Israel declares full-scale war against Lebanon’s Hezbollah militants
Tel Aviv: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಲೆಬನಾನ್ನ ಹೆಜ್ಬುಲ್ಲಾ ಉಗ್ರರು ಮತ್ತು ಇಸ್ರೇಲ್ (Isreal) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಇಸ್ರೇಲ್ ಲೆಬನಾನ್ನ ಹೆಜ್ಬುಲ್ಲಾ ಉಗ್ರರ ವಿರುದ್ದ ಪೂರ್ಣ ಪ್ರಮಾಣದ ಯುದ್ದ ಘೋಷಣೆ ಮಾಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಹೆಜ್ಬಲ್ಲಾ ಉಗ್ರರ ವಿರುದ್ಧ ಇಸ್ರೇಲ್ ತನ್ನ “ಪೂರ್ಣ ಬಲದ” ದಾಳಿಗಳನ್ನು ಮುಂದುವರೆಸುತ್ತದೆ. ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡುವವರಿಗೆ ನಾವು ವಿಶ್ರಮಿಸುವುದಿಲ್ಲ ಎಂದು ಪುನರುಚ್ಚರಿಸಿದ್ದು, ಅಮೇರಿಕಾ ಮತ್ತು ಯುರೋಪಿಯನ್ ದೇಶಗಳು ನೀಡಿದ 21 ದಿನಗಳ ಕದನ ವಿರಾಮದ ಸಲಹೆಯನ್ನು ತಿರಸ್ಕರಿಸಿದ್ದಾರೆ.
ಹಿಜ್ಬೊಲ್ಲಾಹ್ ಡ್ರೋನ್ ಮುಖ್ಯಸ್ಥ ಹತ್ಯೆ : ನಿನ್ನೆ ಲೆಬನಾನ್ (Lebanon) ವಿವಿದೆಡೆ ವೈಮಾನಿಕ ದಾಳಿ ನಡೆಸಿರುವ ಇಸ್ರೇಲ್ ಹಿಜ್ಬೊಲ್ಲಾಹ್ ಡ್ರೋನ್ ಮುಖ್ಯಸ್ಥ ಕಮಾಂಡರ್ ಮೊಹಮ್ಮದ್ ಹುಸೇನ್ ಸುರೂರ್ ನನ್ನು ಹತ್ಯೆ ಮಾಡಿದೆ.
ಇಸ್ರೇಲ್-ಹೆಜ್ಬುಲ್ಲಾ ಸಂಘರ್ಷದ ಪ್ರಮುಖ ಬೆಳವಣಿಗೆಗಳು :
• ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು (Netanyahu) ಅವರು, ಹೆಜ್ಬೊಲ್ಲಾವನ್ನು ಗುರಿಯಾಗಿಸುವ ಇಸ್ರೇಲ್ನ ಬದ್ಧತೆಯನ್ನು ಪುನರುಚ್ಚರಿಸಿದರು. “ನಾವು ಪೂರ್ಣ ಬಲದಿಂದ ಹಿಜ್ಬುಲ್ಲಾ ಮೇಲಿನ ದಾಳಿಯನ್ನು ಮುಂದುವರಿಸುತ್ತಿದ್ದೇವೆ” ಎಂದು ಅವರು ಹೇಳಿದರು.
• ಸಾಮಾನ್ಯ ಸಭೆಯ ಸಭೆಯಲ್ಲಿ, ಲೆಬನಾನಿನ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಅವರು ತಕ್ಷಣದ ಕದನ ವಿರಾಮಕ್ಕಾಗಿ ಯುಎನ್ಗೆ ಮನವಿ ಮಾಡಿದರು, ಸಂಘರ್ಷ ಪರಿಸ್ಥಿತಿಯು ಲೆಬನಾನ್ನ “ಅಸ್ತಿತ್ವಕ್ಕೆ ಬೆದರಿಕೆ ಹಾಕುತ್ತಿದೆ” ಎಂದು ಎಚ್ಚರಿಸಿದ್ದಾರೆ.
• ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟು 200,000 ಜನರು ಸ್ಥಳಾಂತರಗೊಂಡಿದ್ದಾರೆ.
• ಯುದ್ಧಸಾಮಗ್ರಿ ಸಂಗ್ರಹಣಾ ಸೌಲಭ್ಯಗಳು ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳು ಸೇರಿದಂತೆ ಹಿಜ್ಬುಲ್ಲಾದ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ನ ಸೇನೆ ವಾಯುದಾಳಿಗಳನ್ನು ನಡೆಸುತ್ತಿದೆ.