Tel Aviv : ಅಮೇರಿಕಾದ ಮಧ್ಯಸ್ಥಿಕೆಯಲ್ಲಿ (US intervention) ಇಸ್ರೇಲ್ ಮತ್ತು ಲೆಬನಾನ್ (Israel and Lebanon) ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ಮೂಲಕ ಕಳೆದ 14 ತಿಂಗಳಿಂದ ನಡೆಯುತ್ತಿದ್ದ ಭೀಕರ ಯುದ್ದ ಕೊನೆಗೊಂಡಿದೆ.
ಅಕ್ಟೋಬರ್ 7, 2023 ರಂದು ಇಸ್ರೇಲ್ನ ಮೇಲೆ ಹಮಾಸ್ (Hamas over Israel) ಉಗ್ರ ಸಂಘಟನೆ ನಡೆಸಿದ ದಾಳಿಯ ನಂತರ ಇಸ್ರೇಲ್ ನಡೆಸಿದ ಪ್ರತಿದಾಳಿಗೆ (Counterattack by Israel) ಪ್ರತಿಯಾಗಿ ಲೆಬನಾನ್ ನಲ್ಲಿ ನೆಲೆಸಿರುವ ಹೆಲ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ದಾಳಿ (Attack on Israel) ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಸತತವಾಗಿ ಲೆಬನಾನ್ ಮೇಲೆ ಭೀಕರ ದಾಳಿ ನಡೆಸುತ್ತಿದೆ. ಲೆಬನಾನ್ ರಾಜಧಾನಿ ಬೈರುತ್ ಮತ್ತು ಅದರ ದಕ್ಷಿಣ ಉಪನಗರಗಳ (Beirut and its southern suburbs) ಮೇಲೆ ಇಸ್ರೇಲ್ ವಾಯುಸೇನೆ ಅತ್ಯಂತ ತೀವ್ರವಾದ ದಾ*ಗಳನ್ನು ನಡೆಸಿದೆ.
ಲೆಜ್ಬುಲ್ಲಾ ಉಗ್ರ*ಮಿಗಳು (Hezbollah militants) ಒಪ್ಪಂದವನ್ನು ಉಲ್ಲಂಘಿಸಿದರೆ ಇಸ್ರೇಲ್ ಹೆಜ್ಬೊಲ್ಲಾ ಮೇಲೆ ದಾಳಿ ಮಾಡುವ ಹಕ್ಕನ್ನು ಹೊಂದಿದೆ ಎಂದು ಇಸ್ರೇಲ್ ತಿಳಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಇದು ಒಪ್ಪಂದದ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಲೆಬನಾನ್ ಮತ್ತು ಹೆಜ್ಬೊಲ್ಲಾ ಅಧಿಕಾರಿಗಳು (Hezbollah officials) ಅದನ್ನು ತಿರಸ್ಕರಿಸಿದ್ದಾರೆ. ಕದನ ವಿರಾಮ ಒಪ್ಪಂದವನ್ನು ನೆತನ್ಯಾಹು ಮಂಡಿಸಿದ ನಂತರ ಇಸ್ರೇಲ್ನ ಭದ್ರತಾ ಕ್ಯಾಬಿನೆಟ್ ಅನುಮೋದಿಸಿದೆ ಎಂದು ಅವರ ಕಚೇರಿ ತಿಳಿಸಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್, ವಾಷಿಂಗ್ಟನ್ನಲ್ಲಿ ಮಾತನಾಡುತ್ತಾ, ಒಪ್ಪಂದವನ್ನು “ಒಳ್ಳೆಯ ಸುದ್ದಿ” (“good news”) ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು (Netanyahu) ಅವರು ದೂರದರ್ಶನದ ಭಾಷಣದ ನಂತರ ಕ್ಯಾಬಿನೆಟ್ ಮಂತ್ರಿಗಳಿಗೆ (Cabinet Ministers) ಕದನ ವಿರಾಮದ ಪ್ರಸ್ತಾಪವನ್ನು ಮಂಡಿಸಿದರು, ಇದರಲ್ಲಿ ಅವರು ಪ್ರದೇಶದಾದ್ಯಂತ ಇಸ್ರೇಲ್ನ ಶತ್ರುಗಳ (Israel’s enemies) ವಿರುದ್ಧ ಸಾಧನೆಗಳ ಸರಣಿಯನ್ನು ಪಟ್ಟಿ ಮಾಡಿದರು. ಹೆಜ್ಬೊಲ್ಲಾದೊಂದಿಗಿನ ಕದನ ವಿರಾಮವು ಗಾಜಾದಲ್ಲಿ ಹಮಾಸ್ ಅನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ ಮತ್ತು ಇಸ್ರೇಲ್ ತನ್ನ ಪ್ರಮುಖ ಶತ್ರುವಾದ ಇರಾನ್ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಆದರೆ ಒಂದು ವೇಳೆ ಹೆಜ್ಬುಲ್ಲಾ ಒಪ್ಪಂದವನ್ನು ಮುರಿದರೆ ನಾವು ಮತ್ತೆ ದಾಳಿ ಮಾಡುತ್ತೇವೆ” ಎಂದು ಅವರು ಹೇಳಿದರು.