New Delhi: ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದ್ದು, ಈ (Israel Embassy Blast Case) ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಸ್ರೇಲ್ (Israel)
ರಾಯಭಾರ ಕಚೇರಿಯು ಈ ಘಟನೆಯನ್ನು ದೃಢಪಡಿಸಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಸ್ಪೋಟದ ನಂತರ ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ,
ಭದ್ರತೆಯನ್ನು ಹೆಚ್ಚಿಸುವಂತೆ (Israel Embassy Blast Case) ಕೇಂದ್ರ ಗೃಹ ಇಲಾಖೆ, ರಾಜ್ಯಗಳಿಗೆ ಸೂಚನೆ ನೀಡಿದೆ.
ಇನ್ನು ಸ್ಫೋಟದ ಸ್ಥಳದ ಬಳಿಯಿರುವ ಸಿಸಿಟಿವಿಯಲ್ಲಿ (CCTV) ಇಬ್ಬರು ಶಂಕಿತರು ಸೆರೆಯಾಗಿದ್ದು, ಅವರ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ
ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಕ್ಯಾಮೆರಾಗಳ ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ. ಇನ್ನು ಇಸ್ರೇಲಿ ರಾಯಭಾರಿ ಕಚೇರಿಯ ರಾಯಭಾರಿಯನ್ನು ಉದ್ದೇಶಿಸಿ ಟೈಪ್ ಮಾಡಲಾದ ಪತ್ರವು
ಇಸ್ರೇಲಿ ಧ್ವಜದಲ್ಲಿ ಸುತ್ತಿದ್ದು ಸ್ಫೋಟದ ಸ್ಥಳದ ಬಳಿ ಪತ್ತೆಯಾಗಿದೆ.
ಇಂಗ್ಲಿಷ್ನಲ್ಲಿ ಬರೆಯಲಾಗಿರುವ ಪತ್ರವು ಗಾಜಾದಲ್ಲಿ ಇಸ್ರೇಲ್ನ ಕ್ರಮಗಳ ವಿರುದ್ದ ಇದು ನಮ್ಮ ‘ಸೇಡು’ ಎಂದು ಉಲ್ಲೇಖಿಸಿದ್ದು, “ಸರ್ ಅಲ್ಲಾ ರೆಸಿಸ್ಟೆನ್ಸ್” (Sir Allah Resistance) ಎಂದು ಗುರುತಿಸಿಕೊಳ್ಳುವ
ಗುಂಪು ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಚಾಣಕ್ಯಪುರಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಭಾರೀ ಸ್ಫೋಟ ಸಂಭವಿಸಿದೆ.
ಈ ಘಟನೆಯನ್ನು ಇಸ್ರೇಲ್ ರಾಯಭಾರ ಕಚೇರಿ ದೃಢಪಡಿಸಿದ್ದು (Explosion near Israel Embassy in Delhi), ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಸಂಜೆ 5:08 ರ ಸುಮಾರಿಗೆ ರಾಯಭಾರ
ಕಚೇರಿಯ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ ಎಂದು ನಾವು ಖಚಿತಪಡಿಸಬಹುದು. ದೆಹಲಿ ಪೊಲೀಸರು ಮತ್ತು ಭದ್ರತಾ ತಂಡವು ಪರಿಸ್ಥಿತಿಯನ್ನು ಇನ್ನೂ ತನಿಖೆ ನಡೆಸುತ್ತಿದೆ ಎಂದು ರಾಯಭಾರ
ಕಚೇರಿಯ ವಕ್ತಾರ ಗೈ ನಿರ್ (Guy Nir) ತಿಳಿಸಿದ್ದಾರೆ. ಈ ಘಟನೆಯಲ್ಲಿ ರಾಯಭಾರಿ ಕಚೇರಿಯ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ.
ಈ ಪ್ರದೇಶದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಪರಿಣತರು ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಕೆಲ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಸ್ಥಳದಲ್ಲಿ ಸುಟ್ಟ ಸ್ಫೋಟಕಗಳ
(Explosion) ಯಾವುದೇ ಕುರುಹುಗಳು ಕಂಡುಬಂದಿಲ್ಲ. ರಾಸಾಯನಿಕ ಸ್ಫೋಟವಾಗಿರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ ಭಯೋತ್ಪಾದನಾ
ವಿರೋಧಿ ತನಿಖಾ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ತಂಡವೂ ಸ್ಥಳವನ್ನು ಪರಿಶೀಲಿಸಿದೆ. ಸ್ಫೋಟದ ಕಾರಣವನ್ನು ತನಿಖೆ ಮಾಡಲು ಇಸ್ರೇಲಿ ಅಧಿಕಾರಿಗಳು
ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಹೇಳಿದೆ.
ಇದನ್ನು ಓದಿ: ಮಣಿಪುರದಿಂದ ಮುಂಬಯಿಗೆ ರಾಹುಲ್ ಗಾಂಧಿ ‘ಭಾರತ ನ್ಯಾಯ ಯಾತ್ರೆ’