Israel’s Deadly Attack on Lebanon: Thousands of Pagers Explode, 2,800 Injured!
Beirut (Lebanon): ಮಂಗಳವಾರ ಲೆಬನಾನ್ನಾದ್ಯಂತ ಇರುವ ಹಿಜ್ಬುಲ್ಲಾ ಉಗ್ರರು ಸಂವಹನ ನಡೆಸಲು ಬಳಸುವ ಪೇಜರ್ಗಳು ಸ್ಫೋಟಗೊಂಡು ಒಂಬತ್ತು ಮಂದಿ ಸಾವನ್ನಪ್ಪಿದ್ದರೆ, 2800ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಮತ್ತು ಲೆಬನಾನಿನ (Lebanon) ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈ ಪೇಜರ್ಗಳ ಸ್ಫೋಟವನ್ನು “ಇಸ್ರೇಲಿ ಆಕ್ರಮಣ” ಎಂದು ಲೆಬನಾನ್ ಸರ್ಕಾರ ಖಂಡಿಸುತ್ತದೆ ಎಂದು ಮಾಹಿತಿ ಸಚಿವ ಜಿಯಾದ್ ಮಕಾರಿ (Ziad Makari) ಹೇಳಿದ್ದಾರೆ. ಪೇಜರ್ ಸ್ಫೋಟಗಳಿಗೆ ಇಸ್ರೇಲ್ ಕಾರಣವೆಂದು ಹಿಜ್ಬುಲ್ಲಾ ಆರೋಪಿಸಿದ್ದು, ” ಇಸ್ರೇಲ್ (Israel) ನ್ಯಾಯಯುತ ಶಿಕ್ಷೆಯನ್ನು ಪಡೆಯುತ್ತದೆ” ಎಂದು ಎಚ್ಚರಿಕೆ ನೀಡಿದೆ. ಹೆಜ್ಬೊಲ್ಲಾ ಅಧಿಕಾರಿಯೊಬ್ಬರು, ಈ ಸ್ಥಿತಿಯ ಕುರಿತು ಮಾತನಾಡುತ್ತಾ, ಪೇಜರ್ಗಳ ಸ್ಫೋಟವು ಇಸ್ರೇಲ್ನೊಂದಿಗೆ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ನಾವು ಅನುಭವಿಸಿದ “ದೊಡ್ಡ ಭದ್ರತಾ ಹಿನ್ನಡೆ” ಎಂದು ಹೇಳಿದ್ದಾರೆ.
ಇನ್ನು ಈ ಸ್ಫೋಟದಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ (Syed Hasan Nasrallah) ಗಾಯಗೊಂಡಿಲ್ಲ ಎಂದು ಗುಂಪು ಹೇಳಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 3:45 ರ ಸುಮಾರಿಗೆ ನಡೆದ ಆರಂಭಿಕ ಸ್ಫೋಟಗಳ ನಂತರ ಸರಣಿ ಸ್ಫೋಟಗಳು ಸುಮಾರು ಒಂದು ಗಂಟೆಯ ಕಾಲ ನಡೆಯಿತು. ಸಾಧನಗಳನ್ನು ಹೇಗೆ ಸ್ಫೋಟಿಸಲಾಗಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಲೆಬನಾನಿನ ವಿದೇಶಾಂಗ ಸಚಿವಾಲಯವು ಈ ಸ್ಫೋಟಗಳನ್ನು “ಅಪಾಯಕಾರಿ ಮತ್ತು ಉದ್ದೇಶಪೂರ್ವಕ ಇಸ್ರೇಲಿ ಆಕ್ರಮಣ” ಎಂದು ಹೇಳಿದೆ.
ಏನಿದು ಪೇಜರ್ :
ಮೊಬೈಲ್ (Mobile) ಫೋನ್ ಗಳಿಗಿಂತ ಮುಂಚೆ ಇದ್ದ ಸಂವಹನ ಉಪಕರಣ. ಇದನ್ನು ಈ ಹಿಂದೆ ಭಾರತದಲ್ಲಿಯೂ ಬಳಸಲಾಗುತ್ತಿತ್ತು. ಇದನ್ನೇ ಹೆಜ್ಬುಲ್ಲಾ ಸಂಘಟನೆಯ ಸಾವಿರಾರು ಉಗ್ರರು ತಮ್ಮ ದೈನಂದಿನ ಸಂವಹನಕ್ಕಾಗಿ ಬಳಸುತ್ತಾರೆ. ಅವರು ತಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಪೇಜರ್ಗಳು ಮಂಗಳವಾರ ಏಕಾಏಕಿ ಸ್ಪೋಟಗೊಂಡಿವೆ. ಕಳೆದ ಕೆಲ ದಿನಗಳಿಂದ ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಹೆಜ್ಬುಲ್ಲಾ ಸಂಘಟನೆಯ ಉಗ್ರರಿಗೆ ಇಸ್ರೇಲ್ ನಡೆಸಿರುವ ಈ ದಾಳಿಯಿಂದಾಗಿ ತೀವ್ರ ಹಿನ್ನಡೆಯುಂಟಾಗಿದೆ. ಇಡೀ ಸಂಘಟನೆಯ ಸಂವಹನ ಜಾಲವೇ ನಾಶವಾಗಿದೆ. ಆದರೆ ಇಸ್ರೇಲ್ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
Israel Attacks Lebanon News LIVE Kannada Trending
Beirut (Lebanon): Nine people were killed and more than 2,800 seriously injured when pagers used by Hezbollah militants across Lebanon exploded on Tuesday, security sources and Lebanon’s health minister said.
Information Minister Ziad Makari said the Lebanese government condemned the explosion of the pagers as an “Israeli aggression”. Hezbollah blamed Israel for the Pager blasts and warned that “Israel will receive a just punishment”. A Hezbollah official, speaking on the situation, said He said the detonation of the pagers was the “biggest security setback” we’ve experienced in the nearly year-long conflict with Israel.
Hezbollah chief Syed Hasan Nasrallah was not injured in the blast, the group said. The series of explosions lasted about an hour after the initial explosions at around 3:45pm local time. It is not clear at this time how the devices were detonated. Lebanese The Foreign Ministry called the explosions a “dangerous and deliberate Israeli aggression”.
What is a Pager:
A communication tool that existed before mobile phones. It was also used in India earlier. This is what thousands of Hezbollah militants use for their daily communication. The pagers he kept in his trouser pocket exploded on Tuesday. Because of this attack by Israel, there has been a severe setback for the militants of the Hezbollah organization, who have been continuously attacking Israel for the past few days. The communication network of the entire organization has been destroyed. But Israel has not claimed responsibility for the attack.