಂದ ಹೊರಟು ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿದ್ದ ವಿಮಾನವು ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹವಾಮಾನ ಸರಿಯಾದ ಮೇಲೆ ವಿಮಾನ ಹಾರಾಟಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದ್ದರೂ ಪೈಲಟ್ ವಿಮಾನವನ್ನು ಹಾರಿಸದೆ ದಿನದ ತನ್ನ ಶಿಫ್ಟ್ ಮುಗಿದಿದೆ ಎಂಬ ಕಾರಣ ನೀಡಿದ್ದಾನೆ. ಪೈಲಟ್‌ನ ಈ ಕ್ರಮದಿಂದ ಪ್ರಯಾಣಿಕರು ವಿಮಾನದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಆದರೆ ಏನೇ ಮಾಡಿದರೂ ಪೈಲಟ್ ಮುಂದುವರಿಯಲು ಇಷ್ಟಪಡಲಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.